ಮಲೇಷ್ಯಾ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿರುವ ಜಾಕಿರ್
ಇಡಿ ವತಿಯಿಂದ ಬಂಧನ ರಹಿತ ವಾರೆಂಟ್ ಜಾರಿಯಾಗಿದ್ದರೂ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ವಿವಾದಾತ್ಮಕ ಇಸ್ಲಾ ಧರ್ಮ ಭೋಧಕ ಜಾಕಿರ್ ನಾಯಕ್ ಈಗ ಮಲೇಷ್ಯಾದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆಂದು ಹೇಳಲಾಗಿದೆ.
ನವದೆಹಲಿ, ಮೇ 31: ಹಣಕಾಸು ಅವ್ಯವಹಾರದ ಆರೋಪ ಹೊತ್ತು, ಭಾರತದಿಂದ ಓಡಿ ಹೋಗಿ, ಬಂಧನ ರಹಿತ ವಾರೆಂಟ್ ಜಾರಿಯಾಗಿದ್ದರೂ ವಿದೇಶದಲ್ಲಿ ಅಡಗಿರುವ ಇಸ್ಲಾಂ ಧರ್ಮ ಬೋಧಕ ಜಾಕಿರ್ ನಾಯಕ್ ಈಗ ಮಲೇಷ್ಯಾದ ಪೌರತ್ವ ಪಡೆಯಲು ಅರ್ಜಿ ಗುಜರಾಯಿಸಿದ್ದಾನೆಂಬ ಸುದ್ದಿ ಹರಿದಾಡುತ್ತಿದೆ.
ಇಲ್ಲಿ ಈತನ ವಿರುದ್ಧ ಜಾರಿಯಾಗಿರುವ ಬಂಧನ ರಹಿತ ವಾರೆಂಟ್ ಅನ್ನು ಇಟ್ಟುಕೊಂಡು ಈತನ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ಈತ ಬಂಧನಕ್ಕಾಗಿ ಹಲವಾರು ತಂತ್ರಗಾರಿಕೆಯನ್ನು ರೂಪಿಸುತ್ತಿದೆ.[ಜಾಕಿರ್ ನಾಯಕ್ ವಿರುದ್ಧ ಜಾಮೀನು ರಹಿತ ವಾರೆಂಟ್]
ಈ ಹಿನ್ನೆಲೆಯಲ್ಲಿ ಅದು ಇಂಟರ್ ಪೊಲ್ ಗೆ ಮನವಿ ಸಲ್ಲಿಸಿ, ಜಾಕಿರ್ ನಾಯಕ್ ವಿರುದ್ಧ ರೆಡ್ ಕಾರ್ಡನ್ ನೋಟಿಸ್ (ಆರ್ ಸಿ ಎನ್ - ಅಂತಾರಾಷ್ಟ್ರೀಯ ಬಂಧನ ವಾರೆಂಟ್) ಜಾರಿಗೊಳಿಸಲು ಕೋರಿದೆ.

ಇದೆಲ್ಲದರ ನಡುವೆಯೇ ಆತ ಮಲೇಷ್ಯಾದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿರುವುದು, ಭಾರತೀಯ ತನಿಖಾ ಸಂಸ್ಥೆಗಳ ಕೈಗೆ ಸಿಗದಿರಲು ಆತ ಹೊಸ ತಂತ್ರಗಾರಿಕೆಯನ್ನು ರೂಪಿಸುತ್ತಿದ್ದಾನೆಯೇ ಎಂಬ ಅನುಮಾನ ಹುಟ್ಟಿಹಾಕಿದೆ.
ಮಲೇಷ್ಯಾದಲ್ಲಿ ಶಾಶ್ವತ ವಿಳಾಸವೊಂದನ್ನು ಈಗಾಗಲೇ ಮಾಡಿಕೊಂಡಿರುವ ಆತ ತಾನು ಅಲ್ಲಿ ಶಾಶ್ವತವಾಗಿ ನೆಲೆಯೂರುವ ಬಗ್ಗೆ ಅಲ್ಲಿನ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಅರ್ಜಿಯ ಜತೆಗೆ ಮಾಡಿಕೊಟ್ಟಿದ್ದಾನೆನ್ನಲಾಗಿದೆ. ಆದರೆ, ಮಲೇಷ್ಯಾ ಸರ್ಕಾರ ಈತನ ಅರ್ಜಿಯನ್ನು ಇನ್ನೂ ಪರಿಗಣಿಸಿಲ್ಲ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications