• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಲ ಮಾಡಿಯಾದರೂ ತುಪ್ಪ ತಿಂದರೆ, ದೇಶದ ಆರ್ಥಿಕತೆ ವೃದ್ದಿಯಾಗುತ್ತದೆಯಂತೆ!

|

ಮುಂಬೈ, ಏಪ್ರಿಲ್ 30: ದೇಶದಲ್ಲಿ ಆರ್ಥಿಕತೆ ಸುಧಾರಿಸಿಕೊಳ್ಳಲು ಏನು ಕ್ರಮ ತೆಗೆದುಕೊಳ್ಳಬೇಕು ಎನ್ನುವ ವಿಚಾರದಲ್ಲಿ ಸ್ಮಾಲ್ ಬಿಸಿನೆಸ್ ಫಿನ್ ಕ್ರೆಡಿಟ್ (ಎಸ್ ಬಿ ಎಫ್ ಸಿ) ಸಂಸ್ಥೆಯ ಎಂಡಿ ಅಸೀಂ ಧ್ರುವ್ ಸಲಹೆಯೊಂದನ್ನು ನೀಡಿದ್ದಾರೆ.

ಅಸೀಂ ಅವರ ಪ್ರಕಾರ, "ಜನರು ತಮಗೆ ಬೇಕಾದ ವಸ್ತುಗಳನ್ನು ಮಾತ್ರ ಖರೀದಿಸುತ್ತಿರುವುದರಿಂದ ಜಾಗತಿಕ ಆರ್ಥಿಕತೆ ಸುಧಾರಣೆಯನ್ನು ಕಾಣುತ್ತಿಲ್ಲ" ಎಂದು ಹೇಳಿದ್ದಾರೆ.

ಲಾಕ್ ಡೌನ್: ಮಹತ್ವದ ಅಭಿಪ್ರಾಯ ವ್ಯಕ್ತ ಪಡಿಸಿದ ಇನ್ಫೋಸಿಸ್ ನಾರಾಯಣಮೂರ್ತಿ

"ನನ್ನ ಹೇಳಿಕೆ ತಮಾಷೆಯಾಗಿ ಕಾಣಿಸಬಹುದು. ಪ್ಯಾಕೇಜಿಂಗ್, ಫುಡ್ ಹಿಡಿದು ಯಾವುದೇ ಸಂಸ್ಥೆಯ ಉದ್ಯಮಿಗಳಿಗೆ ಮರ್ಸಿಡಿಸ್ ಬೆಂಜ್, ರೋಲೆಕ್ಸ್ ವಾಚ್, ಬರ್ಕಿನ್ ಬ್ಯಾಗ್ಸ್ ಬೇಕಾಗಿರುವುದಿಲ್ಲ. ಆದರೂ ಅದನ್ನು ಅವರು ಖರೀದಿಸುತ್ತಾರೆ".

"ಇಂತಹ ಸಂಸ್ಥೆಗಳು ಜಾಹೀರಾತುಗಳನ್ನು ನೀಡಿ ಜನಸಾಮಾನ್ಯರ ಗಮನ ಸೆಳೆಯುತ್ತದೆ. ಜೊತೆಗೆ, ವಸ್ತುಗಳನ್ನು ಖರೀದಿಸಲು ಸಾಲದ ವ್ಯವಸ್ಥೆಯನ್ನೂ ಕಾರು ಉದ್ಯಮಗಳು ಮಾಡುತ್ತವೆ".

"ಹೆಚ್ಚು ಕಾರುಗಳು ರಸ್ತೆಗಿಳಿದರೆ ವಾಯು ಮಾಲಿನ್ಯ ಜಾಸ್ತಿಯಾಗುತ್ತದೆ. ಸಾಲ ಮಾಡಿಯಾದರೂ ಜನ ಅದನ್ನು ಖರೀದಿಸುತ್ತಾರೆ, ಇದರಿಂದ ಜನರ ಇಎಂಐ ಒತ್ತಡ ಹೆಚ್ಚಾಗುತ್ತದೆ. ಆದರೂ, ಇದು ಆರ್ಥಿಕ ಸುಧಾರಣೆಗೆ ಪೂರಕವಾಗುತ್ತದೆ"ಎಂದು ಅಸೀಂ ಹೇಳಿದ್ದಾರೆ.

ಆರ್ಥಿಕ ಪರಿಸ್ಥಿತಿ ಬಗ್ಗೆ ಟಾಟಾ ಟ್ವೀಟ್, ಸತ್ಯಾಸತ್ಯತೆ ಬಹಿರಂಗ

"ನಮ್ಮಲ್ಲಿ ಹಣಕಾಸಿನ ವ್ಯವಸ್ಥೆ ಇಲ್ಲದಿದ್ದರೂ, ನಮಗೆ ಬೇಡವಾದ ವಸ್ತುಗಳಿದ್ದರೂ, ಅದನ್ನು ನಾವು ಖರೀದಿಸಿದರೆ, ದೇಶದ ಆರ್ಥಿಕತೆ ಸುಧಾರಣೆಗೆ ಇದು ಸಹಾಯವಾಗುತ್ತದೆ" ಎನ್ನುವ ಅಭಿಪ್ರಾಯವನ್ನು ಅಸೀಂ ಧ್ರುವ್ ಹೇಳಿದ್ದಾರೆ.

English summary
Economy Growth Will Happen Only If People Should Buy Things They Do Not Need And They Do Not Have Money,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X