ಅಸ್ಸಾಂನಲ್ಲಿ ಕೇಸರಿ ಬಾವುಟ, ಮೈತ್ರಿಯತ್ತ ಬಿಜೆಪಿ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮೇ 19: ಅಸ್ಸಾಂನಲ್ಲಿ ಈ ಬಾರಿ ಕೇಸರಿ ಬಾವುಟ ಹಾರಾಡುವ ಮುನ್ಸೂಚನೆ ಸಿಕ್ಕಿದೆ. 126 ಸ್ಥಾನಗಳ ಪೈಕಿ ಈ ಸಮಯಕ್ಕೆ 57ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ, ಸರ್ಕಾರ ರಚನೆಗೆ ಮೈತ್ರಿಗೂ ಸಿದ್ಧ ಎಂದು ಘೋಷಿಸಿದೆ.

ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಅವರು ಒನ್ ಇಂಡಿಯಾ ಪ್ರತಿನಿಧಿ ಜೊತೆ ಮಾತನಾಡಿ, ಸರ್ಕಾರ ರಚನೆ ಮಾಡುವ ಆತ್ಮವಿಶ್ವಾಸವಿದೆ ಎಂದಿದ್ದಾರೆ.[ಅಸ್ಸಾಂ ಫಲಿತಾಂಶ ಲೈವ್ ಪುಟ]

Confident of BJP led coalition govt in Assam: BJP spokesperson

ಮೇ 19ರ ಬೆಳಗ್ಗೆ 9.35ಕ್ಕೆ ಮತ ಎಣಿಕೆ ಅಪ್ಡೇಟ್ ನಂತೆ 126ಕ್ಷೇತ್ರಗಳ ಪೈಕಿ ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ, ಎಐಯುಡಿಎಫ್ 11 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ. ಬಿಜೆಪಿ ಪ್ಲಸ್ 59 ಕ್ಷೇತ್ರಗಳಲ್ಲಿ ಮುಂದಿದೆ. [ವಿಜಯೋತ್ಸಾಹದ ಚಿತ್ರಗಳು]

ಚುನಾವಣಾಪೂರ್ವ ಮೈತ್ರಿಯಂತೆ ಬಿಜೆಪಿ ತನ್ನ ನಡೆಯನ್ನು ಮುಂದುವರೆಸಲಿದ್ದು, ಸರ್ಕಾರ ರಚನೆಗೆ ತನ್ನ ಪ್ರಯತ್ನ ಮಾಡಲಿದೆ ಎಂದು ರಾವ್ ಹೇಳಿದ್ದಾರೆ. ಎಜಿಪಿ ಹಾಗೂ ಬಿಪಿಎಫ್ ಜೊತೆ ಬಿಜೆಪಿ ಮೈತ್ರಿ ಹೊಂದಿದೆ. ಕಾಂಗ್ರೆಸ್ ಮುಕ್ತ ಅಸ್ಸಾಂ ರಾಜ್ಯವನ್ನು ಜನತೆ ಕಾಣಲಿದ್ದಾರೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
We are confident of forming the government in Assam says BJP's spokesperson, GVL Narasimha Rao. If the trends continue this way for Assam then we have no doubt that we will form the next government, Rao tells OneIndia.
Please Wait while comments are loading...