Rain Alert: ಕೇರಳದ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್: ಶಬರಿಮಲೆಯಲ್ಲಿ ಭಾರಿ ಮಳೆ

ಕೇರಳದಲ್ಲಿ ಈಶಾನ್ಯ ಮಾನ್ಸೂನ್ ಚುರುಕುಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದೆ. ತಿರುವನಂತಪುರಂ, ಇಡುಕ್ಕಿ ಮತ್ತು ಪತ್ತನಂತಿಟ್ಟದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ವರದಿಯಲ್ಲಿ ಹೇಳಿದೆ.

ಕಣ್ಣೂರು ಮತ್ತು ಕಾಸರಗೋಡು ಹೊರತುಪಡಿಸಿ ಉಳಿದ ಜಿಲ್ಲೆಗಳಿಗೂ ಐಎಂಡಿ ಹಳದಿ ಎಚ್ಚರಿಕೆ ನೀಡಿದೆ. ಶಬರಿಮಲೆ ದೇವಸ್ಥಾನ ಇರುವ ಪತ್ತನಂತಿಟ್ಟದಲ್ಲಿ ಮಂಗಳವಾರದಿಂದ ಭಾರೀ ಮಳೆಯಾಗುತ್ತಿದೆ. ಹವಮಾನಾ ಇಲಾಖೆಯ ವರದಿಗಳ ಪ್ರಕಾರ, ಜಿಲ್ಲೆಯಲ್ಲಿ ಗುರುವಾರವೂ ಭಾರೀ ಮಳೆ ಮುಂದುವರಿಯಲಿದೆ.

Continued Rainfall at Sabarimala Prompts Orange Alert in Three Kerala Districts

ಮಂಗಳವಾರ ಸುರಿದ ಧಾರಾಕಾರ ಮಳೆಯಿಂದಾಗಿ ಶಬರಿಮಲೆ ಯಾತ್ರಾರ್ಥಿಗಳು ಪರದಾಡುವಂತಾಯಿತು. ನಂತರ ದೇಗುಲಕ್ಕೆ ಪಾದಯಾತ್ರೆ ಮಾಡುವವರು, ಭೂಮಿ ಜಾರುತ್ತಿರುವ ಕಾರಣ ಮತ್ತಷ್ಟು ತೊಂದರೆ ಅನುಭವಿಸಿದರು. ನೂರಾರು ಯಾತ್ರಿಕರು ದೇಗುಲಕ್ಕೆ ಭೇಟಿ ನೀಡುವಲ್ಲಿ ಯಶಸ್ವಿಯಾದರು, ಅಲ್ಲಿ ಎರಡು ತಿಂಗಳ ವಾರ್ಷಿಕ ಸಂಕ್ರಾಂತಿ ದರ್ಶನ ಅವಧಿ ಪ್ರಾರಂಭವಾಗಿದೆ.

ಪತ್ತನಂತಿಟ್ಟ ಮತ್ತು ತಿರುವನಂತಪುರಂನಲ್ಲಿ ಬುಧವಾರ ಹಲವು ಸ್ಥಳಗಳಲ್ಲಿ ಜಲಾವೃತವಾಗಿದೆ. ತಮಿಳುನಾಡಿನಲ್ಲಿ ಚಂಡಮಾರುತದ ಪ್ರಭಾವದಿಂದ ಕೇರಳದಲ್ಲಿ ಈಶಾನ್ಯ ಮಾನ್ಸೂನ್ ಮತ್ತೆ ಸಕ್ರಿಯವಾಯಿತು.

ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ

ಮಂಗಳವಾರ ಪಾಲಕ್ಕಾಡ್ ಜಿಲ್ಲೆಯ ತ್ರಿತಾಲದಲ್ಲಿ 9 ಸೆಂ.ಮೀ ಭಾರೀ ಮಳೆಯಾಗಿದೆ. ಚಿತ್ತೂರು ಮತ್ತು ಪಟ್ಟಾಂಬಿ (ಪಾಲಕ್ಕಾಡ್ ಜಿಲ್ಲೆಯಲ್ಲಿ) ಮತ್ತು ಕಲಮಸ್ಸೆರಿ (ಎರ್ನಾಕುಲಂ ಜಿಲ್ಲೆ) ತಲಾ 8 ಸೆಂ.ಮೀ ಮಳೆಯಾಗಿದೆ. ಕುರುಡಮನ್ನಿಲ್ (ಪತ್ತನಂತಿಟ್ಟ ಜಿಲ್ಲೆ), ಕುನ್ನಂಕುಲಂ (ತ್ರಿಶೂರ್ ಜಿಲ್ಲೆ), ಸೀತಾಥೋಡ್ (ಪತ್ತನಂತಿಟ್ಟ ಜಿಲ್ಲೆ) ಮತ್ತು ಕುನ್ನಂಕುಲಂ (ತ್ರಿಶೂರ್ ಜಿಲ್ಲೆ) ತಲಾ 7 ಸೆಂ.ಮೀ ಭಾರೀ ಮಳೆಯಾಗಿದೆ.

24 ಗಂಟೆಗಳ ಅವಧಿಯಲ್ಲಿ 12 ಸೆಂ.ಮೀ ನಿಂದ 20 ಸೆಂ.ಮೀ ವರೆಗೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದರೆ ಆರೆಂಜ್ ಅಲರ್ಟ್ ನೀಡಲಾಗುತ್ತದೆ ಮತ್ತು 6 ರಿಂದ 11 ಸೆಂ.ಮೀ ನಡುವೆ ಮಳೆಯಾಗುವುದಿದ್ದರೆ ಹಳದಿ ಅಲರ್ಟ್ ನೀಡಲಾಗುತ್ತದೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಿಡಿಲಿನ ಬಗ್ಗೆ ಎಚ್ಚರಿಕೆ ನೀಡಿದೆ.

ಕರ್ನಾಟಕದಲ್ಲಿ ಭಾರಿ ಮಳೆ

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಕೂಡ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬುಧವಾರ ಬೆಂಗಳೂರಿನ ಹಲವು ಭಾಗಗಳಲ್ಲಿ ಬುಧವಾರ ಭಾರಿ ಮಳೆಯಾಗಿದ್ದು ಹಲವು ಕಡೆಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದವು.

ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಚದುರಿದಂತೆ ವ್ಯಾಪಕ ಮಳೆ ಸುರಿಯುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+