Congress Candidate 2nd List: ಕಾಂಗ್ರೆಸ್‌ನಿಂದ 2ನೇ ಪಟ್ಟಿ ಬಿಡುಗಡೆ, ಅಭ್ಯರ್ಥಿಗಳು ಯಾರಿದ್ದಾರೆ?
ನವದೆಹಲಿ, ಮಾರ್ಚ್ 12: ಲೋಕಸಭಾ ಚುನಾವಣೆ 2024 ಪ್ರಯುಕ್ತ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ AICC ಇದೀಗ 43 ಅಭ್ಯರ್ಥಿಗಳು ಇರುವ ಎರಡನೇ ಪಟ್ಟಿಯನ್ನು (Congress candidate 2nd list) ಬಿಡುಗಡೆ ಮಾಡಿದೆ.
कांग्रेस अध्यक्ष श्री @kharge की अध्यक्षता में आयोजित CEC की बैठक में लोकसभा चुनाव, 2024 के लिए 43 लोकसभा सीटों पर कांग्रेस उम्मीदवारों की दूसरी लिस्ट जारी की गई। pic.twitter.com/kgWoEkzKt6
— Congress (@INCIndia) March 12, 2024
ಪಟ್ಟಿ ಬಿಡುಗಡೆ ಕುರಿತು ನವದೆಹಲಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಸುದ್ದಿಗೋಷ್ಠಿ ನಡೆಸಿ ಮಂಗಳವಾರ ಪಟ್ಟಿ ಪ್ರಕಟಿಸಿದರು. ಇದರಲ್ಲಿ ಕರ್ನಾಟಕ ರಾಜ್ಯದ ಯಾವೊಂದು ಕ್ಷೇತ್ರ ಟಿಕೆಟ್ ಆಗಲಿ, ಅಭ್ಯರ್ಥಿಗಳ ಹೆಸರಾಗಲಿ ಇಲ್ಲ.

ಮೊದಲ ಪಟ್ಟಿಯಲ್ಲಿ ಕರ್ನಾಟಕದ 07 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ ಆಗಿತ್ತು. ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಯಾವ ಕ್ಷೇತ್ರಕ್ಕೂ ಟಿಕೆಟ್ ಪ್ರಕಟಿಸಿಲ್ಲ. ಕಾಂಗ್ರೆಸ್ ಮೂರನೇ ಪಟ್ಟಿಯಲ್ಲಿ ಕರ್ನಾಟಕದ ಬಾಕಿ ಇರುವ 21 ಕ್ಷೇತ್ರಗಳ ಹೆಸರು ಘೋಷಣೆಯನ್ನು ನಿರೀಕ್ಷಿಸಬಹುದಾಗಿದೆ.
ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಅಸ್ಸಾಂ ರಾಜ್ಯದ 12 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಆಗಿದೆ. ಅದರಂತೆ ಗುಜರಾತ್ ರಾಜ್ಯದಲ್ಲಿ 07, ಮಧ್ಯ ಪ್ರದೇಶ 10, ರಾಜಸ್ಥಾನ ರಾಜ್ಯದಲ್ಲಿ 10, ಉತ್ತರಾಖಂಡ ರಾಜ್ಯದಲ್ಲಿ 03 ಹಾಗೂ ಡಿಯು ಆಂಡ್ ಡಮನ್ 01 ಕ್ಷೇತ್ರಕ್ಕೆ ಟಿಕೆಟ್ ಅಂತಿಮವಾಗಿದೆ.












Click it and Unblock the Notifications