Get Updates
Get notified of breaking news, exclusive insights, and must-see stories!

Delhi Congress Guarantees: ದೆಹಲಿಯಲ್ಲಿ ಕಾಂಗ್ರೆಸ್‌ ಗ್ಯಾರಂಟಿಗಳದ್ದೇ ಹವಾ, ಹೊಸ ಭರವಸೆಗಳು

ದೆಹಲಿ, ಜನವರಿ 16: ಕರ್ನಾಟಕ, ನೆರೆಯ ತೆಲಂಗಾಣದಲ್ಲಿ ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಪಕ್ಷವು ದೆಹಲಿಯಲ್ಲಿ ತನ್ನ ಗ್ಯಾರಂಟಿ ಭರವಸೆಗಳನ್ನು ಮುಂದುವರೆಸಿದೆ. ಇಂದು ಗುರುವಾರ ಕಾಂಗ್ರೆಸ್ ದೆಹಲಿ ಜನತೆಗೆ ಪ್ರಮುಖ 05 ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆ. ವಿದ್ಯುತ್, ಉಚಿತ ಪಡಿತರ, ಎಲ್‌ಪಿಜಿ ಸಿಲಿಂಡರ್ ಸೇರಿದಂತೆ ಮಹತ್ವದ ಭರವಸೆ ಈಡೇರಿಸುವುದಾಗಿ ತಿಳಿಸಿದೆ.

ಗುರುವಾರ ಎಐಸಿಸಿ ದೆಹಲಿ ಉಸ್ತುವಾರಿ ಖಾಜಿ ನಿಜಾಮುದ್ದೀನ್ ಮತ್ತು ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದರ್ ಯಾದವ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ದೆಹಲಿಯಲ್ಲಿ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬಂದರೆ ಏನಲ್ಲ ಮಾಡಲಿದ್ದೇವೆ ಎಂಬುದನ್ನು ತಿಳಿಸಿದ್ದಾರೆ.

Congress Guarantee Schemes Announced for victory in Delhi Assembly Election 2025

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆದ್ದರೆ LPG ಸಿಲಿಂಡರ್ ಬೆಲೆ 500 ರೂಪಾಯಿಗೆ ವಿತರಣೆ ಮಾಡಲಾಗುವುದು. ಉಚಿತ ಪಡಿತರ ಕಿಟ್‌ಗಳು ಹಾಗೂ 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ನಾಯಕರು ಪಂಚ ಗ್ಯಾರಂಟಿ ಘೋಷಿಸಿದರು. ಇವೆಲ್ಲವನ್ನು ಈಡೇರಿಸಿಯೇ ತೀರುತ್ತೇವೆ, ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ದೆಹಲಿ ಮತದಾರರನ್ನು ಕೋರಿದರು.

ದೆಹಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು

ದೆಹಲಿ ಚುನಾವನೆ ಘೋಷಣೆ ಆಗುವುದನ್ನೆ ಕಾಯುತ್ತಿದ್ದ ಕಾಂಗ್ರೆಸ್‌ ಪಕ್ಷವು ಜನವರಿ 6 'ಪ್ಯಾರಿ ದಿದಿ ಯೋಜನೆ' ಘೋಷಿಸಿತು. ಅದು ಅಧಿಕಾರ ಬಂದಲ್ಲಿ ಮಹಿಳೆಯರಿಗೆ ಮಾಸಿಕ 2,500 ರೂ. ಆರ್ಥಿಕ ನೆರವು ನೀಡಲಾಗುವುದು. ಜನವರಿ 8 ರಂದು, ಪಕ್ಷವು ತನ್ನ 'ಜೀವನ್ ರಕ್ಷಾ ಯೋಜನೆ' ಜಾರಿ ಮಾಡುವ ಭರವಸೆ ನೀಡಿತು. ಯೋಜನೆಯಯಲ್ಲಿ 25 ಲಕ್ಷ ರೂ.ವರೆಗೆ ಉಚಿತ ಅರೋಗ್ಯ ವಿಮೆ ನೀಡಲಾಗುತ್ತದೆ ಎಂದು ತಿಳಿಸಿದೆ.

Congress Guarantee Schemes Announced for victory in Delhi Assembly Election 2025

ಅಧಿಕಾರಕ್ಕೆ ಬಂದ ನಂತರ ಒಂದು ವರ್ಷವರೆಗೆ ದೆಹಲಿ ವಿದ್ಯಾವಂತ ನಿರುದ್ಯೋಗಿಗಳಿಗೆ ಮಾಸಿಕ ಆರ್ಥಿಕ ಸಹಾಯ ನೀಡಲಾಗುವುದು. ಮಾಸಿಕ 8,500 ರೂ.ಗಳನ್ನು ನೀಡುವ 'ಯುವ ಉಡಾನ್ ಯೋಜನೆ' ಘೋಷಿಸಿತ್ತು. ನಾವು ಮನೆಯಲ್ಲಿಯೇ ಕುಳಿತು ನಿರುದ್ಯೋಗಿಗಳಿಗೆ ಹಣ ಗಳಿಸುವುದನ್ನು ಹೇಳಿಕೊಡುವುದಿಲ್ಲ, ಇದು ಅವರಿಗೆ ನೆರವು ಅಷ್ಟೇ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿತ್ತು.

ದೆಹಲಿ ಚುನಾವಣೆ 2025

ಬಿಜೆಪಿ 1998ರ ನಂತರ ದೆಹಲಿಯಲ್ಲಿ ಅಧಿಕಾರ ಹಿಡಿಯಲಿಲ್ಲ. ಬದಲಾಗಿ ಇಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಕಾಂಗ್ರೆಸ್ ಅನ್ನು 2013 ಚುನಾವಣೆಯಲ್ಲಿ ಸೋಲಿಸಿದ ಎಎಪಿ ಕಳೆದ ಎರಡು ಭಾರಿ ಆಡಳಿತ ನೀಡಿದೆ. ಮಾಜಿ ಸಿಎಂ ಮತ್ತು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಡಳಿತ ನಡೆಸಲಾಯಿತು. ಎಎಪಿ ಬದಲಿಸಲು ಕೇವಲ ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿ ಸಹ ಪಣ ತೊಟ್ಟಿದೆ. ಇದರ ಭಾಗವಾಗಿ ಕಾಂಗ್ರೆಸ್ ಪಂಚ ಗ್ಯಾರಂಟಿ ಘೋಷಿಸಿದೆ.

ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆ?

ದೆಹಲಿ ಕಣದಲ್ಲಿ ಬಿಜೆಪಿ, ಕಾಂಗ್ರೆಸ್, ಎಎಪಿ ಪಕ್ಷಗಳು ಎದುರಾಗಲಿವೆ. ತೀವ್ರ ಪೈಪೋಟಿ ಉಂಟಾಗುವ ಸಾಧ್ಯತೆ ಇದೆ. ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯು ಇದೆ. ಒಂದೇ ಹಂತದಲ್ಲಿ ದೆಹಲಿಯ 70 ವಿಧಾನಸಭಾ ಸ್ಥಾನಗಳಿಗೆ ಮುಂದಿನ ತಿಂಗಳ ಫೆಬ್ರವರಿ 5 ರಂದು ಮತದಾನ ನಡೆಯಲಿದೆ. ನಂತರ ಮೂರನೇ ದಿನಕ್ಕೆ (ಫೆಬ್ರವರಿ 8) ಫಲಿತಾಂಶ ಬಿಡುಗಡೆ ಆಗಲಿದೆ.

ಕಳೆದ ಚುನಾವಣೆಯಲ್ಲಿ ಒಟ್ಟು 70 ಸ್ಥಾನಗಳಲ್ಲಿ ಎಎಪಿ ಬರೋಬ್ಬರಿ 62 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ಭಾರಿ ಹಿಡಿತ ಸಾಧಿಸಿತು. ಬಿಜೆಪಿ ಕೇವಲ ಎಂಟು ಸ್ಥಾನ ಪಡೆದು ರಾಜ್ಯ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+