Mallikarjun Kharge: ಕಾಂಗ್ರೆಸ್‌ ಕಚೇರಿ ಕಟ್ಟಿದ L&Tಗೆ ಥ್ಯಾಂಕ್ಸ್‌, ಆದ್ರೆ ವಾರಕ್ಕೆ 90 ಗಂಟೆ ಕೆಲಸ ನೋ ಚಾನ್ಸ್‌

ನವದೆಹಲಿಯಲ್ಲಿ ಇಂದು ಕಾಂಗ್ರೆಸ್‌ ಪಕ್ಷದ ನೂತನ ಕಚೇರಿ ಇಂದಿರಾ ಭವನ ಅದ್ಧೂರಿಯಾಗಿ ಉದ್ಘಾಟನೆಗೊಂಡಿದೆ. ಇದನ್ನು ಕಟ್ಟಿರುವುದು ಪ್ರಖ್ಯಾತ ನಿರ್ಮಾಣ ಸಂಸ್ಥೆಯಾದ ಲಾರ್ಸನ್‌ & ಟೂಬ್ರೋ (L&T) ಕಂಪನಿಯವರು.

ಆದರೆ ಇತ್ತೀಚೆಗೆ ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎನ್ನುವ ಎಲ್‌-ಟಿ ಸಿಇಒ ಹೇಳಿಕೆ ಭಾರಿ ವಿರೋಧಕ್ಕೆ ಕಾರಣವಾಗಿದೆ. ಇನ್ನು ತಮ್ಮ ಪಕ್ಷದ ಕಚೇರಿ ನಿರ್ಮಿಸಿದ್ದರೂ L&T ಸಿಇಒ ಹೇಳಿಕೆ ಬಗ್ಗೆ ಮಲ್ಲಿಕಾರ್ಜುನ್ ಖರ್ಗೆ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.

Congress President Mallikarjun Kharge Criticizes L amp amp T CEO Statement On 90-Hour Work Week

ಇಂದು ಇಂದಿರಾ ಭವನ ಉದ್ಘಾಟಿಸಿ ಮಾತನಾಡಿದ ಮಲ್ಲಿಕಾರ್ಜುನ್‌ ಖರ್ಗೆ ಅವರು ಮೊದಲಿಗೆ ತಮಗೆ ಭವ್ಯವಾದ ಕಾಂಗ್ರೆಸ್‌ ಕಚೇರಿ ನಿರ್ಮಿಸಿ ಕೊಟ್ಟಿದಕ್ಕಾಗಿ L&T ಸಂಸ್ಥೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಭಾಷಣದ ವೇಳೆ, ನಾನು ಎಲ್-ಟಿ ನಿರ್ಮಾಣ, ವಾಸ್ತುಶಿಲ್ಪಿಗಳು, ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.

ಈ ವಿಚಾರವಾಗಿ ನಾನು ಒಟ್ಟಾರೆಯಾಗಿ ಕಂಪನಿಗೆ ಧನ್ಯವಾದ ಹೇಳುತ್ತೇನೆ. ಆದರೆ ಕಂಪನಿಯ ಸಿಇಒ ಅವರು ವಾರದಲ್ಲಿ 90 ಗಂಟೆಗಳ ಕಾಲ ಕೆಲಸ ಬಗ್ಗೆ ಮಾತನಾಡಿದ್ದಾರೆ. ಅದನ್ನು ನಾನು ಕೂಡ ಒಪ್ಪುವುದಿಲ್ಲ ಎಂದು ಸರಾಸಗಟಾಗಿ ಹೇಳಿದ್ದಾರೆ.

Congress President Mallikarjun Kharge Criticizes L amp amp T CEO Statement On 90-Hour Work Week

ಇದೇ ವೇಳೆ ಜವಾಹರಲಾಲ್ ನೆಹರೂ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ನಾಯಕರಿಂದ ಸ್ಥಾಪಿಸಲಾದ ಕಾರ್ಮಿಕ ಕಾನೂನುಗಳ ಮಹತ್ವವನ್ನು ಕಾಂಗ್ರೆಸ್ ಮುಖ್ಯಸ್ಥರಾದ ಮಲ್ಲಿಕಾರ್ಜುನ್‌ ಖರ್ಗೆ ಉಲ್ಲೇಖಿಸಿದ್ದಾರೆ. ಒಬ್ಬ ಕೂಲಿ ಮಾಡುವವನು ಎಂಟು ಗಂಟೆ ಕೆಲಸ ಮಾಡಿ ಸುಸ್ತಾಗುತ್ತಾನೆ.

ಅದಕ್ಕಾಗಿಯೇ ನೆಹರೂ ಹಾಗೂ ಅಂಬೇಡ್ಕರ್ ಅವರು ಕಾರ್ಮಿಕ ಕಾಯಿದೆಯನ್ನು ರಚಿಸುವಾಗ ಕಾರ್ಮಿಕರನ್ನು ಎಂಟು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿಸಬಾರದು ಎಂದು ಹೇಳಿದ್ದರು. ಇದನ್ನೇ ನಾನು ನಂಬಿದ್ದೇವೆ ಎಂದು ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Congress President Mallikarjun Kharge Criticizes L amp amp T CEO Statement On 90-Hour Work Week

ಯಾರೋ ಒಂಬತ್ತು ಗಂಟೆಗಳ ಕಾಲ ಕೆಲಸದ ಅವಧಿ ಬಗ್ಗೆ ಹೇಳಿದರು. ಆದರೆ ಎಲ್&ಟಿ ಮುಖ್ಯಸ್ಥರು ಈಗ 12 ಗಂಟೆ, 14 ಗಂಟೆಗಳ ಕಾಲ ಮಾತನಾಡುತ್ತಿದ್ದಾರೆ. ಆ ದೃಷ್ಟಿಕೋನವನ್ನು ಅವರು ಮೊದಲು ಬಿಡಬೇಕು ಎಂದು ಖರ್ಗೆ ಅವರು ಸಲಹೆ ಕೂಡ ನೀಡಿದ್ದಾರೆ.

ಆದರೆ, ನಾನು ಆ ಕಂಪನಿಗೆ ಧನ್ಯವಾದ ಹೇಳುತ್ತೇನೆ. ಏಕೆಂದರೆ, ಅವರು ಕಾಂಗ್ರೆಸ್‌ ಪಕ್ಷದ ಕಚೇರಿ ನಿರ್ಮಾಣದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕಾರ್ಮಿಕರ ಶ್ರಮಕ್ಕಾಗಿ ನಾನು ಕೂಡ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.

ಎಲ್&ಟಿ ಸಿಇಒ ಸುಬ್ರಮಣಿಯನ್ ಅವರು ಇತ್ತೀಚೆಗೆ ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ್ದರು. ಈ ಹೇಳಿಕೆ ಬಗ್ಗೆ ದೇಶದಾದ್ಯಂತ ಭಾರೀ ವಿರೋಧ ಎದುರಿಸುತ್ತಿದೆ. ಕಾರ್ಮಿಕ ವಲಯದಿಂದ ಈ ಹೇಳಿಕೆಗೆ ಭಾರಿ ಆಕ್ಷೇಪ ವ್ಯಕ್ತವಾಗಿದೆ.

ಐಟಿ ವಲಯದ ಸಿಬ್ಬಂದಿಯಂತೂ ಈ ಹೇಳಿಕೆ ನೀಡಿದ ಎಲ್&ಟಿ ಸಿಇಒಗೆ ಸಾಷ್ಟಾಂಗ ನಮಸ್ಕಾರ ಹಾಕುತ್ತಿದ್ದಾರೆ. ಇದಕ್ಕೂ ಮುನ್ನ ಇನ್ಫೋಸಿಸ್‌ನ ನಾರಾಯಣಮೂರ್ತಿ ಅವರು ವಾರಕ್ಕೆ 70 ದಿನಗಳು ಕೆಲಸ ಮಾಡುವಂತೆ ಯುವಜನರಿಗೆ ಕರೆ ನೀಡಿದ್ದರು. ಇದಕ್ಕೂ ದೇಶದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+