Congress Candidate 3rd List: ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ: ಕರ್ನಾಟಕದಲ್ಲಿ ಯಾರಿಗೆ ಟಿಕೆಟ್!
ಹೊಸ ದಿಲ್ಲಿ, ಮಾರ್ಚ್ 21: 2024ರ ಲೋಕಸಭಾ ಚುನಾವಣೆ ಕಾವು ದಿನದಿಂದಿ ದಿನಕ್ಕೆ ಜೋರಾಗಿದೆ. ಇತ್ತ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನ ಘೋಷಿಸಿದ್ದು, ಒಟ್ಟು ಏಳು ಹಂತದಲ್ಲಿ ದೇಶದಲ್ಲಿ ಚುನಾವಣೆ ನಡೆಯಲಿದೆ. ಇತ್ತ ಗೆಲ್ಲುವ ಕುದುರೆಯ ಹುಡುಕಾಟದಲ್ಲಿರುವ ಕಾಂಗ್ರೆಸ್ ಮೂರನೇ ಪಟ್ಟಿಯನ್ನ ಇಂದು ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಹೈಕಮಾಂಡ್ ಮೊದಲ ಪಟ್ಟಿಯಲ್ಲಿ ಯಾವುದೇ ಗೊಂದಲಗಳಿಲ್ಲದ ಕ್ಷೇತ್ರಗಳಲ್ಲಿ ಪಕ್ಷದ ನಾಯಕರ ಒಮ್ಮತದ ಅಭಿಪ್ರಾಯದ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿತ್ತು. ಇನ್ನೂ ಮೂರನೇ ಪಟ್ಟಿಯನ್ನ ಗುರುವಾರ ಬಿಡುಗಡೆ ಮಾಡಿದ್ದು ಒಟ್ಟು 57 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಕರ್ನಾಟದಕ ಒಟ್ಟು 17 ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಘೋಷಿಸಿದೆ. ರಾಜ್ಯದಲ್ಲಿ ಸಚಿವರ ಮಕ್ಕಳಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಲಾಗಿದೆ. ವೆಂಟಪ್ಪ ನಾಯಕ್ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ್‌ಗೆ ಟಿಕೆಟ್ ನೀಡಿದೆ. ಅಲ್ಲದೇ ಮಲ್ಲಿಕಾರ್ಜುನ್ ಖರ್ಗೆ ಅವರ ಅಳಿಯನಿಗೂ ಸಹ ಟಿಕೆಟ್ ನೀಡಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಇಲ್ಲಿದೆ.
ಕಲಬುರ್ಗಿ- ರಾಧಾಕೃಷ್ಣ ದೊಡ್ಡಮನಿ
ಚಿತ್ರದುರ್ಗ - ಚಂದ್ರಪ್ಪ
ಬೆಳಗಾವಿ - ಮೃನಾಲ್ ಹೆಬ್ಬಾಳ್ಕರ್
ಚಿಕ್ಕೋಡಿ - ಪ್ರಿಯಾಂಕಾ ಜಾರಕಿಹೊಳಿ
ಬಾಗಲಕೋಟೆ - ಸಂಯುಕ್ತ ಶಿವಾನಂದ ಪಾಟೀಲ್
ಹುಬ್ಬಳ್ಳಿ ಧಾರವಾಡ್ - ವಿನೋದ್ ಅಸುಟಿ
ದಾವಣಗೆರೆ - ಡಾ ಪ್ರಭಾ ಮಲ್ಲಿಕಾರ್ಜುನ್
ಕೊಪ್ಪಳ - ರಾಜಶೇಖರ್ ಹಿಟ್ನಾಳ್
ಬೀದರ್ - ಸಾಗರ್ ಖಂಡ್ರೆ
ದಕ್ಷಿಣ ಕನ್ನಡ- ಪದ್ಮರಾಜ್
ಉಡಪಿ-ಚಿಕ್ಕಮಗಳೂರು - ಜಯಪ್ರಕಾಶ್ ಹೆಗಡೆ
ಬೆಂಗಳೂರು ದಕ್ಷಿಣ - ಸೌಮ್ಯರೆಡ್ಡಿ
ಬೆಂಗಳೂರು ಸೆಂಟ್ರಲ್- ಮನಸೂರ್ ಅಲಿಖಾನ್
ಬೆಂಗಳೂರು ಉತ್ತರ -ಪ್ರೋ ರಾಜೀವ್ ಗೌಡ
ಮೈಸೂರು - ಎಂ ಲಕ್ಷ್ಮಣ್
ರಾಯಚೂರು- ಕುಮಾರ್ ನಾಯ್ಕ್
ಧಾರವಾಡ- ವಿನೋದ್ ಅಸೂಟಿ
ಉತ್ತರ ಕನ್ನಡ -ಅಂಜಲಿ ನಿಂಬಾಳ್ಕರ್












Click it and Unblock the Notifications