Nipah Virus: ನಿಫಾ ವೈರಸ್ ಬಗ್ಗೆ ಕೇರಳ ಸಿಎಂ ಹೇಳಿದ್ದೇನು?
ಕೊರೊನಾ ಬಳಿಕ ದೇಶದಲ್ಲಿ ಹೊಸ ವೈರಸ್ ಹಾವಳಿ ಭಯ ಹುಟ್ಟಿಸಿದೆ. ಅದರಲ್ಲೂ ಈ ಸಂದರ್ಭದಲ್ಲೇ ಕೇರಳ ಸಿಎಂ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕೇರಳದಲ್ಲಿ ನಿಫಾ ವೈರಸ್ ಹಾವಳಿ ಕೈಮೀರಿ ಹೋಗಿದೆ. ಏನು ಮಾಡೋದು ಅಂತಾ ಸರ್ಕಾರ ತಲೆಮೇಲೆ ಕೈಹೊತ್ತು ಕೂತಿರುವ ಸಂದರ್ಭದಲ್ಲೇ, ಕೇರಳ ಸಿಎಂ ನೀಡಿರುವ ಹೇಳಿಕೆ ಈಗ ಸಂಚಲನ ಸೃಷ್ಟಿಸಿದೆ. ಹಾಗಾದರೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದೇನು.
ಅಂದಹಾಗೆ ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಸಿಕ್ಕಿದೆ, ಆದರೂ ಕೇರಳದಲ್ಲಿ ಆತಂಕ ಕೊನೆಯಾಗಿಲ್ಲ ಎಂದಿದ್ದಾರೆ ಪಿಣರಾಯಿ ವಿಜಯನ್. ಈ ಮೂಲಕ ಕೇರಳದ ಸ್ಥಿತಿ ಬಗ್ಗೆ ಸ್ವತಃ ಅಲ್ಲಿನ ಸಿಎಂ ಸ್ಫೋಟಕ ಮಾಹಿತಿ ನೀಡಿದ್ದಾರೆ. ಭಯಾನಕ ವೈರಸ್ ಎಂದು ಕರೆಸಿಕೊಳ್ಳುವ ಈ ನಿಫಾ ವೈರಸ್ ಸ್ವಲ್ಪ ಹೆಚ್ಚುಕಮ್ಮಿ ಆದ್ರೂ ಜೀವ ತೆಗೆಯುತ್ತದೆ. ಈ ಹಿನ್ನೆಲೆ ಕರ್ನಾಟಕ ಸೇರಿದಂತೆ ಕೇರಳ ಜೊತೆ ಗಡಿ ಹಂಚಿಕೊಂಡ ರಾಜ್ಯಗಳಿಗೆ ಭಯ ಶುರುವಾಗಿದೆ. ಹಾಗಾದರೆ ನಿಫಾ ವೈರಸ್ ರೋಗ ಲಕ್ಷಣ ಏನು?

ನಿಫಾ ಮನುಷ್ಯರಿಗೆ ಹೇಗೆ ಹರಡುತ್ತೆ?
ಅಷ್ಟಕ್ಕೂ ನಿಫಾ ವೈರಸ್ (NV) ಅಪರೂಪದ ರೋಗವಾದರೂ ಭಾರಿ ದೊಡ್ಡ ಅಪಾಯ ಈ ವೈರಸ್‌ನಿಂದ ಮನುಷ್ಯರಿಗೆ ಎದುರಾಗುತ್ತದೆ. ಭಾರತದಲ್ಲಿ, ಇಂಡೋ-ಬಾಂಗ್ಲಾದೇಶ ಮತ್ತು ಕೇರಳ ಕರಾವಳಿ ವಲಯದಲ್ಲಿ ಈ ವೈರಸ್ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ ಅಂತಾರೆ ತಜ್ಞರು. ಹಾಗೇ ನಿಫಾ ವೈರಸ್ ಬಾವಲಿಗಳಿಂದ ಮನುಷ್ಯರಿಗೆ ಬರುತ್ತೆ. ಇದೀಗ ಕೇರಳದಲ್ಲಿ ನಿಫಾ ವೈರಸ್ 2ನೇ ಅಲೆ ಬಗ್ಗೆ ಕೇರಳ ಸಿಎಂ ಮುನ್ಸೂಚನೆ ನೀಡಿದ್ದು, ಭಯ ಹುಟ್ಟಿಸುತ್ತಿದೆ.
ನಿಫಾ ವೈರಸ್ ಲಕ್ಷಣ ಏನು?
ಸಾಮಾನ್ಯವಾಗಿ ಇತರ ವೈರಸ್‌ಗಳ ರೀತಿಯೇ ನಿಫಾ ವೈರಸ್ ಹರಡಿದರೂ ಇದರ ಫಲಿತಾಂಶ ಮಾತ್ರ ಭಯಾನಕ. ನಿಫಾ ವೈರಸ್ ಲಕ್ಷಣ ನೋಡುವುದಾದರೆ ಭಾರಿ ಜ್ವರ, ತಲೆನೋವು & ತಲೆತಿರುಗುವಿಕೆ, ಉಸಿರಾಟ ತೊಂದರೆ ಕಾಣಿಸುತ್ತೆ. ಹಾಗೇ ಈ ನಿಫಾ ವೈರಸ್‌ಗೆ ಯಾವುದೇ ವಯಸ್ಸಿನ ಹಂಗು ಇಲ್ಲ, ಯಾವುದೆ ವಯಸ್ಸಿನ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ ಸಮಸ್ಯೆ ಪಕ್ಕಾ. ಹಾಗೇ ಸೋಂಕಿತರ ಸಂಪರ್ಕಕ್ಕೆ ಬರುವ ಯಾವುದೇ ವ್ಯಕ್ತಿ ನಿಫಾದ ಸಂಕಷ್ಟಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು.
ಕೇರಳದಲ್ಲಿ ಹೈಅಲರ್ಟ್ ಘೋಷಣೆ
ಅಧಿಕಾರಿಗಳ ಜೊತೆ ವಿಶೇಷ ಸಭೆ ನಡೆಸಿರುವ ಕೇರಳ ಸಿಎಂ, ನಿಫಾ ಭೀತಿ ಸಂಪೂರ್ಣವಾಗಿ ಮುಕ್ತಾಯವಾಗಿದೆ ಅಂತಾ ಹೇಳಲಾಗದು. ಆದ್ರೆ ಸೋಂಕು ಹೆಚ್ಚಿನ ಜನರಿಗೆ ಹರಡಿಲ್ಲ ಎಂಬ ವಿಚಾರ ಸಮಾಧಾನ ನೀಡಿದೆ ಎಂದಿದ್ದಾರೆ. ನಿಫಾ ಸೋಂಕು ಪರಿಶೀಲನಾ ಸಭೆ ನಡೆಯಿತು. ಸೋಂಕಿನ ಎರಡನೇ ಅಲೆ ಸಾಧ್ಯತೆ ತೀರಾ ಕಡಿಮೆ. ಆದರೂ ಸಂಪೂರ್ಣವಾಗಿ ನಿರಾಕರಿಸಲು ಸಾಧ್ಯವಿಲ್ಲ ಎಂದು ಕೇರಳ ಸಿಎಂ ಹೇಳಿರುವುದು ಚಿಂತೆಗೆ ಕಾರಣವಾಗಿದೆ.

ತನಿಖೆ ನಡೆಸುತ್ತಿದ್ದರೂ ಉತ್ತರ ಸಿಕ್ಕಿಲ್ಲ?
ಕೇರಳದಲ್ಲಿ ನಿಫಾ ಸೋಂಕಿನ ಲಕ್ಷಣ ಕಾಣಿಸಿದ್ದ 12 ವರ್ಷದ ಬಾಲಕ ಸೆಪ್ಟೆಂಬರ್ ಮೊದಲ ವಾರದಲ್ಲಿ ಮೃತಪಟ್ಟಿದ್ದ. ಹಾಗೇ ಕೇರಳದಲ್ಲಿ ಒಟ್ಟು 6 ಜನರಿಗೆ ನಿಫಾ ವೈರಸ್ ದೃಢವಾಗಿ, ಸೋಂಕಿನ ಲಕ್ಷಣ ಕಂಡುಬಂದ 9 ಜನರನ್ನು ಕೋಯಿಕ್ಕೋಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ ಕೇರಳ ಸ್ಥಿತಿ ಬಗ್ಗೆ ತನಿಖೆ ನಡೆಯುತ್ತಿದ್ದು ನಿಫಾ ಕಾಣಿಸಿಕೊಳ್ಳಲು ಕಾರಣವೇನು? ಎಂಬ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಒಟ್ನಲ್ಲಿ ಕೊರೊನಾ ಬಳಿಕ ದೇಶದಲ್ಲಿ ಮತ್ತೊಂದು ವೈರಸ್ ಕಾಟ ಕೊಡಲು ಮುಂದಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಅದ್ರಲ್ಲೂ ನಿಫಾ ವೈರಸ್ ಹರಡಿರುವ ಕೇರಳ ರಾಜ್ಯ ಕರ್ನಾಟಕದ ಪಕ್ಕದಲ್ಲೇ ಇದ್ದು, ಕರ್ನಾಟಕ ಸರ್ಕಾರ ಕೂಡ ಅಲರ್ಟ್ ಆಗಿ ಗಡಿ ಭಾಗದ ಪ್ರದೇಶದಲ್ಲಿ ಪರಿಶೀಲನೆ ಹೆಚ್ಚಿಸಿದೆ. ಇಷ್ಟೆಲ್ಲದರ ಮಧ್ಯೆ ಕೇರಳದಲ್ಲಿ ಮುಂದೆ ಕೂಡ ಈ ಡೆಡ್ಲಿ ವೈರಸ್ ಅಬ್ಬರಿಸುವ ಮುನ್ಸೂಚನೆ ಸಿಕ್ಕಿರುವುದು ವಿಪರ್ಯಾಸ.












Click it and Unblock the Notifications