ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡಿಯಿಂದ 6 ಗಂಟೆ ಸೋನಿಯಾ ವಿಚಾರಣೆ; ಬುಧವಾರ ಮತ್ತೆ ಹಾಜರು

|
Google Oneindia Kannada News

ನವದೆಹಲಿ, ಜುಲೈ 26: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ 6 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಅಂತ್ಯದ ಬಳಿಕ ಬುಧವಾರ ಮತ್ತೆ 3ನೇ ದಿನದ ವಿಚಾರಣೆಗೆ ಬರುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ದೆಹಲಿ ಸೇರಿದಂತೆ ನಾನಾ ಕಡೆಗಳಲ್ಲಿ ಇಡಿಯಿಂದ ಸೋನಿಯಾ ವಿಚಾರಣೆ ವಿರೋಧಿಸಿ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ಮುಂದುವರಿಸಿದ್ದಾರೆ. ಕಳೆದ ಜುಲೈ 21ರಂದು ಸೋನಿಯಾ ಗಾಂಧಿ ಅವರು ಮೂರು ಗಂಟೆ ಇಡಿ ವಿಚಾರಣೆ ಎದುರಿಸಿದ್ದರು. ಆಗ ಜುಲೈ 26ರಂದು ಪುನಃ ವಿಚಾರಣೆಗೆ ಬರುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು.

ಅದರಂತೆ ಮಂಗಳವಾರ ವಿಚಾರಣೆಗೆ ಸೋನಿಯಾ ಹಾಜರಾಗಿದ್ದರು. 6 ಗಂಟೆಗಳ ಕಾಲ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಮತ್ತೆ ಬುಧವಾರ ವಿಚಾರಣೆ ಆಗಮಿಸುವಂತೆ ಸಮನ್ಸ್‌ ಜಾರಿಗೊಳಿಸಿದೆ. ಇದಕ್ಕೂ ಸಹ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.

Congress Chief Sonia Gandhi Questioned By ED For 6 Hours 10 Points

ಇಡಿ ವಿಚಾರಣೆಯ ಹತ್ತು ಅಂಶಗಳು ಇಲ್ಲಿವೆ ನೋಡಿ.

1. ಸೋನಿಯಾ ಗಾಂಧಿ ಮಂಗಳವಾರ ಬೆಳಗ್ಗೆ 11ಕ್ಕೆ ಪುತ್ರ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಜತೆ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಆಗಮಿಸಿದರು. ಪ್ರಶ್ನೆಯ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಿ ಹಾಗೂ ಇಡಿ ಸಂಸ್ಥೆಗಳ ದುರ್ಬಳಕೆ ವಿರೋಧಿಸಿ ರಾಹುಲ್ ಗಾಂಧಿ ರಾಷ್ಟ್ರಪತಿ ಭವನದವರೆಗೆ ಕಾಂಗ್ರೆಸ್ ನಾಯರಕ ಜತೆ ಮೆರವಣಿಗೆ ನಡೆಸಿದರು. ರಸ್ತೆಯಲ್ಲೇ ಕುಳಿತು ರಾಹುಲ್ ಪ್ರತಿಭಟಿಸಿದರು.

2. 75 ವರ್ಷದ ಸೋನಿಯಾ ಗಾಂಧಿಗೆ ವೈದ್ಯಕೀಯ ನೆರವು ಬೇಕಾದಲ್ಲಿ ಸೂಕ್ತ ಸಮಯಕ್ಕೆ ಒದಗಿಸಲು ಔಷಧಿ ಸಹಿತ ಪ್ರಿಯಾಂಕಾ ಗಾಂಧಿ ಇಡಿ ಕಚೇರಿಯ ಮತ್ತೊಂದು ಕೋಣೆಯಲ್ಲಿ ಕುಳಿತಿದ್ದರು.

3. ಇಡಿ ನೀಡಿದ್ದ ಸಮನ್ಸ್ ಪರಿಶೀಲನೆ ಮಾಡಿ ನಂತರ ಹಾಜರಾತಿ ಹಾಳೆಯಲ್ಲಿ ಸಹಿ ಮಾಡುವುದು ಸೇರಿ ಕೆಲವು ದಾಖಲಾತಿ ಪೂರ್ಣಗೊಳಿಸಿದ ಬಳಿಕ 11:15ಗಂಟೆಗೆ ಅಧಿಕಾರಿಗಳು ಸೋನಿಯಾ ಗಾಂಧಿ ಅವರ ವಿಚಾರಣೆ ಆರಂಭಿಸಿದರು.

Congress Chief Sonia Gandhi Questioned By ED For 6 Hours 10 Points

4. ಸೋನಿಯಾ ಗಾಂಧಿ ವಿಚಾರಣೆ ಹಿನ್ನಲೆ ಮುಂಜಾಗ್ರತೆ ದೃಷ್ಟಿಯಿಂದ ಇಬ್ಬರು ವೈದ್ಯರು, ತುರ್ತು ಅಗತ್ಯತೆಗಾಗಿ ಆಂಬ್ಯುಲೆನ್ಸ್ ವಾಹನವನ್ನು ಕಚೇರಿ ಹೊರಗೆ ನಿಲ್ಲಿಸಲಾಗಿತ್ತು. ವಿಚಾರಣೆಯನ್ನು ಕೋವಿಡ್ ಮಾರ್ಗಸೂಚಿ ಅನುಸರಿಸಿ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5. ಕಾಂಗ್ರೆಸ್ ನಾಯಕರ ಪ್ರತಿಭಟನೆ ಹಿನ್ನೆಲೆ ಪೊಲೀಸರು ದೆಹಲಿ ಕೇಂದ್ರದ ವಿದ್ಯುತ್ ಲೇನ್‌ನಲ್ಲಿರುವ ಸೋನಿಯಾ ಗಾಂಧಿ ಅವರ ಮನೆಗೆ ಹಾಗೂ ಜಾರಿ ನಿರ್ದೇಶನಾಲಯದ ಕಚೇರಿ ವರೆಗೆ ಹಾಗೂ ಸುತ್ತಮುತ್ತ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಬಂದೋಬಸ್ತ್ ಮಾಡಿದ್ದರು. ಅನೇಕ ಕಡೆಗಳಲ್ಲಿ ಬ್ಯಾರಿಕೇಡ್ ಹಾಕಿದ್ದರು.

6. ಜುಲೈ 21ರ ಗುರುವಾರದಂತೆ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಸೋಮವಾರದ ಒಳಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆಯಲ್ಲಿ ಪುನಃ ಪಾಲ್ಗೊಳ್ಳುವಂತೆ ಹೊಸ ಸಮನ್ಸ್ ಜಾರಿ ಮಾಡಿದ್ದರು. ನಂತರ ಒಂದು ದಿನ ವಿಚಾರಣೆ ಬರುವ ದಿನಾಂಕವನ್ನು ಇಡಿ ಮುಂದೂಡಿತ್ತು.

Congress Chief Sonia Gandhi Questioned By ED For 6 Hours 10 Points

7. ಬಿಜೆಪಿಯು ತನಿಖಾ ಸಂಸ್ಥೆಗಳನ್ನು ದರ್ಬಳಕೆ ಮಾಡಿಕೊಳ್ಳುತ್ತಿದೆ. ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕರು ತೀವ್ರತರವಾದ ಪ್ರತಿಭಟನೆಯ ನಡೆಸಿದ್ದರು. ಇದರ ಮಧ್ಯದಲ್ಲೇ ಇಡಿ ಅಧಿಕಾರಿಗಳು ಜುಲೈ 21ರ ಗುರುವಾರ ಸೋನಿಯಾರನ್ನು ಎರಡು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿತ್ತು. ಆಗಲೂ ಪ್ರಿಯಾಂಕಾ ಗಾಂಧಿ ತಾಯಿಯೊಂದಿಗೆ ಇಡಿ ಕಚೇರಿಗೆ ತೆರಳಿದ್ದರು.

8. ಜುಲೈ 21ರಂದು ಇಡಿ ಅಧಿಕಾರಿಗಳು ಸೋನಿಯಾ ಗಾಂಧಿ ಅವರಿಗೆ ಒಟ್ಟು 12 ಪ್ರಶ್ನೆಗಳನ್ನು ಕೇಳಿದ್ದರು.

9. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮಾಲೀಕತ್ವ ಹೊಂದಿದ ಕಾಂಗ್ರೆಸ್ ಪ್ರಚಾರದ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ನಲ್ಲಿನ ಹಣಕಾಸಿನ ಅವ್ಯವಹಾರ ಕುರಿತು ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ.

10. ಕಳೆದ ಜೂನ್ ತಿಂಗಳಿನಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಮತ್ತು ಅವ್ಯವಹಾರ ಕುರಿತ ಇದೇ ಪ್ರಕರಣದಲ್ಲಿ ತನಿಖಾ ಸಂಸ್ಥೆ ರಾಹುಲ್ ಗಾಂಧಿಯನ್ನು ವಿಚಾರಣೆಗೆ ಒಳಪಡಿಸಿತ್ತು. ಆಗ ರಾಹುಲ್ ಅವರು 50 ಗಂಟೆ ವಿಚಾರಣೆ ಎದುರಿಸಿದ್ದರು.

Recommended Video

David Or Dravid?? ತಮ್ಮ ಹೆಸರಿನ ಬಗ್ಗೆ ಇದ್ದ ಗೊಂದಲದ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು? | OneIndia

English summary
AICC chief Sonia Gandhi quesioned by ED for 6 hours on Tuesday. 10 points about ED hearing. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X