Maharashtra assembly election: ನರೇಂದ್ರ ಮೋದಿ ಮಾತು "ಹಿಂದಿ ಸಿ ಗ್ರೇಡ್ ಮೂವಿ ವಿಲನ್ ತರ"
Maharashtra assembly election: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಕ್ಲಾಸ್ ತೆಗೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಮಟ್ಟವು ಅತ್ಯಂತ ಕಡಿಮೆಯಾಗಿದೆ ಎಂದು ಕಾಂಗ್ರೆಸ್ ಪ್ರಧಾನಿ ಮೋದಿ ಅವರ ಕಾಲೆಳೆದಿದೆ. ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳ ಚುನಾವಣೆಗೆ ಸರಿಯಾಗಿ ಇನ್ನು ಕೇವಲ ಎರಡು ವಾರಗಳು ಮಾತ್ರ ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನ ನಡುವೆ ಭಾರೀ ವಾಗ್ದಾಳಿ, ವ್ಯಂಗ್ಯವೇ ಜೋರಾಗಿದೆ.
ಇದೇ 20ರಂದು ಮಹಾರಾಷ್ಟ್ರ ಚುನಾವಣೆ ನಡೆಯಲಿದೆ. ಈ ಬಾರಿ ಮಹಾರಾಷ್ಟ್ರ ಚುನಾವಣೆ ಹಲವು ಕಾರಣಕ್ಕೆ ಪ್ರಮುಖ್ಯತೆ ಪಡೆದುಕೊಂಡಿದೆ. ಈ ನಡುವೆ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಂದಿ ಸಿನಿಮಾದ ಸಿ ಗ್ರೇಡ್ ಮೂವಿಯ ವಿಲನ್‌ತರ ಮಾತಾಡ್ಬೇಡಿ ಅಂತ ವ್ಯಂಗ್ಯ ಮತ್ತು ಆಕ್ರೋಶಭರಿತ ಮಾತುಗಳಲ್ಲೇ ತಿವಿದಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮೈತ್ರಿ ಪಕ್ಷಗಳು ಸೆಣಸುತ್ತಿವೆ. ಕಾಂಗ್ರೆಸ್ ಇಲ್ಲಿ ಬಿಜೆಪಿಗೆ ನೇರ ಸ್ಪರ್ಧಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಈ ರೀತಿ ತೀವ್ರವಾಗಿ ಕಾಂಗ್ರೆಸ್ ಟೀಕೆ ಮಾಡುತ್ತಿರುವುದಕ್ಕೂ ಕಾರಣವಿದೆ. ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವಂತೆಯೇ ಎರಡೂ ರಾಜ್ಯಗಳಲ್ಲೂ ಚುನಾವಣೆ ಪ್ರಚಾರ ಜೋರಾಗಿದೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ನಿಮ್ಮ ಮಂಗಳ ಸೂತ್ರ ಕಸಿದುಕೊಳ್ಳಲಿದೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇದೀಗ ಇನ್ನೂ ಒಂದು ಹಂತ ಮುಂದಕ್ಕೆ ಹೋಗಿ ಇಂಡಿಯಾ ಮೈತ್ರಿಕೂಟದ ಬಗ್ಗೆ ಅತ್ಯಂತ ಕೀಳಾಗಿ ಮಾತನಾಡಿದ್ದಾರೆ.
प्रधान मंत्री जी, गजनी मत बनिए।
— Pawan Khera 🇮🇳 (@Pawankhera) November 2, 2024
मशरूम खाना छोड़ कर अब बादाम खाना शुरू कीजिए ताकि आपको याद आ सके वो नारे जो आप लगाते थे:
बहुत हुई डॉलर की मार, अब की बार किसकी सरकार ?
बहुत हुआ महिलाओं पर अत्याचार, अब की बार किसकी सरकार ? pic.twitter.com/16QgK75Ht5
ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟವನ್ನು ಅವರು, ನುಸುಳುಕೋರರ ಮೈತ್ರಿ ಅಂತ ಹೇಳಿದ್ದಾರೆ. ಅಲ್ಲದೇ ಕೆಲವು ಆಕ್ಷೇಪಾರ್ಹ ಹೇಳಿಕೆಗಳನ್ನು ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಮಾತುಗಳು ಬಿಜೆಪಿ ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲಿ ಸೋಲುವುದನ್ನು ಸೂಚಿಸುತ್ತವೆ ಎಂದು ಕಾಂಗ್ರೆಸ್ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳು ಅವರ ಘನತೆಗೆ ಹಾಗೂ ಪ್ರಧಾನಿ ಹುದ್ದೆಗೆ ತಕ್ಕುದ್ದಲ್ಲ ಎಂದು ಕಾಂಗ್ರೆಸ್ ಹೇಳಿದ್ದು, ಈ ರೀತಿ ಮಾತನಾಡುವುದನ್ನು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಬಿಡಬೇಕು ಎಂದಿದೆ. ಕಾಂಗ್ರೆಸ್‌ನ ಪ್ರಭಾವಿ ನಾಯಕ ಪವನ್ ಖೇರಾ ಅವರು, ಹಿಂದಿ ಚಲನಚಿತ್ರದ ಸಿ ಗ್ರೇಡ್ ಮೂವಿಗಳಲ್ಲಿ ಬರುವ ವಿಲನ್ ಬಳಸುವ ಭಾಷೆಯನ್ನು ಬಳಸಬೇಡಿ. ಇದು ಪ್ರಧಾನಿಯಾದವರಿಗೆ ಯೋಗ್ಯವಲ್ಲ ಎಂದಿದ್ದಾರೆ.
ಪ್ರಧಾನಿಯಾಗಿರುವವರು ಅವರ ಹುದ್ದೆ ಹಾಗು ಘನತೆಯನ್ನು ಎತ್ತಿಹಿಡಿಯಬೇಕು ಎಂದು ಅವರು ಹೇಳಿದ್ದಾರೆ. ಅಲ್ಲದೇ ಜಾರ್ಖಂಡ್‌ನಲ್ಲಿ ನುಸುಳುಕೋರರಿಗೆ ಸ್ವಾತಂತ್ರ್ಯವಿದೆ ಎಂದು ಮೋದಿ ಹೇಳಿದ್ದಾರೆ. ಈ ಮೂಲಕ ಅವರು ಅವರದ್ದೇ ಸರ್ಕಾರ ಹಾಗೂ ಗೃಹ ಸಚಿವರಾಗಿರುವ ಅಮಿತ್ ಶಾ ಅವರ ಕಾರ್ಯವೈಖರಿಯ ಬಗ್ಗೆಯೇ ಮೋದಿ ಪ್ರಶ್ನೆ ಮಾಡ್ತಾ ಇದ್ದಾರಾ ಅಂತ ಕಾಂಗ್ರೆಸ್ ತಿರುಗೇಟು ಕೊಟ್ಟಿದೆ.
ಮಹಾರಾಷ್ಟ್ರ ಚುನಾವಣೆ: ಮಹಾರಾಷ್ಟ್ರದಲ್ಲಿ ಇದೇ 20ರಂದು ಚುನಾವಣೆ ನಡೆಯಲಿದ್ದು, 288 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಬಾರಿ ಚುನಾವಣೆ ನಡೆಯಲಿದೆ. ಇನ್ನು ಮಹಾರಾಷ್ಟ್ರದ ಮ್ಯಾಜಿಕ್ ನಂಬರ್ 145 ಆಗಿದೆ.












Click it and Unblock the Notifications