ಧ್ವಜಾರೋಹಣದ ವೇಳೆ ಅಮಿತ್ ಶಾ ಕೈಯಿಂದ ರಾಷ್ಟಧ್ವಜ ನೆಲಕ್ಕೆ ಬಿದ್ದಾಗ..
ನವದೆಹಲಿ, ಆಗಸ್ಟ್ 15: ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರ ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಘೋಷಣೆ.. 72ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷರು ಧ್ವಜಾರೋಹಣ ಮಾಡುವ ವೇಳೆ, ರಾಷ್ಟ್ರಧ್ವಜ ನೆಲಕ್ಕೆ ಬಿದ್ದ ಘಟನೆ ವರದಿಯಾಗಿದೆ.
ಪಕ್ಷದ ಹೆಡ್ ಕ್ವಾಟ್ರಸ್ ನಲ್ಲಿ ರಾಷ್ಟ್ರಧ್ವಜ ಹಾರಿಸುವ ವೇಳೆ, ಅಮಿತ್ ಶಾ ಧ್ವಜದ ದಾರವನ್ನು ತೆರೆಯುವ ವೇಳೆ, ದಾರ ಕೈಯಿಂದ ಜಾರಿದೆ, ಧ್ವಜ ಜಾರಿ ನೆಲಕ್ಕೆ ಬಿದ್ದಿದೆ.
ಧ್ವಜ ನೆಲ್ಲಕ್ಕೆ ಬಿದ್ದ ಕೂಡಲೇ ಎಚ್ಚೆತ್ತಕೊಂಡ ಅಮಿತ್ ಶಾ ಮತ್ತೆ ದಾರವನ್ನು ಮೇಲೆಳೆದು ಧ್ವಜಾರೋಹಣ ನಡೆಸಿ, ಧ್ವಜಕ್ಕೆ ಸೆಲ್ಯೂಟ್ ಹೊಡೆದಿದ್ದಾರೆ. ಆದರೆ, ಧ್ವಜ ಕೆಳಗೆ ಬೀಳುವ ಕೆಲವೇ ಕ್ಷಣದ ಆ ವಿಡಿಯೋವನ್ನು ವಿರೋಧ ಪಕ್ಷಗಳು ಬಿಜೆಪಿಯನ್ನು ಟಾರ್ಗೆಟ್ ಮಾಡಲು ಬಳಸಿಕೊಂಡಿವೆ.

ದೇಶದ ಧ್ವಜವನ್ನು ಸಂಬಾಳಿಸಲಾಗದ ವ್ಯಕ್ತಿ, ದೇಶವನ್ನು ಇನ್ನೇಗೆ ಸಂಬಾಳಿಸಿಯಾರು ಎಂದು ಕಾಂಗ್ರೆಸ್ ಟ್ವೀಟ್ ಮೂಲಕ, ಬಿಜೆಪಿಯ ಕಾಲೆಳೆದಿದೆ. ಅಮಿತ್ ಶಾ ಅವರನ್ನು ಟೀಕಿಸಲು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡಾ ಮರೆತಿಲ್ಲ.
जो देश का झंडा नहीं संभाल सकते, वो देश क्या संभालेंगे?
— Congress (@INCIndia) August 15, 2018
50 साल से ज्यादा देश के तिरंगे का तिरस्कार करने वालों ने अगर ये नहीं किया होता तो शायद आज तिरंगे का ऐसा अपमान न होता।
दूसरों को देशभक्ति का सर्टिफिकेट देने वालों को राष्ट्रगान का तौर-तरीका तक पता नहीं। pic.twitter.com/FmiEI5B7D7
ವ್ಯಕ್ತಿ ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಪ್ರಕೃತಿಯ ಮುಂದೆ ಏನೇನೂ ಅಲ್ಲ. ನಮ್ಮ ದೇಶದ ತ್ರಿವರ್ಣ ಧ್ವಜ ಅಮಿತ್ ಶಾ ಅವರ ಕೈಯಿಂದ ಧ್ವಜಾರೋಹಣ ಮಾಡಿಸಿಕೊಳ್ಳಲು ನಿರಾಕರಿಸಿತು. ಭಾರತ ಮಾತೆ ಕೂಡಾ ಶಾ ಬಗ್ಗೆ ದುಃಖಿಯಾಗಿದ್ದೇನೆಂದು ಎಂದು ಹೇಳಿರಬಹುದು ಎಂದು ಕೇಜ್ರಿವಾಲ್ ಲೇವಡಿ ಮಾಡಿದ್ದಾರೆ.












Click it and Unblock the Notifications