ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಜೋಡೋ ಯಾತ್ರೆ ವೇಳೆ ನಿಧನರಾದ ಕೃಷ್ಣ ಕುಮಾರ್ ಪಾಂಡೆಗೆ ಕಾಂಗ್ರೆಸ್ ಸಂತಾಪ

|
Google Oneindia Kannada News

ಮುಂಬೈ, ನ. 08: ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯಲ್ಲಿ ಪಾದಯಾತ್ರೆ ಮಾಡುತ್ತಿದ್ದಾಗ ಕಾಂಗ್ರೆಸ್ ನಾಯಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

75 ವರ್ಷದ ಹಿರಿಯ ನಾಯಕ ಕೃಷ್ಣ ಕುಮಾರ್ ಪಾಂಡೆ ಅವರು ಕಾಂಗ್ರೆಸ್ ಸೇವಾದಳದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಕ್ಷದ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಟ್ವಿಟರ್‌ನಲ್ಲಿ ನಿಧನ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಕೆಜಿಎಫ್-2 ಸಂಗೀತ ಬಳಕೆ: ಕಾಂಗ್ರೆಸ್ ಟ್ವಿಟ್ಟರ್ ನಿರ್ಬಂಧ, ವಾಣಿಜ್ಯ ಕೋರ್ಟ್ ಆದೇಶದಲ್ಲೇನಿದೆ?ಕೆಜಿಎಫ್-2 ಸಂಗೀತ ಬಳಕೆ: ಕಾಂಗ್ರೆಸ್ ಟ್ವಿಟ್ಟರ್ ನಿರ್ಬಂಧ, ವಾಣಿಜ್ಯ ಕೋರ್ಟ್ ಆದೇಶದಲ್ಲೇನಿದೆ?

"ಭಾರತ್ ಜೋಡೋ ಯಾತ್ರೆಯ ಈ 62 ನೇ ಬೆಳಗ್ಗೆ, ಸೇವಾದಳದ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ ಪಾಂಡೆ ಅವರು ರಾಷ್ಟ್ರಧ್ವಜವನ್ನು ಹಿಡಿದು ನಡೆಯುತ್ತಿದ್ದರು. ಕೆಲವು ನಿಮಿಷಗಳ ನಂತರ ಅಭ್ಯಾಸದಂತೆ, ಅವರು ಸಹೋದ್ಯೋಗಿಗೆ ಧ್ವಜವನ್ನು ಹಸ್ತಾಂತರಿಸಿ ಕುಸಿದುಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಉಳಿಸಲಾಗಲಿಲ್ಲ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.

Congress leader Krishna Kumar Pandey Dies During Bharat Jodo Yatra

" ಕೃಷ್ಣ ಕುಮಾರ್ ಪಾಂಡೆ ಅವರು ಕಟ್ಟಾ ಕಾಂಗ್ರೆಸಿಗರಾಗಿದ್ದರು. ನಾಗಪುರದಲ್ಲಿ ಆರ್‌ಎಸ್‌ಎಸ್ ಅನ್ನು ಸಮರ್ಥವಾಗಿ ಎದುರಿಸುತ್ತಿದ್ದರು. ಇದು ಎಲ್ಲಾ ಪಾದಯಾತ್ರೆಗಳಿಗೆ ದುಖಃದ ಕ್ಷಣವಾಗಿದೆ" ಎಂದಿದ್ದಾರೆ. ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಪಕ್ಷದ ಬೆಂಬಲಿಗರು ಗೌರವ ಸಲ್ಲಿಸಲು ಮೌನವನ್ನು ಆಚರಿಸುತ್ತಿದ್ದಾರೆ.

ಪಕ್ಷದ ನಾಯಕ ರಾಹುಲ್ ಗಾಂಧಿ ಕೃಷ್ಣ ಕುಮಾರ್ ಪಾಂಡೆ ಅವರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ದೇಶಕ್ಕಾಗಿ ಅವರ ಸಮರ್ಪಣೆ ಪಕ್ಷದ ಕಾರ್ಯಕರ್ತರನ್ನು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದ 3,570 ಕಿಮೀ ಯಾತ್ರೆಯು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಮುಗಿಯಲಿದೆ. ಈಗಾಗಲೇ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಪಾದಯಾತ್ರೆ ಸಾಗಿದ್ದು, ಎರಡು ತಿಂಗಳ ನಂತರ ಮಹಾರಾಷ್ಟ್ರವನ್ನು ಪ್ರವೇಶಿಸಿದೆ.

ಮಹಾರಾಷ್ಟ್ರದಲ್ಲಿ, ಪಕ್ಷದ ಮಿತ್ರಪಕ್ಷಗಳಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಯಾತ್ರೆಯ ಭಾಗವಾಗುವಂತೆ ಕಾಂಗ್ರೆಸ್ ಆಹ್ವಾನಿಸಿದೆ.

ಶರದ್ ಪವಾರ್ ಅವರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾದ ನಂತರ ಅವರು ಪಾದಯಾತ್ರೆಯಲ್ಲಿ ಭಾಗವಹಿಸುವುದು ಅನುಮಾನವಾಗಿದೆ. ಮಾಜಿ ಸಚಿವ ಮತ್ತು ಶಿವಸೇನೆಯ ಯುವಸೇನೆ ಮುಖ್ಯಸ್ಥ ಆದಿತ್ಯ ಠಾಕ್ರೆ ಯಾತ್ರೆಯಲ್ಲಿ ಪಾಲ್ಗೊಳ್ಳಬಹುದು ಎಂದು ಶಿವಸೇನೆ ಮುಖಂಡರು ಹೇಳಿದ್ದಾರೆ.

English summary
Senior Congress leader Krishna Kumar Pandey died of a heart attack in the party's Bharat Jodo Yatra in Maharashtra. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X