ಗುಜರಾತಿನಲ್ಲಿ ಕೊನೆಗೂ ಗೆದ್ದಿದ್ದು ಕಾಂಗ್ರೆಸ್ಸೇ! ಅಶೋಕ್ ಗೆಹ್ಲೋಟ್

ನವದೆಹಲಿ, ಡಿಸೆಂಬರ್ 18: ನಾವು ಪ್ರಾಮಾಣಿಕತರೆಯಿಂದ ಸ್ಪರ್ಧಿಸಿದ್ದೇವೆ. ಕೊನೆಗೂ ಗುಜರಾತಿನಲ್ಲಿ ಗೆದ್ದಿದ್ದು ಕಾಂಗ್ರೆಸ್ಸೇ ಎಮದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಗುಜರಾತ್ ಉಸ್ತುವಾರಿ ಅಶೋಕ್ ಗೆಹ್ಲೋಟ್ ಹೇಳಿದರು.

ಇಂದು(ಡಿ.18) ಹೊರಬಿದ್ದ ಗುಜರಾತ್ ಫಲಿತಾಂಶದ ಹಿನ್ನೆಲೆಯಲ್ಲಿ ಪತ್ರಕರ್ತರೊಂದಿಗೆ ನವದೆಹಲಿಯಲ್ಲಿ ಮಾತನಾಡಿದ ಗೆಹ್ಲೋಟ್, ನಾವು ಚುನಾವಣೆಯನ್ನು ಪ್ರಾಮಾಣಿಕತೆಯಿಂದ ಎದುರಿಸಿದ್ದೇವೆ. ಈಗ ಫಲಿತಾಂಶ ಏನೇ ಬಂದಿರಲಿ. ಕೊನೆಗೂ ಗೆದ್ದವರು ನಾವೇ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

 Ashok Gehlot

ಕಾಂಗ್ರೆಸ್ಸು ತನ್ನ ಅಭಿವೃದ್ಧಿ ಯೋಜನೆಗಳನ್ನಿಟ್ಟುಕೊಂಡು ಮತ ಕೇಳಿತು. ಆದರೆ ಬಿಜೆಪಿ ತನ್ನ ಜನರ ಧಾರ್ಮಿಕ ಭಾವನೆಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿತು. ಆದರೆ ಕಾಂಗ್ರೆಸ್ಸು ಬಿಜೆಪಿಗೆ ಸಾಕಷ್ಟು ಸಮಬಲದ ಸ್ಪರ್ಧೆ ನೀಡಿತು. ಇದು ಜನರು ಬದಲಾವಣೆ ಬಯಸುತ್ತಿರುವುದರ ಸಂಕೇತ ಎಂದರು.

ಡಿ.9 ಮತ್ತು ಡಿ.14 ರಂದು ಎರಡು ಹಂತಗಳಲ್ಲಿ ನಡೆದ ಗುಜರಾತ್ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಬಿಜೆಪಿ ಬಹುಮತ ಗಳಿಸಿದ್ದರೂ, ಕಾಂಗ್ರೆಸ್ ಸಹ ಉತ್ತಮ ಸಾಧನೆ ತೋರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+