ಕಾಗ್ನಿಜೇಬಲ್ ಅಪರಾಧದಲ್ಲೂ FIR ಮಸ್ಟ್: ಸುಪ್ರೀಂಕೋರ್ಟ್

cognizable offence (ನ್ಯಾಯ ದಂಡಾಧಿಕಾರಿಯ ಅಪ್ಪಣೆಯಿಲ್ಲದೆ ಪೋಲೀಸರು ದಸ್ತಗಿರಿ ಮಾಡಬಹುದಾದ ಅಪರಾಧ) ಪ್ರಕರಣದಲ್ಲಿ FIR ದಾಖಲಿಸಿಕೊಳ್ಳದಿದ್ದರೆ ಅಂತಹ ಠಾಣಾಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಐದು ಮಂದಿ ನ್ಯಾಯಾಧೀಶಯರನ್ನೊಳಗೊಂಡ ಸಾಂವಿಧಾನಿಕ ಪೀಠ ತಿಳಿಸಿದೆ.
cognizable offence ಅಂದರೆ ವಾರಂಟ್ ಇಲ್ಲದೆ ಪೊಲೀಸರು ಆರೋಪಿಯನ್ನು ಬಂಧಿಸಬಹುದಾದಂತಹ ಪ್ರಕರಣಗಳು. ಕನಿಷ್ಠ 3 ವರ್ಷ ಮತ್ತು ಅದಕ್ಕಿಂತ ಹೆಚ್ಚು ಅವಧಿಗೆ ಶಿಕ್ಷೆಗೆ ಗುರಿಪಡಿಸಬಹುದಾದಂತಹ ಪ್ರಕರಣ.
ನ್ಯಾಯಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ಪಿ ಸದಾಶಿವಂ ಅವರು ಮಂಗಳವಾರ ಈ ಆದೇಶ ನೀಡಿದ್ದು, ಕಾಗ್ನಿಜೇಬಲ್ ಅಪರಾಧ ಪ್ರಕರಣದಲ್ಲಿ 7 ದಿನಗಳ ಒಳಗಾಗಿ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಬೇಕು. ಅಂದರೆ ಪ್ರಕರಣದ ತನಿಖೆ/ ವಿಚಾರಣೆ ನಡೆಸುವುದು ಅಂತಲ್ಲ. ಬದಲಿಗೆ ಪ್ರಕರಣದ ಸತ್ಯಾಸತ್ಯತೆ ಅರಿಯಲು ಸಹಾಯಕವಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ವಿವಾಹ, ಭ್ರಷ್ಟಾಚಾರ, ಹಣಕಾಸು ದುರುಪಯೋಗ ಸಂಬಂಧದ ಮತ್ತಿತರ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳುವುದಕ್ಕೆ ಮುನ್ನ ಪ್ರಾಥಮಿಕ ತನಿಖೆ ನಡೆಸುವುದು ಸ್ವೀಕಾರಾರ್ಹ ಎಂದು ಸುಪ್ರೀಂ ಪೀಠ ಹೇಳಿದೆ.












Click it and Unblock the Notifications