ಹರ್ಯಾಣದಲ್ಲಿ ಕ್ರಿಕೆಟ್ ಆಡಿದ ರಾಹುಲ್ ಗಾಂಧಿ
ರೆವಾರಿ(ಹರ್ಯಾಣ), ಅಕ್ಟೋಬರ್ 19: ಹರ್ಯಾಣದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆಂದು ತೆರಳಿದ್ದ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ದೆಹಲಿಗೆ ತೆರಳದ ಕಾರಣ ಅವರು ಹರ್ಯಾಣದಲ್ಲೇ ಇದ್ದು, ಕ್ರಿಕೆಟ್ ಆಡಿದರು!
ದೆಹಲಿಗೆ ಹೊರಟಿದ್ದ ಅವರ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದ ಕಾರಣ ಹರ್ಯಾಣದಲ್ಲೇ ವಾಪಸ್ ಲ್ಯಾಂಡ್ ಆಯಿತು. ಹರ್ಯಾಣದಿಂದ 100 ಕಿಮೀ ದೂರದಲ್ಲಿರುವ ರೆವಾರಿಯಲ್ಲಿ ಅವರು ಕೆಲಹೊತ್ತು ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದರು.

ಕ್ರಿಕೆಟ್ ಆಡಿದ ನಂತರ ಕೆಲವು ಮಕ್ಕಳೊಂದಿಗೆ ಕಾಲ ಕಳೆದ ರಾಹುಲ್ ಗಾಂಧಿ, ನಂತರ ರಸ್ತೆ ಮಾರ್ಗವಾಗಿ ದೆಹಲಿಗೆ ತೆರಳಿದರು. ಹವಾಮಾನ ಪ್ರತಿಕೂಲವಾಗಿದ್ದ ಕಾರಣ ವಾಯುಮಾರ್ಗವಾಗಿ ಪ್ರಯಾಣಿಸುವುದು ಅಪಾಯಕಾರಿ ಎಂದು ಹೆಲಿಕಾಪ್ಟರ್ ಪೈಲಟ್ ಘೋಷಿಸಿದ ನಂತರ ರಾಹುಲ್ ಗಾಂಧಿ ರಸ್ತೆ ಮಾರ್ಗವಾಗಿಯೇ ದೆಹಲಿಗೆ ವಾಪಸ್ಸಾದರು.
ಅಕ್ಟೋಬರ್ 21 ರಂದು ನಡೆಯಲಿರುವ ಹರ್ಯಾಣಾ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪರ ಪ್ರಚಾರದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ನೆಲಕಚ್ಚಿರುವ ಆರ್ಥಿಕತೆಯನ್ನು ಸರಿದಾರಿಗೆ ತರಲು ಬಿಜೆಪಿ ಕಾಂಗ್ರೆಸ್ ನ ಪ್ರಣಾಳಿಕೆಯಲ್ಲಿರುವ ಉಪಾಯಗಳನ್ನು ಕದಿಯುವುದು ಒಳಿತು ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು.












Click it and Unblock the Notifications