ರಾಜಸ್ಥಾನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ

Posted By:
Subscribe to Oneindia Kannada

ಜೈಪುರ, ಡಿಸೆಂಬರ್ 20: ಪ್ರತಿಷ್ಠೆಯ ಕಣವಾಗಿದ್ದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ತೀರ್ವ ಪೈಪೋಟಿ ನೀಡಿದ ಕಾಂಗ್ರೆಸ್ ಸೋಲಲ್ಲೂ ಗೆಲುವು ಕಂಡಿತ್ತು. ಇದೀಗ ರಾಜಸ್ಥಾನದ ಸ್ಥಳೀಯ ಸಂಸ್ಥೆಗಳ ಉಪ ಚುನಾವಣಾ ಫಲಿತಾಂಶ ಕಾಂಗ್ರೆಸ್‌ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ರಾಜಸ್ಥಾನದ ವಿವಿಧ ಜಿಲ್ಲೆಗಳಲ್ಲಿ ಡಿಸೆಂಬರ್ 17ರಂದು ಚುನಾವಣೆ ನಡೆದಿದ್ದ ನಾಲ್ಕು ಜಿಲ್ಲಾ ಪಂಚಾಯಿತಿ, 27 ಪಂಚಾಯಿತಿ, 14 ನಗರ ಪಾಲಿಕೆಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯುತ್ತಮ ಫಲಿತಾಂಶ ಪಡೆದು ರಾಜಸ್ಥಾನದ ಬಿಜೆಪಿ ಪಾಳಯದಲ್ಲಿ ನಡುಕ ಹುಟ್ಟಿಸಲು ಯಶಸ್ವಿಯಾಗಿದೆ.

Congress bounce back in Rajasathan through by election

ಬನ್ಸ್ವಾರ, ಬಿಲ್ವಾರ, ಕರೋಲಿ, ಜಲೋರ್ ಜಿಲ್ಲೆಗಳ ಜಿಲ್ಲಾ ಪಂಚಾಯಿತಿಯ ಅಷ್ಟೂ ಸ್ಥಾನವನ್ನು ಕಾಂಗ್ರೆಸ್ ಪಡೆದುಕೊಂಡಿದೆ ಅದರ ಜೊತೆಗೆ 27 ಪಂಚಾಯಿತಿ ಸಮಿತಿ ಸ್ಥಾನಗಳ ಪೈಕಿ 16 ಹಾಗೂ 6 ನಗರದ ಸಭೆ ಸ್ಥಾನಗಳನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಆಡಳಿತದಲ್ಲಿರುವ ಬಿಜೆಪಿ ಪಕ್ಷ ಜಿಲ್ಲಾ ಪಂಚಾಯಿತಿ ಹಾಗೂ, ಪಂಚಾಯಿತಿ ಸಮಿತಿ ಚುನಾವಣೆಯಲ್ಲಿ ಭಾರಿ ಮುಖಭಂಗ ಅನುಭವಿಸಿದ್ದು, ನಗರದ ಸಭೆಯಲ್ಲಿ ಕಾಂಗ್ರೆಸ್‌ಗಿಂತಲೂ ಒಂದು ಸ್ಥಾನ ಹೆಚ್ಚು 7 ವಾರ್ಡುಗಳನ್ನು ಗೆಲ್ಲುವ ಮೂಲಕ ಅಲ್ಪ ತೃಪ್ತಿ ಪಡೆದುಕೊಂಡಿದೆ. ಜಿಲ್ಲಾ ಪಂಚಾಯಿತಿ ಉಪಚುನಾವಣೆಯಲ್ಲಿ ಒಂದೂ ಸ್ಥಾನವನ್ನು ಬಿಜೆಪಿ ಪಡೆಯದಿರುವುದು ವಿಶೇಷ.

19 ವಿವಿಧ ಜಿಲ್ಲೆಗಳ 27 ಪಂಚಾಯಿತಿ, 14 ನಗರ ಪಾಲಿಕೆ, ಮತ್ತು 4 ಜಿಲ್ಲಾ ಪಂಚಾಯಿತಿ ಸ್ಥಾನಗಳಿಗೆ ಡಿಸೆಂಬರ್ 17ರಂದು ಉಪ ಚುನಾವಣೆ ನಡೆದು, ಮಂಗಳವಾರವಷ್ಟೆ (ಡಿಸೆಂಬರ್ 20)ರಂದು ಫಲಿತಾಂಶ ಹೊರ ಬಂದಿದೆ.

ಸ್ಥಳೀಯ ಸಂಸ್ಥೆಗಳ ಉಪಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ 'ಈ ಫಲಿತಾಂಶ ರಾಜ್ಯದಲ್ಲಿ ಬಿಜೆಪಿಯ ಅವಸಾನದ ಹಾದಿ ಶುರುವಾಗಿದೆ ಎಂಬುದರ ಸೂಚನೆ, ಆದಷ್ಟು ಬೇಗ ಬಿಜೆಪಿ ಧ್ವಜ ರಾಜಸ್ಥಾನದಲ್ಲಿ ಕೆಳಗಿಳಿಯಲಿದೆ ಎಂದಿದ್ದಾರೆ.

2013ರ ಬಳಿಕ ರಾಜಸ್ಥಾನದಲ್ಲಿ ನಡೆದಿರುವ ನಾಲ್ಕು ಉಪಚುನಾವಣೆಗಳಲ್ಲಿ ಮೂರರಲ್ಲಿ ಕಾಂಗ್ರೆಸ್ ಗೆದ್ದಿದೆ, ಇದು ಬಿಜೆಪಿಯ ಹವಾ ರಾಜ್ಯದಲ್ಲಿ ಇಳಿಯುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. 2018ರಲ್ಲಿ ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆನಡೆಯಲಿದ್ದು, ಈ ಉಪಚುನಾವಣೆ ಫಲಿತಾಂಶ ಕಾಂಗ್ರೆಸ್‌ನಲ್ಲಿ ಹುಮ್ಮಸ್ಸು ಮೂಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress in Rajasthan Tuesday got a reason to rejoice winning all the four zila parishad, 16 of the 27 panchayat samiti seats and six urban local body seats, for which bypolls were held recently.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ