Cockroach: ಭಾರತದಲ್ಲೂ ನೇಪಾಳ ಮಾದರಿ ಜೆನ್‌ಜೀ ಕ್ರಾಂತಿ: ನಾನೂ ಕ್ರಾಕೋಚ್ ಅಂತಿದ್ದಾರೆ ಯುವಕರು, ಏನಿದು ಅಭಿಯಾನ
Cockroach: ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಹೊಸ ಪಾರ್ಟಿಯೊಂದು ತೀವ್ರ ಸಂಚಲನ ಸೃಷ್ಟಿ ಮಾಡಿದೆ. ಆದರೆ ಇದು ರಾಜಕೀಯ ಪಾರ್ಟಿಯಲ್ಲ, ಇದು ಯುವಕರೆ ಸೃಷ್ಟಿ ಮಾಡಿರುವ ಆಕ್ರೋಶ ಭರಿತ ವ್ಯಂಗ್ಯ ಪಾರ್ಟಿ. ಈ ಪಾರ್ಟಿಯ ಕುರುಹುಗಳನ್ನು ನೋಡುತ್ತಿದ್ದರೆ, ನೇಪಾಳದ ಜೆನ್‌ಜೀ ಹೋರಾಟವೇ ಕಣ್ಣಮುಂದೆ ಬರುವಂತಿದೆ. ನೆರೆಯ ನೇಪಾಳದಲ್ಲಿ ಯುವ ಕ್ರಾಂತಿ ಪ್ರಾರಂಭವಾದಾಗಲೇ ಅದರ ದಟ್ಟ ಕಾಮೋರ್ಡಗಳು ಭಾರತದಲ್ಲೂ ಆವರಿಸಿತ್ತು. ಅದೀಗ ಮೂರ್ತ ರೂಪವೊಂದನ್ನು ಪಡೆದುಕೊಳ್ಳುತ್ತಿದೆ. ದೇಶದ ನಿರುದ್ಯೋಗಿ ಯುವಕರನ್ನು ಜಿರಳಗೆ ಹೋಲಿಕೆ ಮಾಡಿದ ಮೇಲೆ ಈ ಅಭಿಯಾನ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ. ನೀವು ನಿರುದ್ಯೋಗಿ, ಯಾವುದೇ ಕೆಲಸ ಇಲ್ಲ, ಸೋಶಿಯಲ್ ಮೀಡಿಯಾ ಕ್ರಿಯೇಟರ್ ಅಥವಾ ಆರ್‌ಟಿಐ ಕಾರ್ಯಕರ್ತರು ಸೇರಿದಂತೆ ಯಾವುದಾದರೂ ಒಂದು ಹಂತದಲ್ಲಿದ್ದರೆ ನೀವು ನೀವು ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸದಸ್ಯರಾಗುವುದಕ್ಕೆ ಬೇಕಾದ ಎಲ್ಲ ಆರ್ಹತೆಯನ್ನು ಗಳಿಸಿದ್ದೀರಿ ಅಂತಲೇ ಅರ್ಥ! ಭಾರತದಲ್ಲಿ ಹೊಸದಾಗಿ ಪ್ರಾರಂಭವಾಗಿರುವ ಭಾರತೀಯ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ)ವು ತನ್ನ ಅಧಿಕೃತ ವೆಬ್‌ಸೈಟ್ ಸಹ ಬಿಡುಗಡೆ ಮಾಡಿದೆ. ಇದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೋಡೋಣ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರು, ಭಾರತೀಯ ನಿರುದ್ಯೋಗಿ ಯುವಕರನ್ನು ಜಿರಳೆಗಳಿಗೆ ಹೋಲಿಕೆ ಮಾಡಿದ ನಂತರ ಭಾರತದಲ್ಲಿ ಹೊಸ ಸಂಚಲನವೊಂದು ಸೃಷ್ಟಿಯಾಗಿದೆ. ಭಾರತದಲ್ಲಿ ನಿರುದ್ಯೋಗಿ ಯುವಕರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ವಿವರಿಸುವ ಹಂತದಲ್ಲಿ ನಿರುದ್ಯೋಗಿ ಯುವಕರನ್ನು ಅವರು ಜಿರಳೆಗಳಿಗೆ ಹೋಲಿಕೆ ಮಾಡಿದ್ದರು. ಇದಕ್ಕೆ ವಿಡಂಬನಾತ್ಮಕ ಉತ್ತರವಾಗಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಪ್ರಾರಂಭವಾಗಿದೆ.

ಪಕ್ಷವು ಮೇ 16 ರಂದು ಅಸ್ತಿತ್ವಕ್ಕೆ ಬಂದಿದ್ದು, ದೊಡ್ಡ ಮಟ್ಟದಲ್ಲಿ ಯುವಕರು ಈ ಪಾರ್ಟಿಯ ವೆಬ್‌ಸೈಟ್ ಹಾಗೂ ಸೋಶಿಯಲ್ ಮೀಡಿಯಾ ಖಾತೆಗಳನ್ನು ಫಾಲೋ ಮಾಡುವುದಕ್ಕೆ ಪ್ರಾರಂಭಿಸಿದ್ದಾರೆ. ಸಿಜೆಪಿಯ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ 38,000ಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಮತ್ತು Instagramನಲ್ಲಿ 4,20,000 ಫಾಲೋವರ್ಸ್ ಇದ್ದಾರೆ. ಈ ಪಕ್ಷ ಪ್ರಾರಂಭವಾದಾಗಿನಿಂದ 1 ಲಕ್ಷ ಜನರು ಪಕ್ಷಕ್ಕೆ ಸೇರಿದ್ದಾರೆ ಎಂದು ಸಿಜೆಪಿ ಹೇಳಿಕೊಂಡಿದೆ. ಟಿಎಂಸಿಯ ಮಹುವಾ ಮೊಯಿತ್ರಾ ಮತ್ತು ಕೀರ್ತಿ ಆಜಾದ್‌ರಂತಹ ದೊಡ್ಡ ರಾಜಕಾರಣಿಗಳು ಸಹ ಈ ಲಿಸ್ಟ್‌ನಲ್ಲಿ ಇದ್ದಾರೆ. ಭಾರತದಲ್ಲಿನ ಈ ಅಭಿಯಾನವನ್ನು ನೇಪಾಳದ ಜೆನ್‌ಜೀ ಮಾದರಿಯ ಅಭಿಯಾನಕ್ಕೆ ಹೋಲಿಕೆ ಮಾಡಲಾಗುತ್ತಿದೆ.
"ಸೋಮಾರಿಗಳು, ದೀರ್ಘಕಾಲಿಕವಾಗಿ ಆನ್‌ಲೈನ್‌ನಲ್ಲಿ ಇರುವವರು ಹಾಗೂ ಇತ್ತೀಚೆಗೆ ಜಿರಳೆಗಳು ಎಂದು ಕರೆಯಲ್ಪಡುವ ಯುವಕರಿಗಾಗಿ ಪಕ್ಷವನ್ನು ನಿರ್ಮಿಸುವುದು" ಸಿಜೆಪಿಯ ಧ್ಯೇಯವಾಗಿದೆ. ಅಷ್ಟೆ. ಅದೇ ಧ್ಯೇಯ ಇನ್ನು ಉಳಿದದ್ದು ವಿಡಂಬನೆ ಎಂದು ಅದರ ವೆಬ್‌ಸೈಟ್‌ನಲ್ಲಿ ಬರೆದುಕೊಳ್ಳಲಾಗಿದೆ.
ಸಿಜೆಪಿಯ ಸಂಸ್ಥಾಪಕರು ಯಾರು?
ಪಕ್ಷದ ವೆಬ್‌ಸೈಟ್‌ನಲ್ಲಿ ಅಭಿಜೀತ್ ದಿಪ್ಕೆ ಅವರನ್ನು ಪಕ್ಷದ ಸ್ಥಾಪಕರಾಗಿ ಉಲ್ಲೇಖಿಸಲಾಗಿದೆ. ದಿ ಹಿಂದೂ ವರದಿ ಪ್ರಕಾರ, 30 ವರ್ಷದ ಅಭಿಜೀತ್ ದಿಪ್ಕೆ ಅವರು ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂವಹನ ವಿಷಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ, ಅವರು 2020ರಿಂದ 2023ರವರೆಗೆ ಆಮ್ ಆದ್ಮಿ ಪಕ್ಷದ (AAP) ಸಾಮಾಜಿಕ ಮಾಧ್ಯಮ ತಂಡದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿದೆ.
ಸೋಶಿಯಲ್ ಮೀಡಿಯಾ ಎಕ್ಸ್ ಪೋಸ್ಟ್‌ನಲ್ಲಿ ಅಭಿಜೀತ್ ಅವರು ತಮ್ಮ 'ಜಿರಳೆ' ಹೇಳಿಕೆ ಕುರಿತು ಮುಖ್ಯ ನ್ಯಾಯಮೂರ್ತಿಗಳು ನೀಡಿದ ಕಠಿಣ ಪ್ರತಿಕ್ರಿಯೆಯ ವಿವರಣೆಯನ್ನು ಖಂಡಿಸಿದ್ದಾರೆ. ಯುವಕರನ್ನು ಟೀಕಿಸಿದಂತೆ ಕೆಲವು ಮಾಧ್ಯಮಗಳು ವರದಿ ಮಾಡಿರುವುದರಿಂದ ತಾವು ನೋವುಗೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಪ್ರಣಾಳಿಕೆ ತಯಾರಿಸಿದ ಸಿಜೆಪಿ
ಪಕ್ಷವು ಭಾರತದ ಸಂವಿಧಾನದಲ್ಲಿ ದೃಢ ನಂಬಿಕೆಯನ್ನು ಹೊಂದಿದೆ. ಅದರ ಮೌಲ್ಯಗಳನ್ನು ರಕ್ಷಿಸಲು ಕೆಲಸ ಮಾಡಲಿದ್ದು, ನಮ್ಮ ಪಕ್ಷವು ಐದು ವಿಚಾರಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಸಹ ಹೊಂದಿದೆ ಎಂದು ಪಕ್ಷವು ಹೇಳಿಕೊಂಡಿದೆ.
ಒಂದು ವೇಳೆ ಸಿಜೆಪಿ ಅಧಿಕಾರಕ್ಕೆ ಬಂದರೆ ನಾವು ಐದು ಕೆಲಸಗಳನ್ನು ಮಾಡಲಿದ್ದೇವೆ.
1. ದೇಶದ ಯಾವುದೇ ಮುಖ್ಯ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರದ ಬಹುಮಾನವಾಗಿ ರಾಜ್ಯಸಭಾ ಸ್ಥಾನವನ್ನು ಕೊಡುವುದಿಲ್ಲ.
2. ಸಂಸತ್‌ನಲ್ಲಿ ಮಹಿಳೆಯರಿಗೆ ಶೇ 50 ರಷ್ಟು ಮೀಸಲಾತಿ ಕೊಡಲಾಗುವುದು.
3. ಪಕ್ಷಾಂತರದ ಸಂದರ್ಭದಲ್ಲಿ ಸಂಸದರು ಮತ್ತು ಶಾಸಕರು 20 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಿಲ್ಲ.
4. ಕಾನೂನುಬದ್ಧ ಮತ ಅಳಿಸುವಿಕೆ ಪ್ರಕರಣಕ್ಕೆ ಸಂಬಂಧಪಟ್ಟರೆ ಅಥವಾ ಎದುರಾದರೆ ಯುಎಪಿಎ ಅಡಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು (ಸಿಇಸಿ) ಬಂಧಿಸಲಾಗುವುದು.
5. ಅಂಬಾನಿ ಹಾಗೂ ಅದಾನಿ ಒಡೆತನದ ಎಲ್ಲಾ ಮಾಧ್ಯಮ ಸಂಸ್ಥೆಗಳ ಪರವಾನಗಿಗಳನ್ನು ರದ್ದು ಮಾಡಲಾಗುವುದು ಎನ್ನುವ ಪ್ರಮುಖ ಅಂಶಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.
Spreading like 🪳🪳🪳🪳
— Cockroach Janta Party (@CJP_2029) May 18, 2026
Join now : https://t.co/2BdBYMQhl8 pic.twitter.com/ETKlXyr5tP
ಮುಖ್ಯ ನ್ಯಾಯಮೂರ್ತಿ ದೇಶದ ಯುವಕರ ಬಗ್ಗೆ ಹೇಳಿದ್ದೇನು
ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರು ಮೇ 16ರಂದು ಪ್ರಕರಣದ ವಿಚಾರಣೆಯೊಂದರ ವೇಳೆ 'ನಿರುದ್ಯೋಗಿ ಯುವ ಜನತೆ ಜಿರಳೆಗಳಿದ್ದಂತೆ" ಎಂಬ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆಯ ನಂತರ ಅವರು ಹೇಳಿಕೆಗೆ ಸ್ಪಷ್ಟನೆ ಕೊಟ್ಟರೂ, ಯುವಕರ ಆಕ್ರೋಶ ಕಡಿಮೆಯಾಗಿಲ್ಲ.













Click it and Unblock the Notifications