ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಜತೆ ಸಭೆ ನಡೆಸಿದ ದೀಪಕ್ ಮಿಶ್ರಾ

By Sachhidananda Acharya
|
Google Oneindia Kannada News

ನವದೆಹಲಿ, ಜನವರಿ 18: ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಜತೆ ಸಭೆ ನಡೆಸಿದರು. ಜನವರಿ 12ರಂದು ಪತ್ರಿಕಾಗೋಷ್ಠಿಯಲ್ಲಿ ನಾಲ್ವರು ನ್ಯಾಯಮೂರ್ತಿಗಳು ಮಿಶ್ರಾ ವಿರುದ್ಧ ಅಸಮಧಾನ ಹೊರಹಾಕಿದ್ದರು. ಈ ಸಂಬಂಧ ಉಂಟಾಗಿರುವ ಗೊಂದಲ ನಿವಾರಣೆಗೆ ಈ ಸಭೆ ನಡೆಸಿದರು.

ಬೆಳಿಗ್ಗೆ 10.30ಕ್ಕೆ ಕೋರ್ಟ್ ಕಲಾಪ ಆರಂಭವಾಗುವುದಕ್ಕೆ ಮೊದಲು ನ್ಯಾ. ಜೆ. ಚೆಲಮೇಶ್ವರ್, ರಂಜನ್ ಗೊಗೋಯಿ, ಮದನ್ ಬಿ ಲೋಕೂರ್ ಮತ್ತು ಕುರಿಯನ್ ಜೋಸೆಫ್ ರನ್ನು ದೀಪಕ್ ಮಿಶ್ರಾ ಭೇಟಿಯಾದರು.

ಬಂಡಾಯವೆದ್ದಿದ್ದ ಜಡ್ಜ್ ಗಳಿಗೆ ಸೆಡ್ಡು ಹೊಡೆದ ದೀಪಕ್ ಮಿಶ್ರಾ!ಬಂಡಾಯವೆದ್ದಿದ್ದ ಜಡ್ಜ್ ಗಳಿಗೆ ಸೆಡ್ಡು ಹೊಡೆದ ದೀಪಕ್ ಮಿಶ್ರಾ!

ಸುಮಾರು 10-15 ನಿಮಿಷಗಳ ಅಲ್ಪ ಅವಧಿಯಲ್ಲಿ ಭೇಟಿ ಅಂತ್ಯವಾಯಿತು ಎಂದು ನ್ಯಾಯಾಲಯದ ಮೂಲಗಳು ಹೇಳಿವೆ. ಭೇಟಿ ವೇಳೆ ಬೇರೆ ಯಾವ ನ್ಯಾಯಾಧೀಶರೂ ಉಪಸ್ಥಿತರಿರಲಿಲ್ಲ ಎಂದು ತಿಳಿದು ಬಂದಿದೆ.

 CJI meets four senior-most SC judges

ಬುಧವಾರವೇ ಈ ಭೇಟಿ ನಡೆಯಬೇಕಾಗಿತ್ತು. ಆದರೆ ಜೆ.ಚೆಲಮೇಶ್ವರ್ ಗುರುವಾರ ಗೈರು ಹಾಜರಾಗಿದ್ದರಿಂದ ಗುರುವಾರ ಬೆಳಗ್ಗೆ ಭೇಟಿ ನಡೆಯಿತು.

ಜನವರಿ 12ರಂದು ನಡೆದಿದ್ದ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ ನ್ಯಾಯಾಧೀಶರು ಪ್ರಕರಣಗಳನ್ನು ಬೆಂಚುಗಳಿಗೆ ವರ್ಗಾವಣೆ ಮಾಡುವ ಸಂಬಂಧ ಅಸಮಧಾನ ವ್ಯಕ್ತಪಡಿಸಿದ್ದರು ಮತ್ತು ಕೆಲವು ಪ್ರಕರಣಗಳು ದೇಶದ ಸರ್ವೋಚ್ಛ ನ್ಯಾಯಾಲಯದ ಘನತೆಗೆ ಧಕ್ಕೆ ತರುತ್ತಿವೆ ಎಂದು ಹೇಳಿದ್ದರು.

English summary
Chief Justice of India Dipak Misra today held a meeting with four senior-most Supreme Court judges to resolve issues raised by them during a press conference on January 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X