ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತ ಪ್ಲೇ ಮಾಡಿ: ಸರ್ಕಾರ
ನವದೆಹಲಿ, ಡಿಸೆಂಬರ್ 28: ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳು ತಮ್ಮ ಎಲ್ಲಾ ವಿಮಾನಗಳಲ್ಲಿ ಮತ್ತು ವಿಮಾನ ನಿಲ್ದಾಣದ ಟರ್ಮಿನಲ್‌ಗಳಲ್ಲಿ ಭಾರತೀಯ ಸಂಗೀತವನ್ನು ನುಡಿಸುವುದನ್ನು ಪರಿಗಣಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ತಿಳಿಸಿದೆ. ಭಾರತೀಯ ಸಾಂಪ್ರದಾಯಿಕ ಸಂಗೀತ ಎಷ್ಟು ಶ್ರೀಮಂತವಾಗಿದೆಯೋ, ಅದು ವೈವಿಧ್ಯತೆಯಿಂದ ಕೂಡಿದೆ ಎಂದು ವಿಮಾನಯಾನ ಸಚಿವಾಲಯ ಹೇಳುತ್ತದೆ. ಪ್ರಪಂಚದಾದ್ಯಂತ ವಿಮಾನಯಾನ ಸಂಸ್ಥೆಗಳು ತಮ್ಮ ಸಂಪ್ರದಾಯಗಳ ಪ್ರಕಾರ ತಮ್ಮ ಸಂಗೀತವನ್ನು ಪ್ರಚಾರ ಮಾಡುತ್ತವೆ. ಆದ್ದರಿಂದ ಭಾರತೀಯ ವಿಮಾನಯಾನ ಸಂಸ್ಥೆಗಳಲ್ಲಿ ಭಾರತೀಯ ಸಂಗೀತವನ್ನು ನುಡಿಸುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಡಿಸೆಂಬರ್ 23 ರಂದು ಇಂಡಿಯನ್ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಶನ್ಸ್ (ICCR) ಭಾರತೀಯ ಏರ್‌ಲೈನ್ಸ್‌ನಲ್ಲಿ ಭಾರತೀಯ ಸಂಗೀತವನ್ನು ಉತ್ತೇಜಿಸಲು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಒತ್ತಾಯಿಸಿತು. ಈ ಬಗ್ಗೆ ಜ್ಯೋತಿರಾದಿತ್ಯ ಸಿಂಧಿಯಾ ಅವರು ದೇಶದ ಖ್ಯಾತ ಕಲಾವಿದರು ಮತ್ತು ಸಂಗೀತಗಾರರ ಜೊತೆ ಸಭೆ ನಡೆಸಿದರು, ಅದರಲ್ಲಿ ಸಲಹೆಗಳನ್ನು ಸ್ವೀಕರಿಸಿದರು.
ವಿಮಾನಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತವನ್ನು ಪ್ಲೇ ಮಾಡಿ: ಸರ್ಕಾರ
ನಾಗರಿಕ ವಿಮಾನಯಾನ ಸಚಿವಾಲಯವು ಎಲ್ಲಾ ಏರ್‌ಲೈನ್‌ಗಳು ಮತ್ತು ವಿಮಾನ ನಿಲ್ದಾಣಗಳಿಗೆ ಪತ್ರ ಬರೆದಿದ್ದು, ಪ್ರಪಂಚದಾದ್ಯಂತದ ಹೆಚ್ಚಿನ ವಿಮಾನಯಾನ ಸಂಸ್ಥೆಗಳು ತಮ್ಮ ದೇಶದ ಅತ್ಯುತ್ತಮ ಸಂಗೀತವನ್ನು ಪ್ಲೇ ಮಾಡಿ ಎಂದು ತಿಳಿಸಿವೆ. ಅಮೇರಿಕನ್ ಏರ್‌ಲೈನ್‌ಗಳು ಜಾಝ್ ಸಂಗೀತವನ್ನು ನುಡಿಸುವಂತೆ, ಆಸ್ಟ್ರೇಲಿಯನ್ ಏರ್‌ಲೈನ್‌ಗಳು ಮೊಜಾರ್ಟ್ ಅನ್ನು ನುಡಿಸುತ್ತವೆ ಮತ್ತು ಮಧ್ಯಪ್ರಾಚ್ಯ ವಿಮಾನಯಾನ ಸಂಸ್ಥೆಗಳು ಅರೇಬಿಕ್ ಸಂಗೀತವನ್ನು ನುಡಿಸುತ್ತವೆ. "ಆದರೆ, ಭಾರತೀಯ ವಿಮಾನಯಾನ ಸಂಸ್ಥೆಗಳು ವಿಮಾನದಲ್ಲಿ ಭಾರತೀಯ ಸಂಗೀತವನ್ನು ಅಪರೂಪವಾಗಿ ನುಡಿಸುತ್ತವೆ, ನಾವು ಶ್ರೀಮಂತ ಸಂಗೀತ ಪರಂಪರೆ ಮತ್ತು ಸಂಸ್ಕೃತಿಯನ್ನು ಹೊಂದಿದ್ದರೂ ಸಹ ಅದನ್ನು ನಾವು ಬಳಕೆ ಮಾಡುತ್ತಿಲ್ಲ. ಆದ್ದರಿಂದ ಭಾರತಕ್ಕೆ ಹಾರುವ ವಿಮಾನಗಳಲ್ಲಿ ಮತ್ತು ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತವನ್ನು ನುಡಿಸುವುದನ್ನು ಪರಿಗಣಿಸಲು ವಿನಂತಿಸಲಾಗಿದೆ ಎಂದು ಸಚಿವಾಲಯವು ಹೇಳಿದೆ.

'ಭಾರತೀಯ ಸಂಗೀತವು ವೈವಿಧ್ಯತೆಯನ್ನು ಹೊಂದಿದೆ'
ಭಾರತವು ಸಾಂಪ್ರದಾಯಿಕ ಸಂಗೀತದ ಶ್ರೀಮಂತ ವೈವಿಧ್ಯತೆಯನ್ನು ಹೊಂದಿದೆ ಎಂದು ವಿಮಾನಯಾನ ಸಚಿವಾಲಯ ಬರೆದಿದೆ. 'ಭಾರತ ವೈವಿಧ್ಯಮಯವಾದ ಸಂಗೀತ ಪರಂಪರೆಯನ್ನು ಹೊಂದಿದ್ದು ಶಾಸ್ತ್ರೀಯ ಸಂಗೀತ, ಜಾನಪದ ಸಂಗೀತ, ಲಘು ಧ್ವನಿ, ವಾದ್ಯ ಸಂಗೀತ ಇತ್ಯಾದಿಗಳನ್ನು ಒಳಗೊಂಡು ಹಲವು ಶೈಲಿಗಳು ಮತ್ತು ರೂಪಗಳಲ್ಲಿ ಅಸ್ತಿತ್ವದಲ್ಲಿದೆ. ಭಾರತದಲ್ಲಿ ಸಂಗೀತವು ಸಾಮಾಜಿಕ-ಧಾರ್ಮಿಕ ಜೀವನದ ಅವಿಭಾಜ್ಯ ಅಂಗವಾಗಿ ಹುಟ್ಟಿಕೊಂಡಿದೆ.

ಕಲಾವಿದರು ಮತ್ತು ಸಂಗೀತಗಾರರ ಸಲಹೆ
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಐಸಿಸಿಆರ್, "ಭಾರತೀಯ ಕಂಪನಿಗಳು ನಿರ್ವಹಿಸುವ ವಿಮಾನಗಳಲ್ಲಿ ಭಾರತೀಯ ಸಂಗೀತವನ್ನು ಉತ್ತೇಜಿಸುವುದು ಸೇರಿದಂತೆ" ಸಭೆಯಲ್ಲಿ ಹಲವಾರು ಸಲಹೆಗಳನ್ನು ಸ್ವೀಕರಿಸಲಾಗಿದೆ ಎಂದು ಟ್ವಿಟರ್ ಮೂಲಕ ತಿಳಿಸಿದೆ. ಆ ಸಭೆಯಲ್ಲಿ ಮಾಲಿನಿ ಅವಸ್ತಿ, ಅನು ಮಲಿಕ್, ಕೌಶಲ್ ಎಸ್ ಇನಾಮದಾರ್, ಶೌನಕ್ ಅಭಿಷೇಕಿ, ಮಂಜುಷಾ ಪಾಟೀಲ್ ಕೆ, ಸಂಜೀವ್ ಅಭ್ಯಂಕರ್, ರೀಟಾ ಗಂಗೂಲಿ ಮತ್ತು ವಾಸಿಫುದ್ದೀನ್ ದಾಗರ್ ಸೇರಿದಂತೆ ಅನೇಕ ಖ್ಯಾತ ಕಲಾವಿದರು ಮತ್ತು ಸಂಗೀತಗಾರರು ಉಪಸ್ಥಿತರಿದ್ದರು ಎಂದು ತಿಳಿಸಲಾಯಿತು. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಮಾನಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತವನ್ನು ನುಡಿಸಲು ಐಸಿಸಿಆರ್‌ನಿಂದ ವಿನಂತಿಯನ್ನು ಸ್ವೀಕರಿಸಲಾಗಿದೆ ಎಂದು ಸಚಿವಾಲಯವು ಹೇಳಿದೆ. ಹೀಗಾಗಿ ಶೀಘ್ರದಲ್ಲೇ ವಿಮಾನ ಪ್ರಯಾಣದ ಸಮಯದಲ್ಲಿ ಭಾರತೀಯ ಸಂಗೀತವನ್ನು ಕೇಳುವ ಸಾಧ್ಯತೆಯಿದೆ.












Click it and Unblock the Notifications