ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಡಾಯವೆದ್ದಿದ್ದ ಜಡ್ಜ್ ಗಳಿಗೆ ಸೆಡ್ಡು ಹೊಡೆದ ದೀಪಕ್ ಮಿಶ್ರಾ!

|
Google Oneindia Kannada News

ನವದೆಹಲಿ, ಜನವರಿ 16: ಪ್ರಮುಖ ಪ್ರಕರಣಗಳ ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನಿರ್ಮಿಸಿರುವ ಪಂಚ ಸದಸ್ಯ ಸಾಂವಿಧಾನಿಕ ಪೀಠವೊಂದನ್ನು ನಿರ್ಮಿಸಿದ್ದು, ಅದರಲ್ಲಿ ಬಂಡಾಯವೆದ್ದ ನಾಲ್ಕೂ ಜಡ್ಜ್ ಗಳ ಹೆಸರಿಲ್ಲದಿರುವುದು ವಿಶೇಷ!

ನ್ಯಾಯಾಂಗವನ್ನು ದೂರಿ ಪತ್ರಿಕಾಗೋಷ್ಠಿ ಕರೆದಿದ್ದ ನಾಲ್ವರು ಜಡ್ಜ್ ಗಳಿಗೆ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಈ ಮೂಲಕ ಸೆಡ್ಡುಹೊಡೆದಿದ್ದಾರೆ!

ಸುಪ್ರೀಂ ನ್ಯಾಯಮೂರ್ತಿಗಳು ಬರೆದಿರುವ ಪತ್ರದಲ್ಲಿ ಏನಿದೆ?ಸುಪ್ರೀಂ ನ್ಯಾಯಮೂರ್ತಿಗಳು ಬರೆದಿರುವ ಪತ್ರದಲ್ಲಿ ಏನಿದೆ?

ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಈ ಐದು ಸದಸ್ಯರ ಪೀಠದಲ್ಲಿ, ನ್ಯಾ.ಎ.ಕೆ.ಸಿಕ್ರಿ, ನ್ಯಾ.ಎ.ಎಂ.ಖಾನ್ವಿಲ್ಕರ್, ನ್ಯಾ.ಡಿ.ವೈ.ಚಂದ್ರಚೂಡ, ನ್ಯಾ.ಅಶೋಕ್ ಭೂಷಣ್ ರಂಥ ಹಿರಿಯ ನ್ಯಾಯಮೂರ್ತಿಗಳಿದ್ದು, ಜ.17 ರಿಂದ ಈ ಪೀಠ, ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಲಿದೆ.

CJI sets new 5-Judge constitution bench, sans 4 SC judges

ಜ.12 ರಂದು ಪತ್ರಿಕಾ ಗೋಷ್ಠಿ ಕರೆದಿದ್ದ ‌ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಮೂರ್ತಿಗಳಾದ ಚೆಲಮೇಶ್ವರ್, ರಂಜನ್ ಗೊಗಾಯ್, ಮದನ್ ಲೋಕೂರ್, ಕುರಿಯನ್ ಜೋಸೆಫ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕತೆಯಿಲ್ಲ ಎಂದು ದೂರಿದ್ದರು. ತಮಗೆ ದೀಪಕ್ ಮಿಶ್ರಾ ಅವರ ಬಗೆಗಿದ್ದ ಮುನಿಸನ್ನು ಪರೋಕ್ಷವಾಗಿ ಹೊರಹಾಕಿದ್ದರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ಕರೆದಿದ್ದು ಏಕೆ? ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ಕರೆದಿದ್ದು ಏಕೆ?

ಆದರೆ ಇವರ ನಡೆಯನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿಸಿಐ) ವಿರೋಧಿಸಿತ್ತು. ಕೊನೆಗೆ ಜ.15 ರಂದು ಸಂಧಾನ ಸಭೆ ನಡೆಸುವ ಮೂಲಕ ಈ ವಿವಾದವನ್ನು ಇತ್ಯರ್ಥಗೊಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ಕರೆದಿದ್ದು ಏಕೆ? ಗ ನಿರ್ಮಿಸಲಾದ ಸಾಂವಿಧಾನಿಕ ಪೀಠದಲ್ಲಿ ಈ ನಾಲ್ವರಲ್ಲಿ ಯಾರೊಬ್ಬರ ಹೆಸರೂ ಇಲ್ಲದಿರುವುದು ಹಿರಿಯ ನ್ಯಾಯಮೂರ್ತಿಗಳ ನಡುವಲ್ಲಿ ಅಸಮಾಧಾನದ ಹೊಗೆ ಇನ್ನೂ ಆರಿಲ್ಲ ಎಂಬುದಕ್ಕೆ ಪುಷ್ಟಿ ನೀಡಿದೆ.

English summary
In another turn of events, Chief Justice of India (CJI) Dipak Misra has set up a five-judge constitution bench under him to hear several major cases, however, the bench doesn't comprise the four senior judges of the top court, who had held a press conference.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X