ಜಾಮೀನಿನ ಮೇಲಿರುವ ಸೋನಿಯಾ, ರಾಹುಲ್ ರಿಂದ ಆರೋಪ: ಗೇಲಿ ಮಾಡಿದ ಮೋದಿ
"ಕಾಂಗ್ರೆಸ್ ಪಕ್ಷದ ರಾಜಕಾರಣ ಆರಂಭವಾಗುವುದು ಹಾಗೂ ಕೊನೆಯಾಗುವುದು ಒಂದು ಕುಟುಂಬದಿಂದಲೇ" ಮತ್ತು ಆ ಪಕ್ಷ ಜನರಿಂದ ದೂರ ಇದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ವಿರುದ್ಧ ಸೋಮವಾರ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ನವೆಂಬರ್ 20ನೇ ತಾರೀಕು ಛತ್ತೀಸ್ ಗಢದಲ್ಲಿ ಎರಡನೇ ಹಂತದ ಮತದಾನ ನಡೆಯಲಿದ್ದು, ಸೋಮವಾರದಂದು ಬಿಲಾಸ್ ಪುರ್ ನಲ್ಲಿ ಚುನಾವಣೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ಸರಕಾರದ ಅವಧಿಯಲ್ಲಿ ಆಗುತ್ತಿರುವ ಬೆಳವಣಿಗೆಯು ವೇಗವಾಗಿದೆ. ಆದರೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ರಾಜ್ಯವು ಬಹಳ ಹಿಂದುಳಿದಿತ್ತು ಎಂದಿದ್ದಾರೆ.
ಕಾಂಗ್ರೆಸ್ ರಾಜಕಾರಣವು ಒಂದು ಕುಟುಂಬದ ಮೇಲೆ ಕೇಂದ್ರೀಕೃತವಾಗಿದೆ. ಯಾವ ಬಡವರು ಅಡುಗೆ ಅನಿಲ ಸಂಪರ್ಕ ಅಥವಾ ಬ್ಯಾಂಕ್ ಬ್ಯಾಲನ್ಸ್ ಬಯಸುವುದಿಲ್ಲ? ಆದರೆ ಕಾಂಗ್ರೆಸ್ ನಲ್ಲಿನ ಕುಟುಂಬ ಜನರಿಂದ ದೂರವಾಗಿದೆ. ಬದಲಾವಣೆ ತರುವುದಕ್ಕೆ ಅವರಲ್ಲಿ ನಾಯಕತ್ವ ಇಲ್ಲ, ಮುಂದೆಯೂ ಇರುವುದಿಲ್ಲ ಎಂದು ಆರೋಪಿಸಿದ್ದಾರೆ.

ಅಪನಗದೀಕರಣದ ಕಾರಣಕ್ಕೆ ಜಾಮೀನು ಕೇಳುವ ಸ್ಥಿತಿ ಬಂತು
ಅಪನಗದೀಕರಣದ ಬಗ್ಗೆ ಪ್ರಶ್ನೆ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತಾಯಿ ಹಾಗೂ ಮಗ ಜಾಮೀನು ಪಡೆದು ಹೊರಗೆ ಇದ್ದಾರೆ ಎಂದು ಟೀಕಿಸಿದ್ದಾರೆ. ಅಪನಗದೀಕರಣದ ಕಾರಣಕ್ಕೆ ಜಾಮೀನು ಕೇಳುವ ಸ್ಥಿತಿ ಬಂದಿದೆ ಎಂಬುದನ್ನು ಅವರು ಮರೆತಿದ್ದಾರೆ. ಯಾರು ಜಾಮೀನು ನೀಡಿ ಎಂದು ಕೇಳುತ್ತಿದ್ದಾರೋ ಅವರು ಮೋದಿಗೆ ಸರ್ಟಿಫಿಕೇಟ್ ನೀಡುತ್ತಿದ್ದಾರೆ ಎಂದು ಗೇಲಿ ಮಾಡಿದ್ದಾರೆ.

ಅಭಿವೃದ್ಧಿಯಿಂದ ಭೇದ ಹೋಗಲಾಡಿಸಲು ಸಾಧ್ಯ್
ಬಡವ-ಶ್ರೀಮಂತ, ಹಳ್ಳಿ-ನಗರ ಈ ರೀತಿ ಭೇದ ಸೃಷ್ಟಿಸಲು ಕೆಲವರು ಬಯಸುತ್ತಾರೆ. ಭೇದವನ್ನು ಹೋಗಲಾಡಿಸಿದರೆ ಭಾರತದ ಅಭಿವೃದ್ಧಿ ಆಗುತ್ತದೆ ಎಂದು ಬಿಜೆಪಿ ನಂಬುತ್ತದೆ. ಅಭಿವೃದ್ಧಿಯಿಂದ ಮಾತ್ರ ಅದು ಸಾಧ್ಯ. ಅದಕ್ಕಾಗಿ ಬಿಜೆಪಿ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

150 ಸಲ 'ಸರ್' ಎಂದು ಸಂಬೋಧನೆ
ಕಾಂಗ್ರೆಸ್ ಅಧ್ಯಕ್ಷರನ್ನು ಗುರಿ ಮಾಡಿಕೊಂಡ ನರೇಂದ್ರ ಮೋದಿ, ದೇಶದ ಹಳೆಯ ಪಕ್ಷವು 36 ಅಂಶವನ್ನು ಒಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಅದರಲ್ಲಿ ರಾಹುಲ್ ಗಾಂಧಿ ಅವರನ್ನು 150 ಸಲ 'ಸರ್' ಎಂದು ಸಂಬೋಧಿಸಲಾಗಿದೆ. ಕಾಂಗ್ರೆಸ್ ನವರಿಗೆ ಛತ್ತೀಸ್ ಗಢಕ್ಕಿಂತ ರಾಹುಲ್ ಗಾಂಧಿ ಎಷ್ಟು ಮುಖ್ಯ ಎಂಬುದು ಇದರಲ್ಲೇ ಗೊತ್ತಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.

90 ವಿಧಾನಸಭಾ ಸ್ಥಾನಗಳಿರುವ ಛತ್ತೀಸ್ ಗಢ
ಛತ್ತೀಸ್ ಗಢದಲ್ಲಿ ಒಟ್ಟು 90 ವಿಧಾನಸಭಾ ಸ್ಥಾನಗಳಿದ್ದು, ನವೆಂಬರ್ 11ರಂದು ಮೊದಲ ಹಂತವಾಗಿ 18 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಉಳಿದ 72 ಸ್ಥಾನಗಳಿಗೆ ನವೆಂಬರ್ 20ರಂದು ಮತದಾನ ನಡೆಯಲಿದೆ. ಬಿಜೆಪಿಯ ರಮಣ್ ಸಿಂಗ್ ರಾಜ್ಯದಲ್ಲಿ ನಾಲ್ಕನೇ ಬಾರಿಗೆ ಅಧಿಕಾರ ಚುಕ್ಕಾಣಿ ಹಿಡಿಯುವ ನಂಬಿಕೆಯಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರು ತಮ್ಮ ಹೊಸ ಪಕ್ಷವನ್ನು ಮಾಯಾವತಿಯವರ ಬಿಎಸ್ ಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ದಲಿತರ ಮತಗಳನ್ನು ಸೆಳೆಯಲು ಮಾಯಾವತಿ ಪಕ್ಷದ ಜತೆಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಗೆ ಸಾಧ್ಯವಾಗಿಲ್ಲ.
-
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ












Click it and Unblock the Notifications