ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಜೋಡೋ ಯಾತ್ರೆ: 6 ಡಿಗ್ರಿ ಸೆಲ್ಸಿಯಸ್‌ನಲ್ಲಿಯೂ ಶರ್ಟ್‌ಗಳಿಲ್ಲದೆ ನೃತ್ಯ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು

|
Google Oneindia Kannada News

ನವದೆಹಲಿ, ಜ. 08: ಭಾನುವಾರ ಬೆಳಗಿನ ಮೈಕೊರೆಯುವ ಚಳಿಯಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು ಭಾರತ್ ಜೋಡೋ ಯಾತ್ರೆಯಲ್ಲಿ ಶರ್ಟ್‌ಗಳನನ್ಉ ತೆಗೆದು ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.

ಕಾಂಗ್ರೆಸ್ ನೇತೃತ್ವದ ಭಾರತ್ ಜೋಡೋ ಯಾತ್ರೆಯು ವರ್ಣರಂಜಿತ ಮೆರವಣಿಗೆಯೊಂದಿಗೆ ಹರಿಯಾಣದ ಕರ್ನಾಲ್‌ಗೆ ಶನಿವಾರ ಪ್ರವೇಶಿಸಿದೆ. ಭಾನುವಾರ ಬೆಳಿಗ್ಗೆ ಕಾಂಗ್ರೆಸ್ ಬೆಂಬಲಿಗರು ರಾಷ್ಟ್ರಧ್ವಜ ಹಿಡಿದು ಡ್ರಮ್ ಬಾರಿಸಿ ಯಾತ್ರೆಗೆ ಚಾಲನೆ ನೀಡಿದ್ದಾರೆ.

ರಾಹುಲ್ ಯಾತ್ರೆಯನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ: ರಾಮಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಚ್ಚರಿ ಹೇಳಿಕೆರಾಹುಲ್ ಯಾತ್ರೆಯನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ: ರಾಮಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಚ್ಚರಿ ಹೇಳಿಕೆ

ಹರಿಯಾಣದ ಕರ್ನಾಲ್‌ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಕೆಲವು ಕಾಂಗ್ರೆಸ್ ಬೆಂಬಲಿಗರು ದಟ್ಟವಾದ ಮಂಜಿನ ನಡುವೆ 'ಶರ್ಟ್‌ಲೆಸ್' ಆಗಿ ಬಸ್‌ಗಳ ಮೇಲೆ ನಿಂತು, 6 ಡಿಗ್ರಿ ಸೆಲ್ಸಿಯಸ್‌ನಲ್ಲಿ ಶರ್ಟ್ ಇಲ್ಲದೆ ನೃತ್ಯ ಮಾಡಿ ಯಾತ್ರೆಗೆ ಹುರುಪು ತುಂಬಿದ್ದಾರೆ.

Congress Supporters Dance Shirtless at 6 Degrees Celsius In Bharat Jodo Yatra

ಶನಿವಾರ ಕರ್ನಾಲ್ ನಲ್ಲಿ ನಡೆದ ಕಬ್ಬಡಿ ಪಂದ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ವೀಕ್ಷಿಸಿದ್ದರು. ತಮ್ಮ ಬೆಂಬಲಿಗರೊಂದಿಗೆ ಪಂದ್ಯ ವೀಕ್ಷಿದಿದ್ದ ಅವರು ತುಂಬಾ ಉತ್ಸಾಹದಿಂದ ತಲ್ಲೀನರಾಗಿದ್ದರು.

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಅವರು ಸಹ ನಾಯಕ ದೀಪೇಂದರ್ ಹೂಡಾ ಅವರೊಂದಿಗೆ ಹರಿಯಾಣದ ಕ್ರೀಡಾಪಟುಗಳನ್ನು ಭೇಟಿಯಾಗಿದ್ದಾರೆ.

ಒಲಂಪಿಕ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಮತ್ತು ಪಕ್ಷದ ಹಿರಿಯ ನಾಯಕರಾದ ಭೂಪಿಂದರ್ ಸಿಂಗ್ ಹೂಡಾ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಹಲವು ನಾಯಕರೊಂದಿಗೆ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯು ಹರಿಯಾಣದ ಕರ್ನಾಲ್ ಜಿಲ್ಲೆಯ ಮೂಲಕ ಸಾಗಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.

Congress Supporters Dance Shirtless at 6 Degrees Celsius In Bharat Jodo Yatra

ಕೊರೆಯುವ ಚಳಿ ಮತ್ತು ಮಂಜಿನ ಹೊರತಾಗಿಯೂ, ಪಾಣಿಪತ್‌ನಲ್ಲಿ ದೊಡ್ಡ ಮೆರವಣಿಗೆ ನಡೆದ ಒಂದು ದಿನದ ನಂತರ ಭಾರತ್ ಜೋಡೋ ಯಾತ್ರೆಯನ್ನು ಸ್ವಾಗತಿಸಲು ಕರ್ನಾಲ್‌ನಲ್ಲಿ ಅಪಾರ ಜನಸ್ತೋಮ ನೆರೆದಿತ್ತು. ಬೆಳಗ್ಗೆ ಕರ್ನಾಲ್‌ನ ಘರೌಂಡಾದ ಕೊಹಂಡ್ ಗ್ರಾಮದಿಂದ ಯಾತ್ರೆ ಆರಂಭವಾಗುತ್ತಿದ್ದಂತೆ ರಾಹುಲ್ ಗಾಂಧಿ ಜನರೊಂದಿಗೆ ಹಸ್ತಲಾಘವ ಮಾಡಿ ಮಕ್ಕಳೊಂದಿಗೆ ಫೋಟೋ ತೆಗೆಸಿಕೊಂಡರು.

ಇದರ ಜೊತೆಗೆ ಹಿಂದುಳಿದ ವರ್ಗಗಳ ಸಮುದಾಯದ ನಿಯೋಗವನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.

ಸೆ.7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆ ಜನವರಿ 30ರಂದು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಮುಕ್ತಾಯವಾಗಲಿದೆ. ರಾಹುಲ್ ಗಾಂಧಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಯಾತ್ರೆಗೆ ಕೊನರ ಹಾಡಲಿದ್ದಾರೆ. ಭಾರತ್ ಜೋಡೋ ಯಾತ್ರೆ ಇದುವರೆಗೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ ಮತ್ತು ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿ ಸಂಚರಿಸಿದೆ.

English summary
Bharat Jodo Yatra: Congress supporters dance shirtless amid dense fog during Bharat Jodo Yatra in Haryana's Karnal at 6 degrees Celsius. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X