• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಮಚೇಷ್ಟೆ ಚಾಳಿ ಬಿಡದ ಎನ್ ಡಿ ತಿವಾರಿ!

By Srinath
|

ಲಖ್ನೋ, ಸೆ.24: ಕಾಂಗ್ರೆಸ್ ಪಕ್ಷದ ವಯೋವೃದ್ಧ ನಾಯಕ ಎನ್ ಡಿ ತಿವಾರಿ ಮತ್ತೊಮ್ಮೆ ತಮ್ಮ ಕಾಮಚೇಷ್ಟೆಯನ್ನು ಜಗಜ್ಜಾಹೀರು ಮಾಡಿದ್ದಾರೆ. ಆಂಧ್ರದಲ್ಲಿ ರಾಜ್ಯಪಾಲರಾಗಿದ್ದಾಗ ಕಾಮಕ್ರೀಡೆಯಲ್ಲಿ ತೊಡಗಿ ವಿವಾದಕ್ಕೀಡಾಗಿದ್ದ ತಿವಾರಿ ನಿನ್ನೆ ಲಖ್ನೋದಲ್ಲಿ ಕಾರ್ಯಕ್ರಮದ ನಿರೂಪಕಿ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ.

ಸ್ವಂತ ಮಗನಿಗೆ ತಾನೇ ಅಪ್ಪ ಎಂದು ನಿರಾಕರಿಸುತ್ತಾ ಬಂದು ಕೊನೆಗೆ ಸುಪ್ರೀಂಕೊರ್ಟಿನಲ್ಲಿ ಡಿಎನ್ಎ ಪರೀಕ್ಷೆ ಮೂಲಕ ತಿವಾರಿಯೇ ನನ್ನ ಅಪ್ಪ ಎಂದು ನಿರೂಪಿಸುವ ಹಂತಕ್ಕೆ ವಿಷಯವನ್ನು ಕೊಂಡೊಯ್ದಿದ್ದ ತಿವಾರಿ ಅವರು ಸೋಮವಾರ ಈ ಪ್ರಹಸನಕ್ಕೆ ಕಾರಣೀಭೂತರಾಗಿದ್ದಾರೆ.

ದೇಶಕ್ಕಾಗಿ ಪ್ರಾಣತೆತ್ತ ಯೋಧರನ್ನು ಸ್ಮರಿಸುವ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ತಿವಾರಿ ಪಾಲ್ಗೊಂಡಿದ್ದರು. ಆದರೆ ಕಾರ್ಯಕ್ರಮದ ಮಧ್ಯೆ ತಿವಾರಿ ಅವರಿಗೆ ಅದೇನಾಯಿತೋ ಏನೋ ಸೀದಾ ನಿರೂಪಕಿಯ ಬಳಿ ಸಾಗಿದವರೆ ಆಕೆಯ ಭುಜದ ಮೇಲೆ ಕೈಹಾಕಿ ನರ್ತಿಸು ಬಾ ಎಂದು ಆಹ್ವಾನಿಸಿದ್ದಾರೆ.

ತೀವ್ರ ಮುಜುಗರಕ್ಕೀಡಾದ ಆಕೆ ಹಿಂಜರಿದಾಗ ಆಕೆಯ ತಲೆಗೂದನ್ನು ಹಿಡಿದೆಳೆದು ಮತ್ತೂ ಬಲವಂತಪಡಿಸಿದ್ದಾರೆ. ಅಷ್ಟಕ್ಕೇ ನಿಲ್ಲದ ನಾರಾಯಣ ದತ್ತ ತಿವಾರಿ ಅವರು ಆಕೆಯ ಜತೆ ನಾಲ್ಕು ಹೆಜ್ಜೆ ಹಾಕಿ ತಮ್ಮ ಮನದಾಸೆ ನೆರವೇರಿಸಿಕೊಂಡಿದ್ದಾರೆ.

90 ವರ್ಷದ ವಯೋವೃದ್ಧ ನಾಯಕನ ಈ ಅವತಾರವನ್ನು ಕಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ಹೇಸಿಗೆ ಪಡುವಂತಾಯಿತು. ನಿರೂಪಕಿಯ ಹೆಗಲ ಮೇಲೆ ಕೈಹಾಕಿ ಟಪ್ಪಾಂಗುಚ್ಚಿ ಹೆಜ್ಜೆ ಹಾಕತೊಡಗಿದ್ದ ಆದರೆ ಅವರ ಕಾಲ ಮೇಲೆ ಅವರೇ ನಿಲ್ಲಲಾಗದಷ್ಟು ನಿತ್ರಾಣರಾಗಿರುವ ತಿವಾರಿ ಅವರನ್ನು ಕೊನೆಗೆ ಅವರ ಅಂಗರಕ್ಷಕರು ಹೆಗಲಿಗೆ ಹೆಗಲು ಕೊಟ್ಟು ಕರೆದೊಯ್ಯುವಂತಾಯಿತು. ಆದರೆ ಇದಿಷ್ಟೂ ವಿಡಿಯೋದಲ್ಲಿ ದಾಖಲಾಗಿದ್ದು, ಅಂತರ್ಜಾಲದಲ್ಲಿ ಜನ ವಿಡಿಯೋವನ್ನು ನೋಡಿ ಅಸಹ್ಯಪಟ್ಟುಕೊಳ್ಳುವಂತಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress leader ND Tiwari shakes a leg with show host forces her to dance with him. During a cultural event where martyrs were being remembered at Lucknow on Monday, former Uttar Pradesh and Uttarakhand chief minister Naryayan Dutt Tiwari forcibly began dancing with the show's host. He caught hold of her and forced her to dance with him. She became uncomfortable, but he did not loosen his grip and continued dancing with her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more