ಕೇಂದ್ರ ಸಚಿವೆ ಸ್ಮತಿ ಇರಾನಿಗೆ ಟ್ವಿಟ್ಟರ್ ನಲ್ಲಿ ಟಾಂಗ್ ಕೊಟ್ಟ ರಮ್ಯಾ

Posted By:
Subscribe to Oneindia Kannada

ನವದೆಹಲಿ, ಜುಲೈ 23: ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ ಟಿ) ಟ್ವಿಟ್ಟರ್ ನಲ್ಲಿ ಹಾಡಿ ಹೊಗಳಿದ ಕೇಂದ್ರ ಜವಳಿ ಖಾತೆ ಸಚಿವೆ ಸೃತಿ ಇರಾನಿಗೆ, ರಾಜ್ಯ ಕಾಂಗ್ರೆಸ್ ನಾಯಕಿ ಹಾಗೂ ಚಿತ್ರ ನಟಿ ರಮ್ಯಾ ಅವರು ಸಖತ್ತಾಗಿ ಟಾಂಗ್ ನೀಡಿದ್ದಾರೆ.

ಸ್ಮೃತಿ ಇರಾನಿ ಅವರು, ಸರಕು ಮತ್ತು ಸೇವಾ ತೆರಿಗೆಯು ನಮ್ಮ ಪ್ರಧಾನಿ ಮೋದಿಯವರು ಹೇಳಿದಂತೆ ಕೇವಲ ಗುಡ್ ಆ್ಯಂಡ್ ಸಿಂಪಲ್ ಟ್ಯಾಕ್ಸ್ ಮಾತ್ರವಲ್ಲ, ಆಡಳಿತದಲ್ಲಿ ಪಾರದರ್ಶಕತೆ ತರುವಲ್ಲಿ ಮಹತ್ತರ ಹೆಜ್ಜೆ ಎಂದು ಟ್ವೀಟ್ ಮಾಡಿದ್ದರು.

ಪಿಎಂ ಮೋದಿ ವಿದೇಶ ಪ್ರವಾಸ: ರಮ್ಯಾ ನೀಡಿದ್ದ ಹೇಳಿಕೆ ಸುಳ್ಳೇ..ಸುಳ್ಳು

Congress Leader, actress Ramya takes dig at Smriti Irani in Twitter

ಇದ ಪ್ರತಿ ಟ್ವೀಟ್ ಮಾಡಿರುವ ರಮ್ಯಾ, ''ಲೋಕಪಾಲ್ ಮಸೂದೆ ತರುತ್ತಾರೆಂದು ಮೂರು ವರ್ಷಗಳಿಂದ ನಿರೀಕ್ಷಿಸುತ್ತಲೇ ಇದ್ದೇವೆ. ಅದಿನ್ನೂ ಜಾರಿಗೆ ಬಂದಿಲ್ಲ. ಇನ್ನು, ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಾಹಿತಿ ಹಕ್ಕು (ಆರ್ ಟಿಐ) ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ. ಹಾಗಾಗಿ, ಸರ್ಕಾರದ ಆಡಳಿತ ಪಾರದರ್ಶಕವಾಗಿದೆ ಎಂಬುದರಲ್ಲಿ ಅಡ್ಡಿಯಿಲ್ಲ'' ಎಂದು ಟಾಂಗ್ ನೀಡಿದ್ದಾರೆ.

Congress Leader, actress Ramya takes dig at Smriti Irani in Twitter

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Congress leader and actress Divya Spandana took a dig towards Central Minister Smriti Irani via tweet regarding transparency administration on July 23, 2017.
Please Wait while comments are loading...