ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ; ಭಾರತ್ ಜೋಡೋ ಯಾತ್ರೆ ವೇಳೆ ಮಾಜಿ ಸಚಿವರಿಗೆ ಗಾಯ

|
Google Oneindia Kannada News

ಹೈದರಾಬಾದ್‌, ನವೆಂಬರ್‌ 2: ಭಾರತ್ ಜೋಡೋ ಯಾತ್ರೆಯ 55ನೇ ದಿನದಂದು ಪೊಲೀಸರು ತಳ್ಳಿದ ಕಾರಣ ಕೆಳಗೆ ಬಿದ್ದ ಕಾಂಗ್ರೆಸ್ ನಾಯಕ, ಮಹಾರಾಷ್ಟ್ರದ ಮಾಜಿ ಇಂಧನ ಸಚಿವ ನಿತಿನ್ ರಾವುತ್ ಗಾಯಗೊಂಡಿದ್ದು, ನಂತರ ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಯಾತ್ರೆ ವೇಳೆ ನಿತಿನ್ ರಾವುತ್ ಅವರ ಬಲ ಕಣ್ಣು, ಕೈ ಮತ್ತು ಕಾಲಿಗೆ ಗಾಯಗಳಾಗಿವೆ. ನಾನು ಭಾರತ್ ಜೋಡೋ ಯಾತ್ರೆಯಲ್ಲಿದ್ದೆ ಮತ್ತು ಆಗಲೇ ಚಾರ್ಮಿನಾರ್ ದಾಟಿದ್ದೆ. ರಾಹುಲ್ ಗಾಂಧಿಯವರ ಬೆಂಗಾವಲು ಪಡೆ ಬಂದಾಗ ನಾನು ವೇದಿಕೆಯತ್ತ ಹೋಗುತ್ತಿದ್ದೆ. ಇದನ್ನು ನೋಡಿ ಪೊಲೀಸರು ಗಾಬರಿಗೊಂಡು ಜನರನ್ನು ಅಲ್ಲಿ ಇಲ್ಲಿಗೆ ತಳ್ಳಲು ಪ್ರಾರಂಭಿಸಿದರು. ಎಸಿಪಿ ನನ್ನ ಎದೆಯ ಮೇಲೆ ಎರಡೂ ಕೈಗಳನ್ನು ಇಟ್ಟು ಬಲವಾಗಿ ತಳ್ಳಿದರು. ನಾನು ರಸ್ತೆಯ ಬ್ಯಾರಿಕೇಡ್ ಬಳಿ ಬಿದ್ದು ಗಾಯಗೊಂಡಿದ್ದೇನೆ. ನನಗೆ ರಕ್ತಸ್ರಾವ ಪ್ರಾರಂಭವಾಯಿತು ಆಗ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಕಾಂಗ್ರೆಸ್ ನಾಯಕ ನಿತಿನ್ ರಾವುತ್‌ ತಿಳಿಸಿದರು.

ತೆಲಂಗಾಣ: ಮುನುಗೋಡೆ ಉಪಚುನಾವಣೆ ಪ್ರಚಾರ ಅಂತ್ಯ, ನ.3ಕ್ಕೆ ಮತದಾನತೆಲಂಗಾಣ: ಮುನುಗೋಡೆ ಉಪಚುನಾವಣೆ ಪ್ರಚಾರ ಅಂತ್ಯ, ನ.3ಕ್ಕೆ ಮತದಾನ

ಭಾರತ್ ಜೋಡೋ ಯಾತ್ರೆಯು ಹೈದರಾಬಾದ್ ನಗರದಿಂದ ಮೆರವಣಿಗೆಯನ್ನು ಪುನರಾರಂಭಿಸಿದ ನಂತರ ಈ ಘಟನೆ ನಡೆಯಿತು. ಈ ವೇಳೆ ನಟಿ, ಚಿತ್ರ ನಿರ್ಮಾಪಕಿ ಪೂಜಾ ಭಟ್ ಅವರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಹೈದರಾಬಾದ್‌ನ ಬೋವೆಪಲ್ಲಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾರತ್ ಜೋಡೋ ಯಾತ್ರೆಯ ಮೆರವಣಿಗೆಯಲ್ಲಿ ಸಂವಾದ ನಡೆಸಿದರು.

ರಾಹುಲ್ ಗಾಂಧಿಯವರು ನಮ್ಮ ಭಾರತ್ ಜೋಡೋ ಯಾತ್ರೆಗೆ ಧನಾತ್ಮಕ ಶಕ್ತಿಯನ್ನು ತರುತ್ತಾರೆ. ಇದು ನಮ್ಮ ಪಕ್ಷದ ಕಾರ್ಯಕರ್ತರಿಗೆ ಸ್ಫೂರ್ತಿಯ ಉತ್ತಮ ಮೂಲವಾಗಿದೆ. ಭಾರತ್ ಜೋಡೋ ಯಾತ್ರೆಯು ರಾಜಕೀಯ ಚಿತ್ರಣವನ್ನು ಬದಲಾಯಿಸುವ ಮೌನ ಕ್ರಾಂತಿಯನ್ನು ತರುತ್ತಿದೆ ಎಂದು ಖರ್ಗೆ ಹೇಳಿದ್ದಾರೆ.

ಮಂಗಳವಾರ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷ ಮತ್ತು ಸಚಿವ ಕೆಟಿ ರಾಮರಾವ್ (ಕೆಟಿಆರ್) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ವನ್ನಾಬೇ ಪಿಎಂ ಎಂದು ಕರೆದರು. ಅವರು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರ ರಾಷ್ಟ್ರೀಯ ಪಕ್ಷದ ಮಹತ್ವಾಕಾಂಕ್ಷೆಗಳನ್ನು ಅಪಹಾಸ್ಯ ಮಾಡುವುದಕ್ಕಿಂತ ಸಂಸದರಾಗಿ ಮೊದಲು ತನ್ನ ಜನರನ್ನು ಆಯ್ಕೆ ಮಾಡಲು ಮನವೊಲಿಸಬೇಕು ಎಂದು ಹೇಳಿದ್ದಾರೆ.

ಕೆಸಿಆರ್ ಲೇವಡಿ ಮಾಡಿದ ರಾಹುಲ್‌ ಗಾಂಧಿ

ಕೆಸಿಆರ್ ಲೇವಡಿ ಮಾಡಿದ ರಾಹುಲ್‌ ಗಾಂಧಿ

ಅಂತಾರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಅಮೇಥಿಯಲ್ಲಿ ತಮ್ಮದೇ ಆದ ಸಂಸತ್ತಿನ ಸ್ಥಾನವನ್ನು ಸಹ ಗೆಲ್ಲಲು ಸಾಧ್ಯವಿಲ್ಲ ಎಂದು ಕೆಟಿಆರ್ ಟ್ವೀಟ್‌ ಮಾಡಿದ್ದಾರೆ. ವನ್ನಾಬೆ ಪಿಎಂ ಮೊದಲು ತಮ್ಮ ಜನರಿಗೆ ಮನವರಿಕೆ ಮಾಡಿ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಬೇಕು ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಮೊದಲ ಯಾತ್ರೆ ಮನದಿಂದ ಆರಂಭ

ಮೊದಲ ಯಾತ್ರೆ ಮನದಿಂದ ಆರಂಭ

ಏತನ್ಮಧ್ಯೆ, ಭಾರತ್ ಜೋಡೋ ಯಾತ್ರೆಯು ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿಯು ನವೆಂಬರ್ 7 ರಂದು ಚಮೋಲಿ ಜಿಲ್ಲೆಯ ಮನ ಗ್ರಾಮದಿಂದ ಮೂರು ದಿನಗಳ ಯಾತ್ರೆಯನ್ನು ಪ್ರಾರಂಭಿಸಲಿದೆ. ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯದ ಐದು ಸ್ಥಳಗಳಿಂದ ಪಾದಯಾತ್ರೆ ನಡೆಸಲಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕರಣ್ ಮಹಾರಾ ತಿಳಿಸಿದ್ದಾರೆ. ಇಂತಹ ಮೊದಲ ಯಾತ್ರೆ ಮನದಿಂದ ಆರಂಭವಾಗುತ್ತಿದೆ. ಅದೇ ರೀತಿ ಕುಮಾವೂನ್ ಮತ್ತು ಗರ್ವಾಲ್‌ನ ಇತರ ಭಾಗಗಳಿಂದ ವಿವಿಧ ಸಮಯಗಳಲ್ಲಿ ಯಾತ್ರೆಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ರಾಜ್ಯದ ಐದು ಕಡೆಗಳಿಂದ ಯಾತ್ರೆ

ರಾಜ್ಯದ ಐದು ಕಡೆಗಳಿಂದ ಯಾತ್ರೆ

ಪಾದಯಾತ್ರೆಯಲ್ಲಿ ಭಾರತ್ ಜೋಡೋ ಯಾತ್ರೆಯ ವಿಷಯಗಳಲ್ಲದೆ ರಾಜ್ಯ ಮಟ್ಟದ ವಿಷಯಗಳನ್ನೂ ಸೇರಿಸಲಾಗುವುದು. ರಾಜ್ಯದ ಐದು ಕಡೆಗಳಿಂದ ಆರಂಭವಾಗುವ ಈ ಯಾತ್ರೆಗಳು ತಮ್ಮ ನೇತೃತ್ವದಲ್ಲಿ ನಡೆಯಲಿದ್ದು, ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಮಹಾರಾ ಹೇಳಿದರು. ಅಕ್ಟೋಬರ್ 31ರಂದು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ ಮಂಗಳವಾರ ಅಸ್ಸಾಂನಿಂದ 834 ಕಿಮೀ ದೂರವನ್ನು ಕ್ರಮಿಸುವ ಗುರಿಯೊಂದಿಗೆ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಲು ಯೋಜಿಸಿದೆ.

ಅಸ್ಸಾಂನಲ್ಲಿ 834 ಕಿ.ಮೀ ಯಾತ್ರೆ

ಅಸ್ಸಾಂನಲ್ಲಿ 834 ಕಿ.ಮೀ ಯಾತ್ರೆ

ಮಂಗಳವಾರ ಎಪಿಸಿಸಿ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ನೇತೃತ್ವದಲ್ಲಿ ಅಸ್ಸಾಂ ಮೆರವಣಿಗೆ ನಡೆಯಲಿದ್ದು, 70 ದಿನಗಳಲ್ಲಿ ರಾಜ್ಯದಾದ್ಯಂತ 834 ಕಿ.ಮೀ. ಭಾರತ್ ಜೋಡೋ ಯಾತ್ರೆ, ಅಸ್ಸಾಂ ಧುಬ್ರಿ ಜಿಲ್ಲೆಯ ಗೋಲಕ್‌ಗಂಜ್‌ನಿಂದ ಅಸ್ಸಾಂ-ಪಶ್ಚಿಮ ಬಂಗಾಳದ ಗಡಿಯುದ್ದಕ್ಕೂ ಸಾದಿಯಾ ಜಿಲ್ಲೆಯವರೆಗೆ ಅಸ್ಸಾಂ-ಅರುಣಾಚಲ ಪ್ರದೇಶದ ಗಡಿಯುದ್ದಕ್ಕೂ ಪ್ರಾರಂಭವಾಗುತ್ತದೆ.

English summary
Congress leader, Former Maharashtra Energy Minister Nitin Raut fell down after being pushed by the police on the 55th day of the Bharat Jodo Yatra, He was injured and later admitted to a hospital in Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X