• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಿಸ್ಟೆಂಟ್ ಕಮಾಂಡೆಂಟ್ ಜೀವ ಉಳಿಸಿ ಹುತಾತ್ಮರಾದ ಕಮಾಂಡೋ ಸೂರಜ್

|
Google Oneindia Kannada News

ಛತ್ತೀಸ್‌ಗಢ ಜುಲೈ 12: ಇತ್ತೀಚೆಗೆ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಸಿಆರ್‌ಪಿಎಫ್‌ನ ತಂಡವೊಂದು ಆಪರೇಷನ್ ಮಾನ್ಸೂನ್ ಅಡಿಯಲ್ಲಿ ಕಾಡಿನಲ್ಲಿ ಗಸ್ತು ತಿರುಗುತ್ತಿತ್ತು. ಆಗ ಅವರ ದಾರಿಯಲ್ಲಿ ಮಳೆಯ ಪ್ರವಾಹ ಉಂಟಾಗಿದೆ. ಸೈನಿಕರು ಪರಸ್ಪರರ ಸಹಾಯದಿಂದ ದಾಟಲು ಪ್ರಾರಂಭಿಸಿದರು. ಸ್ವಲ್ಪ ಸಮಯದೊಳಗೆ ಅಲ್ಲಿ ಸಹಾಯಕ ಕಮಾಂಡೆಂಟ್ ಸಹಾಯಕ್ಕಾಗಿ ಮನವಿ ಮಾಡಿದರು. ಈ ಕುರಿತು ಸಿಆರ್‌ಪಿಎಫ್ 210 ಬೆಟಾಲಿಯನ್‌ನ ಕೋಬ್ರಾ ಕಮಾಂಡೋ ಸೂರಜ್ ಆರ್. ತಕ್ಷಣ ಅಲ್ಲಿಗೆ ತಲುಪಿದರು. ಅವರು ತನ್ನ ಅಧಿಕಾರಿಯ ಜೀವವನ್ನು ಉಳಿಸಿದರು. ಆದರೆ ತಾವು ಬದುಕುಳಿಯಲಿಲ್ಲ. ಸ್ವತಃ ಹುತಾತ್ಮನಾದರು. ಇದೀಗ ಅವರ ಸಾಹಸದ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಾಹಿತಿ ಪ್ರಕಾರ ಈ ಘಟನೆ ಶುಕ್ರವಾರ ನಡೆದಿದೆ. ಅಂದು ಬೆಳಗ್ಗೆ 7 ಗಂಟೆಗೆ ಸಿಆರ್ ಪಿಎಫ್ ತಂಡ ನಕ್ಸಲೀಯರ ವಿರುದ್ಧ ಕಾರ್ಯಾಚರಣೆಗೆ ಹೊರಟಿತ್ತು. ಮುಂಗಾರು ಮಳೆಯಿಂದಾಗಿ ಮಳೆಗಾಲದ ಚರಂಡಿಯಲ್ಲಿ ಹೆಚ್ಚು ನೀರು ಇದ್ದು, ಸೈನಿಕರು ಪರಸ್ಪರ ಕೈ ಹಿಡಿದು ದಾಟುತ್ತಿದ್ದರು. ಕೋಬ್ರಾ ಕಮಾಂಡೋ ಸೂರಜ್ ಆರ್. ಸಹ ಭಾಗಿಯಾಗಿದ್ದರು. ಅವರು ದಡವನ್ನು ತಲುಪಿದ್ದರು, ಇದ್ದಕ್ಕಿದ್ದಂತೆ ಅವರು ಕಮಾಂಡೆಂಟ್‌ನ ಧ್ವನಿಯನ್ನು ಕೇಳಿದರು.

ತನ್ನ ಅಧಿಕಾರಿಯ ಜೀವಕ್ಕೆ ಅಪಾಯವನ್ನು ಕಂಡ ಸೂರಜ್ ಮತ್ತೆ ಚರಂಡಿಗೆ ಇಳಿದರು. ಇದರ ನಂತರ ಅವರು ಸಹಾಯಕ ಕಮಾಂಡೆಂಟ್ ಅನ್ನು ಉಳಿಸಿದರು. ಆದರೆ ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ನೀರಿನ ಬಲವಾದ ಪ್ರವಾಹದಿಂದ ಕೊಚ್ಚಿಹೋದರು. ಅವರ ಪತ್ತೆಗೆ ಸಿಆರ್‌ಪಿಎಫ್ ತಂಡ ಹರಸಾಹಸ ಪಟ್ಟರೂ ಪತ್ತೆಯಾಗಲಿಲ್ಲ. ಅವರು ಹುತಾತ್ಮರಾಗಿದ್ದಾರೆಂದು ತಿಳಿದು ಬಂದಿದೆ. ಸೂರಜ್ ಮೂಲತ: ಕೇರಳದವರು. ಸದ್ಯ ಸಹಚರರ ಪ್ರಾಣಕ್ಕಾಗಿ ಪ್ರಾಣ ಬಿಟ್ಟ ಸೂರಜ್ ಅವರ ಮನೆಗೆ ಹೋಗಿ ಜೀವನಪೂರ್ತಿ ಸಹಾಯ ಮಾಡಬೇಕೆಂದು ಸಹಚರರು ನಿರ್ಧರಿಸಿದ್ದಾರೆ. ಇನ್ನೊಂದೆಡೆ ಸೂರಜ್‌ನ ಶೌರ್ಯದ ಕಥೆ ಕೇಳಿ ಇಡೀ ದೇಶವೇ ಅವರಿಗೆ ನಮನ ಸಲ್ಲಿಸುತ್ತಿದೆ.

Commando Suraj saving the life of Assistant Commandant and died

ಆಪರೇಷನ್ ಮಾನ್ಸೂನ್ ಎಂದರೇನು?

ವಾಸ್ತವವಾಗಿ ಛತ್ತೀಸ್‌ಗಢದ ಹಲವು ಜಿಲ್ಲೆಗಳು ನಕ್ಸಲ್ ಪೀಡಿತವಾಗಿವೆ. ಅಲ್ಲಿ ನಕ್ಸಲೀಯರು ಶೀತ ಮತ್ತು ಬೇಸಿಗೆಯಲ್ಲಿ ನಿರಂತರವಾಗಿ ತಮ್ಮ ಶಿಬಿರವನ್ನು ಬದಲಾಯಿಸುತ್ತಾರೆ. ಆದ್ದರಿಂದ ಭದ್ರತಾ ಪಡೆಗಳು ಅವರನ್ನು ಹುಡುಕಲು ಸಾಧ್ಯವಿಲ್ಲ. ಆದರೆ ಮಳೆಗಾಲದಲ್ಲಿ ಅವರು ಹೆಚ್ಚಾಗಿ ಕ್ಯಾಂಪ್ ಮಾಡುವ ಮೂಲಕ ಒಂದೇ ಸ್ಥಳದಲ್ಲಿ ಇರುತ್ತಾರೆ. ಈ ಕಾರಣದಿಂದಾಗಿ, CRPF ಈ ದಿನಗಳಲ್ಲಿ ಆಪರೇಷನ್ ಮಾನ್ಸೂನ್ ಅನ್ನು ನಡೆಸುತ್ತದೆ. ಇದರ ಅಡಿಯಲ್ಲಿ ಪ್ರತಿಕೂಲ ವಾತಾವರಣದಲ್ಲಿ ದಟ್ಟ ಅರಣ್ಯಗಳಿಗೆ ಹೋಗಿ ನಕ್ಸಲೀಯರನ್ನು ಹುಡುಕಲಾಗುತ್ತದೆ. ಇದನ್ನು ಆಪರೇಷನ್ ಮಾನ್ಸೂನ್ ಎಂದು ಕರೆಯಲಾಗುತ್ತದೆ.

Recommended Video

   Dinesh Karthik ಇನ್ಮುಂದೆ ಬೆಂಚ್ ಕಾಯೋದು ಕನ್ಫರ್ಮ್ | *Cricket | OneIndia Kannada
   English summary
   Cobra commando Suraj saved the life of Assistant Commandant in a bustling drain, but became a martyr himself.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X