ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಪರ್ ಸ್ಟಾರ್ ಶ್ರೀದೇವಿಗೆ ಕಾಂಗ್ರೆಸ್ಸಿನಿಂದ ಅಪಮಾನ!

By Mahesh
|
Google Oneindia Kannada News

Recommended Video

ಬಾಲಿವುಡ್ ತಾರೆ ಶ್ರೀದೇವಿಗೆ ಕಾಂಗ್ರೆಸ್ ನಿಂದ ಅವಮಾನ | Oneindia Kannada

ಮೋಹಕ ತಾರೆ, ಚಿತ್ರರಂಗದ ಸೂಪರ್ ಸ್ಟಾರ್ ಶ್ರೀದೇವಿಯವರ ಅಕಾಲಿಕ ಸಾವಿನ ದುಃಖಕ್ಕೆ ಸಂತಾಪ ಸೂಚಿಸಿ, ವಿವಿಧ ಕ್ಷೇತ್ರದ ಗಣ್ಯರಿಂದ ಟ್ವೀಟ್ ಗಳು ಮಹಾಪೂರವೇ ಹರಿದು ಬಂದಿದೆ.

ಭಾರತೀಯ ಚಿತ್ರರಂಗವನ್ನು ಶೋಕ ಸಾಗರದಲ್ಲಿ ಮುಳುಗಿರುವ ಸಂದರ್ಭದಲ್ಲಿ ದೇಶದ ಅತ್ಯಂತ ಪುರಾತನ ಪಕ್ಷ ಕೂಡಾ ಶ್ರೀದೇವಿ ಅವರ ಸಾವಿನ ಬಗ್ಗೆ ಟ್ವೀಟ್ ಮಾಡಿದೆ.

ಆದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿಕೃತ ಟ್ವಿಟರ್ ಖಾತೆಯಿಂದ ನಟಿ ಶ್ರೀದೇವಿ ಸಾವಿಗೆ ಸಂತಾಪ ಸೂಚಿಸಿದ ಟ್ವೀಟ್ ನ ಬರೆದ ಸಾಲುಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಟ್ವೀಟ್‌ ನ ಕೊನೆಯ ಸಾಲುಗಳಲ್ಲಿ '2013 ರ ಯುಪಿಎ ಸರ್ಕಾರದ ಅವಧಿಯಲ್ಲಿ ನಟಿ ಶ್ರೀದೇವಿ ಪದ್ಮ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು' ಎಂದು ಬರೆಯಲಾಗಿದೆ.

ಸಾವಿನಲ್ಲಿಯೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹಲವಾರು ಮಂದಿ ಕಾಂಗ್ರೆಸ್‌ ಪಕ್ಷದ ವಿರುದ್ಧ ಟ್ವೀಟ್‌ ಮಾಡಿದ್ದಾರೆ. ಟ್ವೀಟ್ ಗಳ ಸಂಗ್ರಹ ಇಲ್ಲಿದೆ...

ಕಾಂಗ್ರೆಸ್ ಟ್ವೀಟ್ ಬಗ್ಗೆ ವಿರೋಧ

ಕಾಂಗ್ರೆಸ್ ಟ್ವೀಟ್ ಬಗ್ಗೆ ವಿರೋಧ

ಟ್ವೀಟ್ ನಲ್ಲಾದ ಪ್ರಮಾದ ಬಗ್ಗೆ ವಿರೋಧ ಕೇಳಿ ಬರುತ್ತಿದ್ದಂತೆ ಟ್ವೀಟ್ ಡಿಲೀಟ್ ಮಾಡಲಾಗಿದೆ. ಮತ್ತೆ ಸಂತಾಪ ಸೂಚಿಸಿದ ಟ್ವೀಟ್ ಬಂದಿದೆ. ಆದರೆ, ಕಾಂಗ್ರೆಸ್‌ ವಿರುದ್ಧದ ಆಕ್ರೋಶದ ಟ್ವೀಟ್ ಗಳು ನಿಂತಿಲ್ಲ.

ನೆಹರೂ ಕಾಲದಲ್ಲಿ ಹುಟ್ಟಿದ್ದು

ನೆಹರೂ ಕಾಲದಲ್ಲಿ ಹುಟ್ಟಿದ್ದು

ಇದರ ಜತೆಗೆ ನೆಹರೂ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಶ್ರೇದೇವಿ ಜನಸಿದ್ದು ಎಂಬುದನ್ನು ಸೇರಿಸಿಕೊಳ್ಳಿ ಎಂದು ಕಾಂಗ್ರೆಸ್ಸಿಗೆ ಟ್ವೀಟ್ ಪೆಟ್ಟು ನೀಡಲಾಗಿದೆ.

ಕಾಂಗ್ರೆಸ್ಸಿನವರು ಮೂರ್ಖರು

ಕಾಂಗ್ರೆಸ್ಸಿನವರು ಮೂರ್ಖರು

ಎಂಥಾ ಸಂದರ್ಭದಲ್ಲಿ ಎಂಥಾ ಮಾತು, ಕಾಂಗ್ರೆಸ್ಸಿನವರು ಮೂರ್ಖರು. ಈಗ ಪದ್ಮಶ್ರೀ ಕೊಟ್ಟಿದ್ದು ನಮ್ಮ ಕಾಲದಲ್ಲಿ ಎಂದು ಹೇಳಬೇಕಾಗಿತ್ತಾ? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಕಾಲದಲ್ಲಿ ಜೀವಿಸಿದ್ದರು

ಕಾಂಗ್ರೆಸ್ ಕಾಲದಲ್ಲಿ ಜೀವಿಸಿದ್ದರು

ಪದ್ಮಶ್ರೀ ಬಗ್ಗೆ ಮಾತ್ರ ಏಕೆ ಹೇಳುತ್ತಿದ್ದೀರಿ? ಅವರು ಕಾಂಗ್ರೆಸ್ ಅಧಿಕಾರವಿದ್ದ ಕಾಲದಲ್ಲಿ ಜೀವಿಸಿದ್ದರು, ಊಟ ಮಾಡಿದರು, ಉಸಿರಾಡಿಕೊಂಡಿದ್ದರು ಎಂದು ಹೇಳಿ..

English summary
Congress party stooped down to ridiculous levels as the official Twitter handle of the party tweeted a condolence message on Sridevi's demise at 7:03 am saying, "We regret to hear the passing of Sridevi.....She was awarded the Padma Shri by the UPA Govt in 2013."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X