ಕಾಂಗ್ರೆಸ್ ನಾಯಕರ ಪ್ರತಿಭಟನೆ ರಹಸ್ಯ ಬಿಚ್ಚಿಟ್ಟ ಸಚಿವೆ!
ನವದೆಹಲಿ, ಜೂ. 13: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಮುಂದೆ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾದರು. ರಾಹುಲ್ ವಿಚಾರಣೆಯ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ನಾಯಕರ ನಿಲುವಿಗೆ ಕೇಂದ್ರ ಸಚಿವ ಸ್ಮೃತಿ ಇರಾನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವುದು ಪ್ರಜಾಪ್ರಭುತ್ವವನ್ನು ಉಳಿಸಲು ಅಲ್ಲ. ಬದಲಾಗಿ ರಾಹುಲ್ ಗಾಂಧಿ ಅವರ 2,000 ಕೋಟಿ ಮೌಲ್ಯದ ಆಸ್ತಿಯನ್ನು ಉಳಿಸಲು" ಎಂದು ಸಚಿವರು ಟೀಕಿಸಿದರು.
"ಇವರು ನಡೆಸುತ್ತಿರುವ ಪ್ರತಿಭಟನೆಗಳು ತನಿಖಾ ಸಂಸ್ಥೆಗಳ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿದೆ. ಹಿಂದೆಂದೂ ಯಾವ ರಾಜಕೀಯ ಕುಟುಂಬವು ಅಕ್ರಮ ಸಂಪತ್ತನ್ನು ರಕ್ಷಿಸಲು ತನಿಖಾ ಸಂಸ್ಥೆಗಳನ್ನು ಸುಲಿಗೆ ಮಾಡಲು ಪ್ರಯತ್ನಿಸಿಲ್ಲ" ಎಂದು ಸ್ಮೃತಿ ಇರಾಣಿ ಹೇಳಿದರು.

ಪತ್ರಿಕೆ ಒಂದನ್ನು ಪ್ರಕಟಿಸುವ ಉದ್ದೇಶದಿಂದ ಎಜೆಎಲ್ ಸ್ಥಾಪನೆ
"ಕಾನೂನಿನ ಮುಂದೆ ಯಾರು ದೊಡ್ಡವರಿಲ್ಲ. ಈಗ ತಮ್ಮ ಭ್ರಷ್ಟಾಚಾರ ಬಯಲಾಗಿರುವುದರಿಂದ ಜಾರಿ ನಿರ್ದೇಶನಾಲಯದ ಮೇಲೆ ಬಹಿರಂಗವಾಗಿ ಒತ್ತಡ ಹೇರಲು ಕಾಂಗ್ರೆಸ್ ನಾಯಕರು ಬೀದಿಗಿಳಿದಿದ್ದಾರೆ. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಎಂಬ ಕಂಪನಿಯನ್ನು 1930ರಲ್ಲಿ ಪತ್ರಿಕೆ ಒಂದನ್ನು ಪ್ರಕಟಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಇದು 5,000 ಸ್ವಾತಂತ್ರ್ಯ ಹೋರಾಟಗಾರರನ್ನು ಷೇರುದಾರರನ್ನಾಗಿ ಹೊಂದಿತ್ತು. ಆದರೆ ಈಗ ಇದು ಕೇವಲ ಗಾಂಧಿ ಕುಟುಂಬದ ನಿಯಂತ್ರಣದಲ್ಲಿದೆ" ಸಚಿವರು ಹೇಳಿದರು.

2010ರಲ್ಲಿ ಯಂಗ್ ಇಂಡಿಯಾ ಆರಂಭ
"ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಕಂಪನಿಯ ಮಾಲೀಕತ್ವವನ್ನು ಒಂದು ಕುಟುಂಬಕ್ಕೆ ವರ್ಗಾಯಿಸಲಾಗಿದೆ. ಇದರಿಂದಾಗಿ ಅದು ಪತ್ರಿಕೆಗಳನ್ನು ಪ್ರಕಟಿಸುವುದಿಲ್ಲ, ಬದಲಿಗೆ ರಿಯಲ್ ಎಸ್ಟೇಟ್ ವ್ಯವಹಾರವಾಗಿದೆ. ಈ ಕಂಪನಿಯು 2008 ರಲ್ಲಿ 90 ಕೋಟಿ ಸಾಲವನ್ನು ಹೊಂದಿತ್ತು. 2010ರಲ್ಲಿ 5 ಲಕ್ಷ ಆರಂಭಿಕ ಬಂಡವಾಳದೊಂದಿಗೆ ಯಂಗ್ ಇಂಡಿಯಾ ಎಂಬ ಇನ್ನೊಂದು ಕಂಪನಿಯನ್ನು ಸ್ಥಾಪಿಸಲಾಯಿತು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯನ್ನು ಅದರ ನಿರ್ದೇಶಕರನ್ನಾಗಿ ಮಾಡಲಾಯಿತು" ಎಂದು ಸ್ಮೃತಿ ಇರಾನಿ ಹೇಳಿದರು.

ಕಾಂಗ್ರೆಸ್‌ನಿಂದ ಎಜೆಎಲ್‌ಗೆ 90 ಕೋಟಿ ಸಾಲ
"ಕಂಪನಿಯಲ್ಲಿ ರಾಹುಲ್ ಗಾಂಧಿ ಶೇ. 75ರಷ್ಟು ಪಾಲನ್ನು ಮಾತ್ರ ಹೊಂದಿದ್ದರು. ಉಳಿದವು ರಾಹುಲ್ ಅವರ ತಾಯಿ ಸೋನಿಯಾ ಗಾಂಧಿ ಮತ್ತು ಮೋತಿಲಾಲ್ ವೋರಾ ಮತ್ತು ಆಸ್ಕರ್ ಫೆರ್ನಾಂಡಿಸ್ ಅವರಂತಹ ಕಾಂಗ್ರೆಸ್ ನಾಯಕರ ಬಳಿ ಇತ್ತು. ಎಜೆಎಲ್‌ನ ಒಂಬತ್ತು ಕೋಟಿ ಷೇರುಗಳು ಒಟ್ಟು ಷೇರುಗಳ ಶೇ. 99 ರಷ್ಟು ಆಗ ಯಂಗ್ ಇಂಡಿಯಾಗೆ ವರ್ಗಾಯಿಸಲಾಯಿತು. ನಂತರ ಕಾಂಗ್ರೆಸ್ ಪಕ್ಷವು ಎಜೆಎಲ್‌ಗೆ 90 ಕೋಟಿ ಸಾಲವನ್ನು ನೀಡಿ ಬದಲಿಗೆ ಅದನ್ನು ಅಗತ್ಯವಿಲ್ಲ" ಎಂದರು.
"ಎಜೆಎಲ್ ಕಂಪನಿಯು ಸಾಮಾಜಿಕ ಕಾರ್ಯಗಳನ್ನು ಮಾಡಲು ಸ್ಥಾಪಿತವಾಗಿದ್ದಲ್ಲ. ಇದು ಕಂಪನಿಗಳ ಕಾಯಿದೆಯ ಸೆಕ್ಷನ್ 25 ರ ಅಡಿಯಲ್ಲಿ ಅದರ ಸ್ಥಾಪನೆಯ ಸಮಯದಲ್ಲಿ ಪರವಾನಗಿಯನ್ನು ತೆಗೆದುಕೊಂಡಿತ್ತು. ಅದರ ಅಡಿಯಲ್ಲಿ ಅದು ದಾನ ಕಾರ್ಯಗಳನ್ನು ಮಾತ್ರ ಮಾಡಬಹುದಿತ್ತು. ಆದರೆ 2016ರಲ್ಲಿ ಅದರ ಅಸ್ತಿತ್ವದ ಆರು ವರ್ಷಗಳಲ್ಲಿ ಯಾವುದೇ ದಾನ ಕಾರ್ಯವನ್ನು ಇದು ಮಾಡಿಲ್ಲ ಎಂದು ಯಂಗ್ ಇಂಡಿಯಾ ಅದನ್ನು ಒಪ್ಪಿಕೊಂಡಿತು" ಎಂದು ಸ್ಮೃತಿ ಇರಾನಿ ಹೇಳಿದರು.

ಕೆಂಪು ಶಾಹಿ ಹಾಕಿ ಹಣಕಾಸು ವಹಿವಾಟು ಗುರುತು
"ಎಜೆಎಲ್ ಕಂಪನಿ ಗಾಂಧಿ ಕುಟುಂಬಕ್ಕಾಗಿ ಕೆಲಸ ಮಾಡುತ್ತಿದೆ. ನಾನು ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕರನ್ನು ಕೇಳಬಯಸುತ್ತೇನೆ. ನೀವು ರಾಹುಲ್ ಗಾಂಧಿಯವರನ್ನು ನಿಮಗೂ ಡೋಟೆಕ್ಸ್ ಮರ್ಚಂಡೈಸ್ ಪ್ರೈವೇಟ್ ಲಿಮಿಟೆಡ್‌ಗೂ ಏನು ಸಂಬಂಧ? ಎಂದು ಕೇಳಲಿ. ಡೊಟೆಕ್ಸ್ ಮರ್ಚಂಡೈಸ್ ಪ್ರೈವೇಟ್ ಲಿಮಿಟೆಡ್ ಕೋಲ್ಕತ್ತಾದ ಹವಾಲಾ ಆಪರೇಟರ್‌ಗೆ ಸಂಬಂಧಿಸಿದ್ದು, ಇದು ನಗದು ವಿನಿಮಯಕ್ಕಾಗಿ ಚೆಕ್‌ಗಳನ್ನು ನೀಡುತ್ತದೆ. ಆದ್ದರಿಂದ ಹಣಕಾಸು ಗುಪ್ತಚರ ಘಟಕವು ಈ ಕಂಪನಿಯ ಹಣಕಾಸು ವಹಿವಾಟುಗಳನ್ನು ಕೆಂಪು ಶಾಹಿ ಹಾಕಿ ಗುರುತಿಸಿದೆ" ಎಂದು ಸ್ಮೃತಿ ಇರಾನಿ ಹೇಳಿದರು.
"ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಒಡೆತನದ ಕಂಪನಿಗಳೊಂದಿಗೆ ಈ ಕಂಪನಿಯು ಸಂಬಂಧ ಹೊಂದಿದೆ ಎಂಬುದು ನಿಜವೇ?" ಎಂದ ಇರಾನಿಯವರು 2019 ದೆಹಲಿ ಹೈಕೋರ್ಟ್ ತೀರ್ಪಿನ ಒಂದು ವಾಕ್ಯವನ್ನು ಅವರು ಸೂಚಿಸಿ ಎಜೆಎಲ್ ಷೇರುಗಳನ್ನು ಯಂಗ್ ಇಂಡಿಯಾಕ್ಕೆ ವರ್ಗಾಯಿಸುವ ಸಂಪೂರ್ಣ ಕ್ರಮ ರಹಸ್ಯ ವರ್ಗಾವಣೆಯಾಗಿದೆ ಎಂದು ಸ್ಮೃತಿ ಇರಾನಿಯವರು ತಿಳಿಸಿದರು.












Click it and Unblock the Notifications