LPG Price: ವರ್ಷದ ಆರಂಭದಲ್ಲೇ ಭರ್ಜರಿ ಸಿಹಿಸುದ್ದಿ, ಎಲ್‌ಪಿಜಿ ದರ ಭಾರಿ ಇಳಿಕೆ
ಹೊಸ ವರ್ಷಕ್ಕೆ ಕಾಲಿಟ್ಟ ಮೊದಲ ದಿನವೇ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಕಳೆದ ವರ್ಷವಿಡೀ ನಿರಂತರ ಏರಿಕೆ ಕಂಡಿದ್ದ ಎಲ್‌ಪಿಜಿ ಸಿಲಿಂಡರ್ ದರವು, ಈ ವರ್ಷದ ಆರಂಭದಲ್ಲೇ ಇಳಿಕೆ ಕಂಡಿದೆ. ಸರ್ಕಾರಿ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಇಳಿಕೆ ಮಾಡಲು ನಿರ್ಧರಿಸಿದ್ದು, ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ.
ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಶೀಲಿಸಿ, ಹೊಸ ದರವನ್ನು ಪ್ರಕಟಿಸುತ್ತವೆ. ಅದರಂತೆ ಜನವರಿ 1 ಅಂದರೆ ಇಂದು ಪರಿಷ್ಕೃತ ದರ ಪ್ರಕಟಿಸಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ದರ ಮಾತ್ರ ಇಳಿಕೆಯಾಗಿದೆ. ಅದರಂತೆ ಪ್ರತಿ ಎಲ್‌ಪಿಜಿ ಸಿಲಿಂಡರ್ ಬೆಲೆ 14.50 ರೂಪಾಯಿಯಷ್ಟು ಇಳಿಕೆ ಕಂಡಿದೆ.

ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್ 1,804 ರೂಪಾಯಿಗೆ ಸಿಗಲಿದೆ. ಹಿಂದಿನ ದರವು ಎಲ್‌ಪಿಜಿ ಸಿಲಿಂಡರ್‌ಗೆ 1,818 ರೂಪಾಯಿ 50 ಪೈಸೆ ಇತ್ತು. ಹೊಸ ವರ್ಷದ ಸಂಭ್ರಮದಲ್ಲಿರುವ ದೇಶದ ಜನರಿಗೆ ಬೆಲೆ ಇಳಿಕೆ ಮೂಲಕ ಸಿಹಿಸುದ್ದಿ ನೀಡಿದೆ. ಅದರಂತೆ 19 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಲು ನಿರ್ಧರಿಸಿವೆ. ಪರಿಷ್ಕೃತ ದರವು ಇಂದಿನಿಂದಲೇ ಜಾರಿಯಾಗಿದ್ದು, ಇದರಿಂದ ವಾಣಿಜ್ಯ ಸಿಲಿಂಡರ್ ಬಳಕೆದಾರರು ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು ಪಶ್ಚಿಮಬಂಗಾಳದ ಕೋಲ್ಕತ್ತಾದಲ್ಲಿ 1,911 ರೂಪಾಯಿಗೆ ಸಿಲಿಂಡರ್ ದರ ಇಳಿಕೆಯಾಗಿದೆ. ಈ ಹಿಂದೆ ಇಲ್ಲಿ ಸಿಲಿಂಡರ್ ದರವು 1,927 ರೂಪಾಯಿ ಇತ್ತು ಎಂದು ವರದಿಯಾಗಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಸಿಲಿಂಡರ್ ಬೆಲೆ 1,756 ರೂಪಾಯಿಗೆ ಸಿಗಲಿದೆ. ಇನ್ನು ಚೆನ್ನೈನಲ್ಲಿ ಇಂದಿನಿಂದ 19 ಕೆ.ಜಿ ತೂಕದ ಸಿಲಿಂಡರ್ 1,966 ರೂಪಾಯಿಗೆ ಲಭ್ಯವಾಗಲಿದೆ.

ಎಲ್‌ಪಿಜಿ ಬೆಲೆಯಲ್ಲಿ ಕುಸಿತದ ಬಳಿಕ ವಾಣಿಜ್ಯ ಬಳಕೆಯ ಸಿಲಿಂಡರ್ ಇಂದಿನಿಂದ (ಜನವರಿ 1) 1,804 ರೂಪಾಯಿಗಳಿಗೆ ಲಭ್ಯವಾಗಲಿದೆ.
ತೈಲ ಸಿಲಿಂಡರ್ ಕಂಪನಿಗಳು ವಾಣಿಜ್ಯ ಬೆಲೆಯಲ್ಲಿ ಇಳಿಕೆಯನ್ನು ಘೋಷಿಸಿವೆ. ಆದರೂ, ಗೃಹ ಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಗಮನಾರ್ಹವಾಗಿ, 2024ರ ಆಗಸ್ಟ್ ತಿಂಗಳಿನಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಪರಿಷ್ಕರಿಸಲಾಗಿತ್ತು. ಅದಾದ ಬಳಿಕ 14 ಕೆಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಲಾಗಿಲ್ಲ.

ಗೃಹ ಬಳಕೆ ಸಿಲಿಂಡರ್ ದರ ಬದಲಾವಣೆ ಇಲ್ಲ: ಸದ್ಯ ತೈಲ ಕಂಪನಿಗಳು ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಮೇಲಿನ ದರ ಇಳಿಕೆಯನ್ನು ಮಾತ್ರವೇ ಘೋಷಿಸಿವೆ. ಆದರೆ ಗೃಹ ಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆಯಾಗಿತ್ತು. ನಂತರ 14 ಕೆ.ಜಿ ತೂಕದ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಿರಲಿಲ್ಲ. ಸದ್ಯ ಬೆಂಗಳೂರಿನಲ್ಲಿ ಗೃಹಬಳಕೆ ಸಿಲಿಂಡರ್ ದರವು 805.50 ರೂಪಾಯಿಯೇ ಇದೆ. ಎಲ್ಲ ಕಡೆಯೂ ಗೃಹಬಳಕೆ ಸಿಲಿಂಡರ್ ದರ ಯತಾಸ್ಥಿತಿಯಲ್ಲಿದೆ.












Click it and Unblock the Notifications