ವ್ಯಾಲೆಂಟೈನ್ ಡೇ ನೆಪದಲ್ಲಿ ಮೋದಿಗೆ ಹಳೆಯ ಘಟನೆ ನೆನಪಿಸಿದ ಕಾಂಗ್ರೆಸ್

ನವದೆಹಲಿ, ಫೆಬ್ರವರಿ 12: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಳೆಯ ಘಟನೆಯೊಂದನ್ನು ವ್ಯಾಲೆಂಟೈನ್ ಡೇ ಹಿನ್ನೆಲೆಯಲ್ಲಿ ನೆನಪಿಸಿ ಕಾಲೆಳೆದಿದೆ.

ವ್ಯಾಲೆಂಟೈನ್ಸ್‌ ಡೇ ಪ್ರಾರಂಭವಾಗುವ ವಾರವನ್ನು ವ್ಯಾಲೆಂಟೈನ್ ವಾರವೆಂದು, ಆ ವಾರದ ಒಂದೊಂದು ದಿನಕ್ಕೂ ಒಂದೊಂದು ವಿಶೇಷಣವನ್ನು ಜೋಡಿಸಿ ಆಚರಿಸುವುದು ಸಂಪ್ರದಾಯ, ರೋಸ್ ಡೇ, ಕಿಸ್ ಡೇ, ಹಗ್ ಡೇ ಇತರೆ, ಇತರೆ.

ಅದರಂತೆ ವ್ಯಾಲೆಂಟೈನ್ ಡೇ ಎರಡು ದಿನ ಇದ್ದಂತೆ ಬರುತ್ತದೆ ಹಗ್ ಡೇ. ಅಂದರೆ ಫೆಬ್ರವರಿ 12 ರಂದು ಹಗ್ ಡೇ (ಅಪ್ಪಿಕೊಳ್ಳುವ ದಿನ) ಆಚರಿಸಲಾಗುತ್ತದೆ. ಇದೇ ದಿನದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಮೋದಿ ಅವರಿಗೆ ಘಟನೆಯೊಂದನ್ನು ನೆನಪಿಸಿ ಅಣಕಿಸುವ ಯತ್ನವನ್ನು ಟ್ವಿಟ್ಟರ್‌ ನಲ್ಲಿ ಮಾಡಿದೆ.

Congress Tweets Old Video Of Rahul Gandhi Hugging Narendra Modi

ರಾಹುಲ್ ಗಾಂಧಿ ಅವರು ಮೋದಿ ಅವರನ್ನು ಸಂಸತ್‌ನಲ್ಲಿ ಆಲಂಗಿಸಿದ ದೃಶ್ಯವನ್ನು ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌, ಮಹಾತ್ಮಾ ಗಾಂಧಿ ಅವರ ಸಾಲೋಂದನ್ನು ಮೋದಿಗಾಗಿ ಸೇರಿಸಿದೆ. 'ಪಾಪವನ್ನು ದ್ವೇಷಿಸು, ಪಾಪಿಯನ್ನು ಪ್ರೀತಿಸು' ಎಂದು.

'ನಿಮ್ಮೊಳಗೆ ನನ್ನ ಬಗ್ಗೆ ದ್ವೇಷವಿದೆ. ಆದರೆ ನನಗೆ ನಿಮ್ಮ ಬಗ್ಗೆ ಪ್ರೀತಿಯಿದೆ, ನಿಮ್ಮೊಳಗಿನ ದ್ವೇಷವನ್ನು ನಾನು ಪ್ರೀತಿಯನ್ನಾಗಿ ಬದಲಾಯಿಸುತ್ತೇನೆ' ಎಂದು ಸಂಸತ್‌ನಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ನೋಡ ನೋಡುತ್ತಲೇ ಸಂಸತ್‌ನ ಆಡಳಿತ ಪಕ್ಷದ ಕಡೆಗೆ ಹೋಗಿ ಕೂತಿದ್ದ ಮೋದಿ ಅವರನ್ನು ಬಿಗಿದಪ್ಪಿಬಿಟ್ಟಿದ್ದರು. ಈ ಘಟನೆ ಭಾರಿ ಸದ್ದು ಮಾಡಿತ್ತು.

ಅದೇ ವಿಡಿಯೋ ಪೋಸ್ಟ್ ಮಾಡಿರುವ ಕಾಂಗ್ರೆಸ್, 'ಪ್ರತಿವರ್ಷವೂ ಬಿಜೆಪಿಗೆ ಇದೇ ಸಂದೇಶ, ದ್ವೇಷಿಸಬೇಡಿ, ಪ್ರೀತಿಸಿ' ಎಂದು ಟ್ವಿಟ್ಟರ್‌ನಲ್ಲಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+