ಕೊರೊನಾ ಲಸಿಕೆ; ಗರ್ಭಿಣಿಯರ ಆರೋಗ್ಯದ ಕುರಿತು ಎಚ್ಚರಿಕೆ ಕೊಟ್ಟ ಕೇಂದ್ರ

ನವದೆಹಲಿ,

ಜುಲೈ
09:
ಕೊರೊನಾ
ಸೋಂಕಿನ
ವಿರುದ್ಧ
ಗರ್ಭಿಣಿಯರು
ಲಸಿಕೆ
ಹಾಕಿಸಿಕೊಳ್ಳಬೇಕಾದ
ಅವಶ್ಯಕತೆಯನ್ನು
ಒತ್ತಿ
ಹೇಳಿರುವ
ಕೇಂದ್ರ
ಸರ್ಕಾರ,
ಲಸಿಕೆ
ಪಡೆದುಕೊಳ್ಳದಿದ್ದರೆ,
ಗರ್ಭಿಣಿಯರಲ್ಲಿ
ಸೋಂಕು
ಗಂಭೀರ
ಸ್ವರೂಪ
ಪಡೆಯಬಹುದು
ಎಂದು
ಎಚ್ಚರಿಕೆ
ನೀಡಿದೆ.

id="toptextpromo">
id='are-slot-1'
class='oiad
oi-axt
oiadv'>

ಶುಕ್ರವಾರ

ಸಂಬಂಧ
ನೀತಿ
ಆಯೋಗದ
ಸದಸ್ಯ
ವಿ.ಕೆ.
ಪೌಲ್
ಮಾಹಿತಿ
ನೀಡಿದ್ದು,
"ಗರ್ಭಿಣಿಯರು
ಯಾವುದೇ
ಹಿಂಜರಿಕೆಯಿಲ್ಲದೇ
ಕೊರೊನಾ
ಲಸಿಕೆ
ಪಡೆದುಕೊಳ್ಳಬೇಕು.
ಎಲ್ಲಾ
ವೈಜ್ಞಾನಿಕ
ಅಧ್ಯಯನಗಳು
ಗರ್ಭಿಣಿಯರು
ಲಸಿಕೆ
ಪಡೆದುಕೊಳ್ಳಬೇಕು
ಎಂಬುದನ್ನು
ಸೂಚಿಸಿವೆ.
ತಮ್ಮ
ಆರೋಗ್ಯ
ಹಾಗೂ
ಗರ್ಭದಲ್ಲಿರುವ
ಮಗುವನ್ನು
ಸೋಂಕಿನಿಂದ
ರಕ್ಷಿಸಿಕೊಳ್ಳಲು
ಗರ್ಭಿಣಿಯರು
ಲಸಿಕೆಯನ್ನು
ಪಡೆದುಕೊಳ್ಳಲೇಬೇಕಿದೆ"
ಎಂದು
ವಿವರಿಸಿದರು.
ಮುಂದೆ
ಓದಿ...

id='are-slot-2'
class='oiad
oi-axt
oiadv'>

"ಎರಡು ಜೀವಗಳ ವಿಚಾರವಾದ್ದರಿಂದ ಮುಂಜಾಗ್ರತೆ ವಹಿಸಿ"

"ಇತರರಂತೆ ಗರ್ಭಿಣಿಯರ ಮೇಲೂ ಕೊರೊನಾ ಸೋಂಕು ಪರಿಣಾಮ ಬೀರುತ್ತದೆ. ಆದರೆ ಗರ್ಭಿಣಿಯರಲ್ಲಿ ಈ ಸೋಂಕು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಇದೆ. ಗರ್ಭಾವಸ್ಥೆಯಲ್ಲಿ ದೇಹಸ್ಥಿತಿ ಭಿನ್ನವಿರುವುದರಿಂದ ಸೋಂಕು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಇದೆ" ಎಂದು ಪೌಲ್ ತಿಳಿಸಿದ್ದಾರೆ. ಸೋಂಕು ಗಂಭೀರ ಸ್ವರೂಪ ಪಡೆಯುತ್ತದೋ ಇಲ್ಲವೋ ಎಂಬುದು ಬೇರೆ ವಿಚಾರ. ಆದರೆ ಇದು ಎರಡು ಜೀವಗಳ ವಿಚಾರವಾಗಿರುವುದರಿಂದ ಮುಂಜಾಗ್ರತೆ ವಹಿಸಲೇಬೇಕು ಎಂದು ಎಚ್ಚರಿಸಿದ್ದಾರೆ.

"ಅವಧಿಗೆ ಮುನ್ನ ಹೆರಿಗೆಯಾಗುವ ಸಾಧ್ಯತೆಯಿದೆ"

ಕೆಲವು ಗರ್ಭಿಣಿಯರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡರೆ ಅವಧಿಗೆ ಮುನ್ನವೇ ಹೆರಿಗೆಯಾಗುವ ಅಪಾಯ ಇದೆ. ಹೀಗಾದರೆ ತಾಯಿ ಅಥವಾ ಅವಧಿಗೆ ಮುನ್ನ ಜನಸಿದ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದಾಗಿದೆ. ಕೊರೊನಾ ಲಸಿಕೆ ಇಂಥ ಸಮಸ್ಯೆಗಳನ್ನು ತಡೆಯಲು ನೆರವಾಗಲಿದೆ ಎಂದು ಹೇಳಿದ್ದಾರೆ.

 ಭಾರತದಲ್ಲಿನ ಎಲ್ಲಾ ಲಸಿಕೆಗಳೂ ಗರ್ಭಿಣಿಯರಿಗೆ ಸುರಕ್ಷಿತ

ಭಾರತದಲ್ಲಿನ ಎಲ್ಲಾ ಲಸಿಕೆಗಳೂ ಗರ್ಭಿಣಿಯರಿಗೆ ಸುರಕ್ಷಿತ

ಈಚೆಗಷ್ಟೆ ಕೇಂದ್ರ ಸರ್ಕಾರ ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡುವ ಸಂಬಂಧ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಭಾರತದಲ್ಲಿ ಸದ್ಯ ಲಭ್ಯವಿರುವ ಕೋವ್ಯಾಕ್ಸಿನ್, ಕೋವಿಶೀಲ್ಡ್ ಹಾಗೂ ಸ್ಪುಟ್ನಿಕ್ ವಿ ಲಸಿಕೆಗಳು ಗರ್ಭಿಣಿಯರಿಗೆ ಸುರಕ್ಷಿತವಾಗಿದ್ದು, ಲಸಿಕೆ ಪಡೆದುಕೊಳ್ಳಿ ಎಂದು ಕರೆ ನೀಡಿತ್ತು. ಬಹುಪಾಲು ಗರ್ಭಿಣಿಯರಿಗೆ ಲಕ್ಷಣರಹಿತ ಸೋಂಕು ಕಾಣಿಸಿಕೊಳ್ಳಬಹುದು ಅಥವಾ ಸಣ್ಣ ಪ್ರಮಾಣದಲ್ಲಿ ಸೋಂಕಿನ ಲಕ್ಷಣಗಳು ಗೋಚರಿಸಬಹುದು. ನಿರ್ಲಕ್ಷಿಸಿದರೆ ಮಗುವಿನ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಮುನ್ನೆಚ್ಚರಿಕೆ ವಹಿಸಿ ಲಸಿಕೆ ಪಡೆದುಕೊಳ್ಳುವುದು ಅವಶ್ಯಕ ಎಂದು ಹೇಳಿತ್ತು.

ಇದುವರೆಗಿನ ಪ್ರಕರಣಗಳನ್ನು ಗಮನಿಸಿದಾಗ, ಸೋಂಕಿಗೆ ತುತ್ತಾದ ಗರ್ಭಿಣಿಯರಲ್ಲಿ 80% ಮಹಿಳೆಯರಿಗೆ ತೀವ್ರತರ ಸಮಸ್ಯೆಗಳು ಕಂಡುಬಂದಿಲ್ಲ. ಆಸ್ಪತ್ರೆಗೆ ದಾಖಲಾಗದೇ ಗುಣಮುಖರಾದವರ ಸಂಖ್ಯೆ ಹೆಚ್ಚಿದೆ. ಕೆಲವು ಪ್ರಕರಣಗಳು ಗಂಭೀರ ಮಟ್ಟ ತಲುಪಿವೆ. ಹೀಗಾಗಿ ಆರೋಗ್ಯದಲ್ಲಿ ಅಲ್ಪ ಏರುಪೇರು ಕಂಡರೂ ಆಸ್ಪತ್ರೆಗೆ ದಾಖಲಾಗುವುದು ಅವಶ್ಯಕವಾಗುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ, 35 ವರ್ಷ ಮೇಲ್ಪಟ್ಟವರು ಜಾಗೃತವಾಗಿರಬೇಕು ಎಂದು ಸಲಹೆ ನೀಡಿತ್ತು.

 ಗರ್ಭಿಣಿಯರಿಗೆ ಲಸಿಕೆ ಅಗತ್ಯ ಎತ್ತಿಹಿಡಿದ ಅಧ್ಯಯನಗಳು

ಗರ್ಭಿಣಿಯರಿಗೆ ಲಸಿಕೆ ಅಗತ್ಯ ಎತ್ತಿಹಿಡಿದ ಅಧ್ಯಯನಗಳು

"ಜನವರಿ 16ರಿಂದ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಆರಂಭಿಸಲಾಗಿದೆ. ಆದರೆ ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡುವ ಸಂಬಂಧ ಸ್ಪಷ್ಟತೆ ದೊರೆತಿರಲಿಲ್ಲ. ಹೀಗಾಗಿ ಆರಂಭದಲ್ಲಿ ಅವರಿಗೆ ಲಸಿಕೆ ನೀಡಲು ಅನುಮತಿ ನೀಡಿರಲಿಲ್ಲ. ಈ ಕುರಿತು ಸಾಕಷ್ಟು ವೈಜ್ಞಾನಿಕ ಅಧ್ಯಯನಗಳನ್ನು ನಡೆಸಲಾಗಿದೆ. ಪ್ರಯೋಗಗಳು ನಡೆದಿವೆ. ಈ ಎಲ್ಲಾ ಅಧ್ಯಯನಗಳು, ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡಬೇಕಾದ ಅಗತ್ಯವನ್ನು ಎತ್ತಿಹಿಡಿದಿವೆ. ಹೀಗಾಗಿ ಆದ್ಯತೆಯಲ್ಲಿ ಲಸಿಕೆ ನೀಡಲಾಗುತ್ತದೆ" ಎಂದು ಪೌಲ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+