• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಯಸ್ಸು 60, ಕಾಂಗ್ರೆಸ್ ನಾಯಕನಿಗೆ ಈಗ ಮದುವೆ ಆಯ್ತು!

|

ನವದೆಹಲಿ, ಮಾರ್ಚ್ 09: ಕೇಂದ್ರ ಮಾಜಿ ಸಚಿವ ಮುಕುಲ್ ಬಾಲಕೃಷ್ಣ ವಾಸ್ನಿಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ 60ನೇ ವಯಸ್ಸಿನಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ ಕಾಂಗ್ರೆಸ್ ನಾಯಕ ಮುಕುಲ್ ಬಾಲಕೃಷ್ಣ ವಾಸ್ನಿಕ್.

ನಿನ್ನೆ ಭಾನುವಾರ (ಮಾರ್ಚ್ 08) ತಮ್ಮ ಬಹುಕಾಲದ ಗೆಳತಿ ರವೀನಾ ಖುರಾನಾ ರನ್ನ ಮುಕುಲ್ ಬಾಲಕೃಷ್ಣ ವಾಸ್ನಿಕ್ ವರಿಸಿದ್ದಾರೆ.

ತಂದೆಯಾಗಿ ಮಗಳ ಮದುವೆ ಮಾಡಿದ ಸಂತೋಷ ನನಗೆ: ಶ್ರೀರಾಮುಲು

ಪಂಚತಾರಾ ಹೋಟೆಲ್ ನಲ್ಲಿ ನಡೆದ ಮುಕುಲ್ ಬಾಲಕೃಷ್ಣ ವಾಸ್ನಿಕ್-ರವೀನಾ ಖರಾನಾ ವಿವಾಹಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್, ಕರ್ನಾಟಕದ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಸಾಕ್ಷಿಯಾದರು.

ಯಾರೀ ಮುಕುಲ್ ಬಾಲಕೃಷ್ಣ ವಾಸ್ನಿಕ್?

ಯಾರೀ ಮುಕುಲ್ ಬಾಲಕೃಷ್ಣ ವಾಸ್ನಿಕ್?

ಕಾಂಗ್ರೆಸ್ ನಾಯಕನಾಗಿರುವ ಮುಕುಲ್ ಬಾಲಕೃಷ್ಣ ವಾಸ್ನಿಕ್ ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ಕೂಡ ಹೌದು. 2009 ರಲ್ಲಿ ಮಹಾರಾಷ್ಟ್ರದ ರಾಮ್ತೇಕ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮುಕುಲ್ ಬಾಲಕೃಷ್ಣ ವಾಸ್ನಿಕ್ ಕೇಂದ್ರ ಸಚಿವನಾಗಿಯೂ ಗುರುತಿಸಿಕೊಂಡಿದ್ದರು.

ಇಳಿವಯಸ್ಸಿನಲ್ಲಿ ಮದುವೆ

ಇಳಿವಯಸ್ಸಿನಲ್ಲಿ ಮದುವೆ

ಕಾಂಗ್ರೆಸ್ ನಲ್ಲಿ ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದ ಮಹಾರಾಷ್ಟ್ರದ ಬಾಲಕೃಷ್ಣ ರಾಮಚಂದ್ರ ವಾಸ್ನಿಕ್ ರವರ ಪುತ್ರ ಈ ಮುಕುಲ್ ಬಾಲಕೃಷ್ಣ ವಾಸ್ನಿಕ್. 1988-90 ರಲ್ಲೇ ಭಾರತೀಯ ಯೂತ್ ಕಾಂಗ್ರೆಸ್ ಸೇರಿದ್ದ ಮುಕುಲ್, 1984-86 ರಲ್ಲಿ ಭಾರತದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ನ ರಾಷ್ಟ್ರೀಯ ಅಧ್ಯಕ್ಷನಾದರು. ಸಮಾಜದಲ್ಲಿ ಹಿಂದುಳಿದವರ ಏಳಿಗೆಗಾಗಿ ಶ್ರಮಿಸಲು ಇಡೀ ಜೀವನವನ್ನೇ ಮುಡಿಪಾಗಿಡುವೆ ಎಂದು ಹೇಳಿದ್ದ ಮುಕುಲ್ ಇದೀಗ ಇಳಿವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಂದು ಓಡಿ ಹೋಗಿದ್ದ ವಧುವಿನ ತಾಯಿ-ವರನ ತಂದೆ ಇಂದು ಮತ್ತೆ ಎಸ್ಕೇಪ್.!

ಶುಭ ಕೋರಿದ ಅಶೋಕ್ ಗೆಹ್ಲೋಟ್

''ಮುಕುಲ್ ವಾಸ್ನಿಕ್ ಮತ್ತು ರವೀನಾ ಖುರಾನಾಗೆ ನನ್ನ ಹೃದಯಪೂರ್ವಕ ಶುಭಾಶಯಗಳು. ಹೊಸ ಪಯಣ ಆರಂಭಿಸಿರುವ ನಿಮ್ಮ ಮುಂದಿನ ಜೀವನ ಸಂತೋಷವಾಗಿರಲಿ'' ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.

ಟ್ವೀಟ್ ಮಾಡಿದ ಮನೀಶ್ ತಿವಾರಿ

''ನವ ದಂಪತಿ ಮಕುಲ್ ವಾಸ್ನಿಕ್ ಮತ್ತು ರವೀನಾ ಖುರಾನಾಗೆ ಶುಭಾಶಯಗಳು. 1984 ರಲ್ಲಿ ಮುಕುಲ್ ವಾಸ್ನಿಕ್ ಮತ್ತು 1985 ರಲ್ಲಿ ರವೀನಾ ರನ್ನ ನಾನು ಮೀಟ್ ಮಾಡಿದ್ದೆ. ನಾವೆಲ್ಲರೂ ಮಾಸ್ಕೋದಲ್ಲಿ ನಡೆದ ವರ್ಲ್ಡ್ ಫೆಸ್ಟಿವಲ್ ಆಫ್ ಯೂತ್ ಅಂಡ್ ಸ್ಟೂಡೆಂಟ್ಸ್ ಗೆ ಹೋಗಿದ್ದವು. ಮುಕುಲ್ ಮತ್ತು ರವೀನಾಗೆ ದೇವರ ಆಶೀರ್ವಾದವಿರಲಿ'' ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಟ್ವೀಟ್ ಮಾಡಿದ್ದಾರೆ.

English summary
Congress Leader Mukul Wasnik gets married at 60.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X