ಪ್ರಧಾನಿ ಮೋದಿಯ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಭರ್ಜರಿ ಕೌಂಟರ್

ನವದೆಹಲಿ, ಅ 26: ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿನ ಸುಧಾರಿತ ಪ್ರದರ್ಶನದಿಂದ ಪ್ರೇರಣೆಗೊಂಡಿರುವ ಕಾಂಗ್ರೆಸ್, ಕೇಂದ್ರ ಸರಕಾರದ ವಿರುದ್ದ ಅಭಿಯಾನವನ್ನು ಆರಂಭಿಸಿದೆ.

ಪ್ರಧಾನಿ ಮೋದಿಯವರ ಜನಪ್ರಿಯ ಬಾನುಲಿ ಕಾರ್ಯಕ್ರಮ 'ಮನ್ ಕೀ ಬಾತ್' ಕಾರ್ಯಕ್ರಮಕ್ಕೆ ಕೌಂಟರ್ ನೀಡಲು, 'ದೇಶ್ ಕೀ ಬಾತ್' ಕಾರ್ಯಕ್ರಮವನ್ನು, ಕಾಂಗ್ರೆಸ್, ಶನಿವಾರದಿಂದ (ಅ 26) ಆರಂಭಿಸಿದೆ.

ಪಕ್ಷದ ವಕ್ತಾರ ಪವನ್ ಖೇರಾ ಅವರ ಮೊದಲ ಕಂತಿನ ಭಾಷಣದಲ್ಲಿ, ಮೋದಿ ಸರಕಾರದ ವೈಫಲ್ಯತೆ, ಈಡೇರದ ಭರವಸೆಯ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ಲಿಂಕ್.

Congress To Counter PM Modis Mann KI Baat With Desh Ki Baat

"ಬ್ಯಾಂಕಿನಲ್ಲಿ ಸಾರ್ವಜನಿಕರ ಹಣ ಯಾಕೆ ಸುರಕ್ಷಿತವಾಗಿಲ್ಲ. ಬ್ಯಾಂಕಿನಲ್ಲಿಡುವ ದುಡ್ಡೇ ಸುರಕ್ಷಿತ ಇಲ್ಲ ಎಂದ ಮೇಲೆ, ಮೋದಿ ಸರಕಾರ ಈ ವಿಚಾರದಲ್ಲಿ ಏನು ಕ್ರಮ ತೆಗೆದುಕೊಂಡಿದೆ" ಎಂದು ಖೇರಾ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

"ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಮಾಧ್ಯಮದವರ ಮೇಲೆ ನಿಯಂತ್ರಣ ಹೇರಲಿಲ್ಲ. ಸರಕಾರದ ವೈಫಲ್ಯತೆಯನ್ನು ಟೀಕಿಸುವ, ಪ್ರಶ್ನಿಸುವ ಕೆಲಸವನ್ನು ಮಾಧ್ಯಮದವರು ಯಾಕೆ ಮಾಡುತ್ತಿಲ್ಲ" ಎಂದು ಖೇರಾ ಪ್ರಶ್ನಿಸಿದ್ದಾರೆ.

"ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದವರಿಗೆ ಅವರದ್ದೇ ಆದ ಜವಾಬ್ದಾರಿಯಿದೆ. ಆಡಳಿತ ಪಕ್ಷ ಸರಿಯಾದ ದಾರಿಯಲ್ಲಿ ಸಾಗದಿದ್ದರೆ, ಅದನ್ನು ಪ್ರಶ್ನಿಸುವುದು ವಿರೋಧ ಪಕ್ಷದ ಜವಾಬ್ದಾರಿ" ಎಂದು ಖೇರಾ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+