ನಿಮ್ಮೊಂದಿಗೆ ಹೋರಾಡಿ, ಇತರರೊಂದಿಗೆ ಸ್ಪರ್ಧಿಸಬೇಡಿ: ಮೋದಿ

Posted By:
Subscribe to Oneindia Kannada

ನವದೆಹಲಿ, ಜನವರಿ 29: ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್‌ ಕೀ ಬಾತ್‌ನಲ್ಲಿ ಭಾನುವಾರ ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಸಲಹೆಗಳನ್ನು ನೀಡಿದರು. ಪರೀಕ್ಷೆಗಳು ಹಬ್ಬವಿದ್ದಂತೆ. ಅದನ್ನು ಸಂತೋಷವಾಗಿ ಸ್ವೀಕರಿಸಿ, ನೀವು ನಿಮ್ಮೊಂದಿಗೆ ಹೋರಾಡಿ, ಇತರರೊಂದಿಗೆ ಸ್ಪರ್ಧಿಸಬೇಡಿ ಎದು ಕರೆ ನೀಡಿದರು.

ನಾನು ಹೆತ್ತವರಲ್ಲಿ ಮನವಿ ಮಾಡುವುದೆಂದರೆ ಮಕ್ಕಳಿಂದ ನೀವು ನಿರೀಕ್ಷಿಸುವ ಬದಲು ಸ್ವೀಕರಿಸಬೇಕು. ನಮ್ಮ ಮಕ್ಕಳಿಂದ ನಮ್ಮ ನಿರೀಕ್ಷೆಗಳು ಭಾರವಾಗಿರಬಾರದು ಎಂದರು.

compete-with-yourself-not-with-others-pm-tells-students-in-mann-ki-baat

ಜನವರಿ 30ರಂದು ಹುತಾತ್ಮರ ಸಂಸ್ಮರಣೆ ಸಲುವಾಗಿ ಎರಡು ನಿಮಿಷಗಳ ಮೌನಾಚರಣೆ ಮಾಡಲು ಕರೆ ನೀಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತಕ್ಕೆ ಸಿಲುಕಿ ಮೃತರಾದ ಸೈನಿಕರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ತೆಂಡೂಲ್ಕರ್ ಸ್ಪೂರ್ತಿಯಾಗಲಿ: ಸಚಿನ್ ತೆಂಡೂಲ್ಕರ್ ಅವರು ಸದಾ ಕಾಲ ತಮ್ಮ ಆಟವನ್ನು ಉತ್ತಮಗೊಳಿಸಲು ಯತ್ನಿಸಿದರು. ಹೊಸ ಸವಾಲುಗಳನ್ನು ಹಾಕಿಕೊಂಡು ಮುನ್ನಡೆದರು. ನಿಮಗೆಲ್ಲ(ವಿದ್ಯಾರ್ಥಿಗಳು) ಸಚಿನ್ ಸ್ಪೂರ್ತಿಯಾಗಲಿ.

ಪರೀಕ್ಷೆಯಲ್ಲಿ ನಕಲು ಮಾಡುವುದು, ಮೋಸ ಮಾಡುವುದರಿಂದ ಆ ಪರೀಕ್ಷೆ ಪಾಸಾಗಬಹುದು. ಆದರೆ, ಜೀವನದಲ್ಲಿ ಪಾಸಾಗಲು ಸಾಧ್ಯವಿಲ್ಲ. ಜ್ಞಾನವನ್ನು ಸಂಪಾದಿಸಲು ಯತ್ನಿಸಿ, ಮಾರ್ಕ್ಸ್ ಗಳು ತಾನಾಗೇ ಬರುತ್ತವೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi on Sunday urged the students to compete with yourself rather than with others and not to consider examinations as pressure.
Please Wait while comments are loading...