ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಕೂಟ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು

|
Google Oneindia Kannada News

ಭೂಪಾಲ್, ನವೆಂಬರ್ 12 : ಮಧ್ಯಪ್ರದೇಶದ ಚಿತ್ರಕೂಟ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ನವೆಂಬರ್ 9ರಂದು ಉಪ ಚುನಾವಣೆ ನಡೆದಿತ್ತು.

ಭಾನುವಾರ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಿಲಾಂಶು ಚರ್ತುವೇದಿ ಅವರು ಬಿಜೆಪಿಯ ಶಂಕರ್ ದಯಾಳ್ ತ್ರಿಪಾಠಿ ಅವರನ್ನು 14,333 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಗುಜರಾತ್ ಚುನಾವಣೆ, 70 ಅಭ್ಯರ್ಥಿಗಳ ಕಾಂಗ್ರೆಸ್ ಪಟ್ಟಿ ಸಿದ್ಧಗುಜರಾತ್ ಚುನಾವಣೆ, 70 ಅಭ್ಯರ್ಥಿಗಳ ಕಾಂಗ್ರೆಸ್ ಪಟ್ಟಿ ಸಿದ್ಧ

congress

2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರೇಮ್ ಸಿಂಗ್ ಜಯಗಳಿಸಿದ್ದರು. ಅವರ ನಿಧನದಿಂದ ತೆರೆವಾದ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ಉಪ ಚುನಾವಣೆಯಲ್ಲಿ ನಿಲಾಂಶು ಚರ್ತುವೇದಿ ಅವರು ಗೆಲ್ಲುವ ಮೂಲಕ ಕಾಂಗ್ರೆಸ್ ಕ್ಷೇತ್ರವನ್ನು ಉಳಿಸಿಕೊಂಡಿದೆ.

ಸಮೀಕ್ಷೆ: ಜನಪ್ರಿಯತೆ ಕುಸಿದರೂ ಬಿಜೆಪಿ ಗುಜರಾತ್ ಜಯಕ್ಕೆ ಭಯವಿಲ್ಲ

ನವೆಂಬರ್ 9ರಂದು ನಡೆದ ಉಪ ಚುನಾವಣೆಯಲ್ಲಿ ಶೇ 65ರಷ್ಟು ಮತದಾನವಾಗಿತ್ತು. ಚರ್ತುವೇದಿ ಅವರು 66,180 ಮತಗಳನ್ನು ಪಡೆದರೆ, ತ್ರಿಪಾಠಿ ಅವರು 52,677 ಮತಗಳನ್ನು ಪಡೆದಿದ್ದಾರೆ.

ಕಾಂಗ್ರೆಸ್, ಬಿಜೆಪಿ ಹೊರತು ಪಡಿಸಿ ಸ್ವತಂತ್ರವಾಗಿ 12 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. 2013ರ ಚುನಾವಣೆಯಲ್ಲಿಯೂ ಪ್ರೇಮ್ ಸಿಂಗ್ ಅವರು 10,970 ಮತಗಳ ಅಂತರದಿಂದ ಜಯಗಳಿಸಿದ್ದರು.

English summary
Congress on Sunday retained the Chitrakoot assembly constituency, Madhya Pradesh. Party candidate Nilanshid Chaturvedi defeated BJP candidate Shankar Dayal Tripathi by 14,000 in the bye-election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X