ರಾಹುಲ್‌ರಿಂದ ಸದನದಲ್ಲಿ 37 ನಿಮಿಷ ಭಾಷಣ: 14 ನಿಮಿಷ ತೋರಿಸಿದ ಸಂಸದ್ ಟಿವಿ- ಕಾಂಗ್ರೆಸ್ ಕೆಂಡಾಮಂಡಲ
ನವದೆಹಲಿ, ಆಗಸ್ಟ್ 09: ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು 37 ನಿಮಿಷಗಳ ಭಾಷಣ ಮಾಡಿದರು. ಆದರೆ, ಸಂಸದ್ ಟಿವಿಯಲ್ಲಿ ಕೇವಲ 14.37 ನಿಮಿಷಗಳ ಕಾಲ ಅವರನ್ನು ತೋರಿಸಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಬುಧವಾರ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿಗೆ ನೀಡಲಾಗಿರುವ ಸ್ಕ್ರೀನ್ ಟೈಮ್ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರನ್ನು ಜೈರಾಮ್ ರಮೇಶ್ ತರಾಟೆಗೆ ತೆಗೆದುಕೊಂಡರು.

'ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಕಾರಣಕ್ಕಾಗಿ ಹೆದರುತ್ತಿದ್ದಾರೆ' ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಸಂಸದ್ ಟಿವಿಯಲ್ಲಿ ರಾಹುಲ್ ಭಾಷಣಕ್ಕೆ ನೀಡಲಾಗಿರುವ ಸ್ಕ್ರೀನ್ ಟೈಮ್ ಬಗ್ಗೆ ಟ್ವೀಟ್ ಮಾಡಿರುವ ಜೈರಾಮ್ ರಮೇಶ್, 'ಅನ್ಯಾಯದಿಂದಾಗಿ ಅನರ್ಹತೆಗೊಂಡಿದ್ದ ರಾಹುಲ್ ಗಾಂಧಿ ಲೋಕಸಭೆಯನ್ನು ಇಂದು ಭಾಷಣ ಮಾಡಿದರು. ರಾಹುಲ್ ಗಾಂಧಿ ಅವರು ಮಧ್ಯಾಹ್ನ 12:09 ರಿಂದ ಮಾತನಾಡಿದರು. ಅವರು ಭಾಷಣವು 12:46 ರ ವರೆಗೆ ಮುಂದುವರಿಯಿತು. ಅಂದರೆ, ಅವಿಶ್ವಾಸ ನಿರ್ಣಯದ ಒಟ್ಟು ಸಮಯದಲ್ಲಿ 37 ನಿಮಿಷಗಳ ಕಾಲ ಮಾತನಾಡಿದರು' ಎಂದು ಹೇಳಿದ್ದಾರೆ.
'37 ನಿಮಿಷಗಳಲ್ಲಿ ರಾಹುಲ್ ಗಾಂಧಿ ಅವರನ್ನು ಕೇವಲ 14 ನಿಮಿಷ ( ಸಂಸದ್ ಟಿವಿಯಲ್ಲಿ ) ತೋರಿಸಲಾಗಿದೆ. ಅದು ಶೇಕಡಾ 40 ಕ್ಕಿಂತ ಕಡಿಮೆ ಸ್ಕ್ರೀನ್ ಟೈಮ್. ರಾಹುಲ್ ಗಾಂಧಿ ಬಗ್ಗೆ ಮೋದಿಗೆ ಏನು ಭಯ?' ಎಂದು ರಾಜ್ಯಸಭಾ ಸಂಸದ ರಮೇಶ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಮಾಡಿದ ಭಾಷಣದ ವೇಳೆ ರಾಹುಲ್ ಗಾಂಧಿ ಅವರು ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯ ರಾಜಕೀಯವು ಮಣಿಪುರದಲ್ಲಿ ಭಾರತವನ್ನು ಕೊಂದುಹಾಕಿದೆ ಎಂದು ಅವರು ಆರೋಪಿಸಿದರು. ಪ್ರಧಾನಿಯವರ ದುರಹಂಕಾರವು ಇಡೀ ದೇಶವನ್ನು ಸುಡುತ್ತಿದೆ ಎಂದು ಹೇಳಿದರು.
ನಾನು ದೇಶದ ಒಂದು ತುದಿಯಿಂದ ಇನ್ನೊಂದು ತುದಿಗೆ ಅಂದರೆ ಕರಾವಳಿಯಿಂದ ಕಾಶ್ಮೀರದ ಹಿಮಭರಿತ ಪರ್ವತಗಳವರೆಗೆ ನಡೆದಿದ್ದೇನೆ. ಯಾತ್ರೆ ಇನ್ನೂ ಮುಗಿದಿಲ್ಲ. ಅದು ಪ್ರಾರಂಭವಾದ ನಂತರ ಅನೇಕ ಜನರು ನನ್ನನ್ನು ಕೇಳಿದರು, 'ರಾಹುಲ್ ನೀವು ಏಕೆ ನಡೆದಿದ್ದೀರಿ, ನಿಮ್ಮ ಗುರಿ ಏನು?' ಎಂದು ಪ್ರಶ್ನಿಸಿದರು. ನಾನು ಈ ದೇಶದ ಜನರನ್ನು ಅರ್ಥೈಸಿಕೊಳ್ಳಲು ನಡೆದಿದ್ದೇನೆ ಎಂದು ಅವರು ಹೇಳಿದರು.
'ಬಿಜೆಪಿ ಮಣಿಪುರದಲ್ಲಿ ಭಾರತವನ್ನು ಕೊಂದಿದೆ ಮತ್ತು ಈಗ ಹರಿಯಾಣಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದೆ. ನೀವು ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದೀರಿ. ಬಿಜೆಪಿಯವರು ದೇಶಾದ್ಯಂತ ಸೀಮೆಎಣ್ಣೆ ಸುರಿಯುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದರು.
'ಮೋದಿ ಹಿಂದೂಸ್ತಾನದ ಧ್ವನಿಯನ್ನು ಕೇಳದಿದ್ದರೆ, ಅವರು ಯಾರನ್ನು ಕೇಳುತ್ತಾರೆ? ಅವರು ಕೇವಲ ಇಬ್ಬರ ಮಾತುಗಳನ್ನು ಕೇಳುತ್ತಾರೆ. ರಾವಣ ಕೇವಲ ಇಬ್ಬರ ಮಾತನ್ನು ಕೇಳಿದನು. ಮೇಘನಾಥ ಮತ್ತು ಕುಂಬಕರ್ಣ ಅವರ ಮಾತುಗಳನ್ನು ಆಲಿಸಿದನು. ಅದೇ ರೀತಿ ಮೋದಿ ಕೂಡ ಅಮಿತ್ ಶಾ ಮತ್ತು ಅದಾನಿ ಮಾತುಗಳನ್ನು ಮಾತ್ರ ಕೇಳುತ್ತಾರೆ' ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications