Cold Wave Alert: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಭಾರೀ 'ಚಳಿ ವಾತಾವರಣ' ಮುನ್ಸೂಚನೆ
ನವದೆಹಲಿ, ಡಿಸೆಂಬರ್ 30: ಬಂಗಾಳಕೊಲ್ಲಿ ಬಳಿಕ ಅರಬ್ಬಿ ಸಮುದ್ರ ಮೇಲ್ಮೈನಲ್ಲಿ ಕಿಲೋ ಮೀಟರ್‌ಗಳಷ್ಟು ಎತ್ತರದಲ್ಲಿ ಚಂಡಮಾರುತದ ಬಿರುಗಾಳಿ (ವೈಪರಿತ್ಯ) ಸೃಷ್ಟಿಯಾಗಿದೆ. ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಕರಾವಳಿ ಭಾಗದಿಂದ ಕೆಲವೇ ಕಿಲೋ ಮೀಟರ್‌ದಲ್ಲಿ ಚಂಡಮಾರುತ ಪರಿಚಲನೆ ಕೇಂದ್ರೀಕೃತವಾಗಿದೆ. ಇದರಿಂದ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಮಂಜು, ಚಳಿ ವಾತಾವರಣದ ಮುನ್ಸೂಚನೆ ಇದೆ. ಕೆಲವೆಡೆ ಹಗುರ ಮಳೆ ಬಂದರೆ, ಬಹುತೇಕ ಕಡೆಗಳಲ್ಲಿ ಶುಷ್ಕ ವಾತಾವರಣ ಕಂಡು ಬರಲಿದೆ.
ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆ ಪ್ರಕಾರ, ಈಶಾನ್ಯ ರಾಜಸ್ಥಾನ ಸುತ್ತಮುತ್ತಲಿನ ಕರಾವಳಿ ಭಾಗದ ಸಮುದ್ರ ಮೇಲ್ಮೈ ಮೇಲೆ 1.5 ಕಿಮೀ ಎತ್ತರದಲ್ಲಿ ಚಂಡಮಾರುತ ನಿರ್ಮಾಣವಾಗಿದೆ. ಈಶಾನ್ಯ ರಾಜಸ್ಥಾನ ಮತ್ತು ನೆರೆಹೊರೆಯಲ್ಲಿ ಚಂಡಮಾರುತದ ಪರಿಚಲನೆಯಿಂದ ಉತ್ತರ ಗುಜರಾತ್‌ಗೆ 1.5 ಕಿಮೀ ಎತ್ತರದಲ್ಲಿ ಟ್ರಫ್ (ಗಾಳಿಯ ಒತ್ತಡದ ಪ್ರದೇಶ) ಮುಂದುವರಿಯಲಿದೆ.

ಅರಬ್ಬಿ ಸಮುದ್ರದ ಪೂರ್ವಭಾಗದಲ್ಲಿರುವ ಟ್ರಫ್ ಈಗ ಆಗ್ನೇಯ ಭಾಗದಿಂದ ದಕ್ಷಿಣ ಮಹಾರಾಷ್ಟ್ರ ಕರಾವಳಿಯವರೆಗೆ ಸರಾಸರಿ ಸಮುದ್ರ ಮಟ್ಟದಿಂದ 9 ಕಿಮೀ ಎತ್ತರದಲ್ಲಿ ಚಲಿಸುತ್ತಿದೆ. ಇಂದು (ಡಿ.30) ಸಂಜೆ ಈ ವೈಪರಿತ್ಯವು ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.
ಚಂಡಮಾರುತ ಅಬ್ಬರ: ರಾಜ್ಯಗಳಿಗೆ ಚಳಿ ಅಲೆ, ಮಳೆ ಸಾಧ್ಯತೆ
ಇನ್ನೂ ದಕ್ಷಿಣ ಕೇರಳ ಕರಾವಳಿಯ ಆಗ್ನೇಯ ಅರೇಬಿಯನ್ ಸಮುದ್ರದ ಮೇಲಿನ ಗಾಳಿಯ ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 3.1 ಕಿಮೀ ಎತ್ತರದಲ್ಲಿದೆ. ಇವೆಲ್ಲ ಹವಾಮಾನ ಬದಲಾವಣೆಗಳಿಂದ ಕರ್ನಾಟಕ, ಗುಜರಾಥ್, ಮಹಾರಾಷ್ಟ್ರ, ರಾಜಸ್ಥಾನ, ಛತ್ತಿಸ್‌ಗಢ, ಹರಿಯಾಣ, ಉತ್ತರ ಪ್ರದೇಶ ಸೇರಿ ವಿವಿಧ ರಾಜ್ಯಗಳಲ್ಲಿ ಜನವರಿ 4ರವರೆಗೆ ವಿಪರೀತ ಚಳಿ ಅಲೆಯು ಸೃಷ್ಟಿಯಾಗಲಿದೆ. ಕರಾವಳಿ ಜಿಲ್ಲೆಗಳ ಕೆಲವೆಡೆ ಹಗುರು ಮಳೆ ಆಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಬಂಗಾಳಕೊಲ್ಲಿ, ಅಂಡಮಾನ್ ಭಾಗದಲ್ಲಿ ಬದಲಾವಣೆಗಳು, ವಾಯುಭಾರ ಕುಸಿತಗೊಂಡರೆ, ತಮಿಳುನಾಡು, ಆಂಧ್ರ ಪ್ರದೇಶ, ಒಡಿಶಾ, ಕರ್ನಾಟಕ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ವ್ಯಾಪಕ ಚಳಿ, ಮಳೆ ಬರುತ್ತದೆ. ಇದೀಗ ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಪರಿಚಲನೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಇದರ ಪ್ರಭಾವ ಕರ್ನಾಟಕದ ಉತ್ತರ ಒಳನಾಡು ಜಿಲ್ಲೆಗಳ ಮೇಲೆ ಹೆಚ್ಚಾಗಿರುತ್ತದೆ.
ಮಳೆ ಕಡಿಮೆ, ಚಳಿ-ಬಿಸಿಲು ಏರಿಕೆ ಸಂಭವ
ಮಾತ್ರವಲ್ಲೇ, ಕರ್ನಾಟಕ ಕರಾವಳಿ, ಮಹಾರಾಷ್ಟ್ರ ಕರಾವಳಿ ಜಿಲ್ಲೆಗಳು, ಗುಜರಾತ್, ಹರಿಯಾಣ, ಪಂಜಾದ್, ರಾಜಸ್ಥಾನ್ ಹೀಗೆ ಕೆಲವು ರಾಜ್ಯಗಳ ಮೇಲೆ ಪ್ರಭಾವ ಬೀರುತ್ತದೆ. ಈ ರಾಜ್ಯಗಳಲ್ಲಿ ಮುಂದಿನ 05 ದಿನ ಚಳಿಯ ಅಲೆ (Cold Wave) ಕಂಡು ಬರಲಿದೆ. ಮೈಕೊರೆವ ಚಳಿ ಬೀಳಲಿದೆ. ಮಳೆ ಬರುವಿಕೆ ಅಷ್ಟಾಗಿ ಇರುವುದಿಲ್ಲ. ಬೆಳಗ್ಗೆ, ರಾತ್ರಿ ಚಳಿ ಹೆಚ್ಚಾಗಿರಲಿದ್ದು, ಮಧ್ಯಾಹ್ನ ಅತೀವ ಬಿಸಿಲು (ಶುಷ್ಕ ವಾತಾವರಣ) ಕಂಡು ಬರಲಿದೆ.
ಸೋಮವಾರ ಐಎಂಡಿ ಮುನ್ಸೂಚನೆ ಪ್ರಕಾರ, ಅರಬ್ಬಿ ಸಮುದ್ರದಲ್ಲಿನ ಚಂಡಮಾರುತ ಪರಿಚಲನೆ ಮುಂದಿನ 24 ಗಂಟೆಗಳಲ್ಲಿ ಕ್ಷೀಣಿಸಲಿದೆ. ಹೀಗಾಗಿ ಚಳಿಯ ಮುನ್ಸೂಚನೆ ಮಾತ್ರ ಇದ್ದು, ಭಾರೀ ಮಳೆಯ ಸ್ವರೂಪ, ಲಕ್ಷಣಗಳು ವಾತಾವರಣದಲ್ಲಿ ಇಲ್ಲ ಎಂದು ತಿಳಿಸಿದೆ.
ರಾಜ್ಯದಲ್ಲಿ ಕನಿಷ್ಠ 14 ಡಿ.ಸೆ. ತಾಪಮಾನ, ಚಳಿ ಏರಿಕೆ
ಸದ್ಯ ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲೂ ಎರಡು ಮೂರು ದಿನಗಳಿಂದ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ. ಮಳೆ ಗಣನೀಯವಾಗಿ ಇಳಿಕೆ ಕಂಡಿದೆ. ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 14ರಿಂದ 17 ಡಿಗ್ರಿ ಸೆಲ್ಸಿಯಸ್ ಇದೆ. ಚಿಂತಾಮಣಿಯಲ್ಲಿಕನಿಷ್ಠ ತಾಪಮಾನ 14 , ಹಾಸನ, ಚಾಮರಾಜನಗರ, ವಿಜಯಪುರದಲ್ಲಿ ಕನಿಷ್ಠ ತಾಪಮಾನ ತಲಾ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.












Click it and Unblock the Notifications