Breaking News: ಉಪ ಚುನಾವಣೆ: ಪ್ರಿಯಾಂಕಾ ಗಾಂಧಿ ವಯನಾಡಿನಿಂದ ಸ್ಪರ್ಧೆ ಖಚಿತ: AICC

ನವದೆಹಲಿ, ಅಕ್ಟೋಬರ್ 15: ಕೇರಳದಲ್ಲಿ ಒಂದು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಗಿದೆ. ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸ್ಪರ್ಧಿಸುವುದನ್ನು ಎಐಸಿಸಿ ಮಂಗಳವಾರ ಖಚಿತಪಡಿಸಿದೆ. ಪ್ರಿಯಾಂಕಾ ಗಾಂಧಿ ಹೆಸರು ಸೇರಿದಂತೆ ಮೂರು ಅಭ್ಯರ್ಥಿಗಳನ್ನು ಘೋಷಿಸಿ ಕಾಂಗ್ರೆಸ್ ಪಟ್ಟಿ ಹೊರಡಿಸಿದೆ.

ಕುತೂಹಲ ಕೆರಳಿಸಿದ್ದ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿಯನ್ನು ಕಣಕ್ಕಿಳಿಸಿದೆ. ಇನ್ನು ಕೇರಳದ ಪಲಕ್ಕಾದ ವಿಧಾನಸಭಾ ಕ್ಷೇತ್ರಕ್ಕೆ ರಾಹುಲ್ ಮಮ್ಕೋತಾಥಿಲ್ ಹಾಗೂ ಛೆಲಕ್ಕಾರ (ಎಸ್‌ಸಿ) ವಿಧಾನಸಭಾ ಕ್ಷೇತ್ರದಿಂದ ರಮ್ಯಾ ಹರಿದಾಸ್ ಅವರನ್ನು ಎಐಸಿಸಿ ಕಣಕ್ಕಿಳಿಸುತ್ತಿದೆ.

Congress Announced Kerala 3 Bypoll Candidate Priyanka Gandhi for Wayanad See Two others Names

ವಾಯನಾಡು ಕ್ಷೇತ್ರದಿಂದ ಆಯ್ಕೆ ಆಗಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಆ ಸ್ಥಾನಕ್ಕೆ ಉಪಚುನಾವಣೆ ನಡೆಸುವ ಅನಿವಾರ್ಯವಾಗಿತ್ತು. ಸದ್ಯ ಅವರ ನಂತರ ಯಾರು ಆ ಸ್ಥಾನದಿಂದ ಸ್ಪರ್ಧಿಸಬಹುದಾದ ಪ್ರಬಲರು ಎಂಬ ಕುತೂಹಲ ಹೆಚ್ಚಾಗಿತ್ತು. ರಾಹುಲ್ ರಾಜೀನಾಮೆ ಬೆನ್ನಲ್ಲೆ ಪ್ರಿಯಾಂಕಾ ಗಾಂಧಿ ಹೆಸರು ಕೇಳಿ ಬಂದಿತ್ತು. ಅದರಂತೆ ಎಐಸಿಸಿ ಅವರನ್ನೇ ಕಣಕ್ಕಿಳಿಸಿ ಪಟ್ಟಿ ಬಿಡುಗಡೆ ಮಾಡಿದೆ.

ಚೊಚ್ಚಲ ಚುನಾವಣೆ ಎದುರಿಸುತ್ತಿರುವ ಪ್ರಿಯಾಂಕಾ

ಸದ್ಯ 52 ವರ್ಷ ಪ್ರಿಯಾಂಕಾ ಗಾಂಧಿಯವರು ಹಲವು ವರ್ಷಗಳಿಂದ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಪಕ್ಷ ನೀಡಿದ ಕೆಲ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜಕೀಯಕ್ಕೆ ಬಂದ ಹೊಸದರಲ್ಲಿ ತಾಯಿ ಸೋನಿಯಾ ಗಾಂಧಿ ಪರ ಅಮೇಠಿಯಲ್ಲಿ ಪ್ರಚಾರ ಮಾಡಿದ್ದರು. ಒಂದಷ್ಟು ಚುನಾವಣೆಗಳ ಏರಿಳಿತದ ಅನುಭವ ಇರುವ ಪ್ರಿಯಾಂಕ ಗಾಂಧಿಯವರು ಇದೇ ಮೊದಲ ಭಾರಿಗೆ ಚೊಚ್ಚಲ ಚುನಾವಣೆ ಎದುರಿಸುತ್ತಿದ್ದಾರೆ.

ರಾಹುಲ್ ಗಾಂಧಿಯ ಬಳಿಕ ವಯನಾಡಿನಿಂದ ಪ್ರಿಯಾಂಕ ಗಾಂಧಿ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಇಲ್ಲಿಂದ ಈ ಬಾರಿ ಇವರು ಗೆದ್ದಿದ್ದೆ ಆದರೆ, ಗಾಂಧಿ ಕುಟುಂಬ ಮೂವರು ಲೋಕಸಭೆಗೆ ಆಯ್ಕೆ ಆದಂತಾಗುತ್ತದೆ. ಈ ಕುರಿತು ಫಲಿತಾಂಶದವರೆಗೂ ಕಾಯಬೇಕಿದೆ.

ಸದ್ಯ ಕೇರಳದ ಈ ಮೂರು ಉಪಚುನಾವಣೆಗೆ ನವೆಂಬರ್ 13ರಂದು ಮತದಾನ ನಡೆಯಲಿದೆ. ನವೆಂಬರ್ 23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಕೇಂದ್ರ ಚುನಾವಣೆ ಆಯೋಗ ತಿಳಿಸಿದೆ.

2019ರಲ್ಲಿ ಸೋಲು ಕಂಡಿದ್ದ ರಾಹುಲ್ ಗಾಂಧಿಯವರು, 2024ರಲ್ಲಿ ಸ್ಪರ್ಧಿಸಿದ್ದ ವಯನಾಡು ಮತ್ತು ಅಮೇಠಿ ಎರಡು ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ. ಈ ಕಾರಣದಿಂದ ಅವರು ಒಂದು ಕಡೆ ವಯನಾಡು ಕ್ಷೇತ್ರದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ಇದೀಗ ಅಲ್ಲಿ ಉಪಚುನಾವಣೆ ಘೋಷಣೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+