ದಂತೇವಾಡ: ನಕ್ಸಲರ ಅಟ್ಟಹಾಸ, ಬಿಜೆಪಿ ಶಾಸಕನ ಹತ್ಯೆ
ದಂತೇವಾಡ, ಏಪ್ರಿಲ್ 09: ದಂತೇವಾಡದಲ್ಲಿ ಮತ್ತೆ ನಕ್ಸಲರು ತಮ್ಮ ಅಟ್ಟಹಾಸ ಮೆರೆದಿದ್ದಾರೆ, ಬಿಜೆಪಿ ಶಾಸಕರ ವಾಹನದ ಮೇಲೆ ಗುಂಡಿನ ಹಾಗೂ ಬಾಂಬ್ ದಾಳಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ದಾಳಿಯಲ್ಲಿ ಸ್ಥಳೀಯ ಬಿಜೆಪಿ ಶಾಸಕ ಭೀಮಾ ಮಾಂಡೆವಿ ಅಸುನೀಗಿದ್ದಾರೆ, ಅಲ್ಲದೆ ಅವರ ಭದ್ರತೆ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ಸಹ ದಾಳಿಯಲ್ಲಿ ಅಸುನೀಗಿದ್ದಾರೆ.
ಶಾಸಕರ ವಾಹನದ ಮೇಲೆ ಮೊದಲು ಗುಂಡಿನ ದಾಳಿ ನಡೆಸಿದ್ದು, ಆ ನಂತರ ಬಾಂಬ್ ನಿಂದ ಸ್ಪೋಟಿಸಿದ್ದಾರೆ, ಸ್ಪೋಟದ ತೀವ್ರತೆಗೆ ಶಾಸಕರ ವಾಹನ ಛಿದ್ರಗೊಂಡಿದೆ. ಈ ದಾಳಿಯಲ್ಲಿ ಶಾಸಕ ಭೀಮಾ ಮಾಂಡೆವಿ, ಅವರ ವಾಹನದ ಡ್ರೈವರ್ ಮತ್ತು ಮೂವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಚತ್ತೀಸ್‌ಗಡ ರಾಜ್ಯದ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಿದ್ದರು, ಕಳೆದ ಚುನಾವಣೆಯಲ್ಲಿ ಶಾಸಕ ಭೀಮಾ ಮಾಂಡವಿ, ಕಾಂಗ್ರೆಸ್ ಶಾಸಕ ಮಹೇಂದ್ರ ಕರ್ಮಾರನ್ನು ಸೋಲಿಸಿದ್ದರು.
ದಂತೇವಾಡದಲ್ಲಿ ನಕ್ಸಲರ ಪ್ರಾಬಲ್ಯ ಹೆಚ್ಚಿಗಿದ್ದು, ಕೆಲವು ದಿನಗಳ ಹಿಂದೆ ಸಹ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದರು. ಪದೇ-ಪದೇ ಇಲ್ಲಿ ನಕ್ಸಲ್ ದಾಳಿಗಳು ಆಗುತ್ತಲೇ ಇವೆ.












Click it and Unblock the Notifications