ಕಂಗನಾಗೆ ಕಪಾಳಮೋಕ್ಷ ಮಾಡಿದ ಮಹಿಳಾ ಕಾನ್‌ಸ್ಟೆಬಲ್ ಬೆಂಗಳೂರಿಗೆ ವರ್ಗಾವಣೆ
ಮಂಡಿ ಲೋಕಸಭಾ ಸಂಸದೆ ಹಾಗೂ ನಟಿ ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿದ ಮಹಿಳಾ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರನ್ನು ವರ್ಗಾವಣೆ ಬೆಂಗಳೂರಿಗೆ ಮಾಡಲಾಗಿದೆ.
ಜೂನ್ 6 ರಂದು ಚಂಡೀಗಢದ ಶಹೀದ್ ಭಗತ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಗನಾ ರನೌತ್ ಅವರಿಗೆ ಕಪಾಳಮೋಕ್ಷ ಘಟನೆಯ ನಂತರ ಸಿಐಎಸ್ಎಫ್ ಕುಲ್ವಿಂದರ್ ಕೌರ್ ಅವರನ್ನು ಅಮಾನತುಗೊಳಿಸಿತ್ತು. ಮತ್ತು ಅವರ ವಿರುದ್ಧ ಆಂತರಿಕ ವಿಚಾರಣೆಯನ್ನು ಪ್ರಾರಂಭಿಸಿತು. ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಅವರ ವಿರುದ್ಧ ತನಿಖಾ ಸಮಿತಿಯನ್ನೂ ರಚಿಸಲಾಗಿತ್ತು.

ಈ ಘಟನೆಯ ನಂತರ ಕುಲ್ವಿಂದರ್ ಕೌರ್ ವಿರುದ್ಧ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣವೂ ದಾಖಲಾಗಿತ್ತು. ಪೊಲೀಸರು ಐಪಿಸಿ ಸೆಕ್ಷನ್ 323 (ಹಲ್ಲೆ) ಮತ್ತು 341 (ರಸ್ತೆ ತಡೆ) ಅಡಿಯಲ್ಲಿ ಈ ಕ್ರಮ ಕೈಗೊಂಡಿದ್ದರು, ಆದರೆ ಇದನ್ನು ರೈತ ಸಂಘಟನೆಗಳು ವಿರೋಧಿಸಿದ್ದವು.
ಆಗಿದ್ದೇನು?
ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಳಿಕ ಕಂಗನಾ ರನೌತ್ ಜೂನ್ 6ರಂದು ಚಂಡೀಗಢ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿದ್ದರು. ಇದೇ ವೇಳೆ ಭದ್ರತಾ ತಪಾಸಣೆಯ ವೇಳೆ ಮಹಿಳಾ ಪದೇಯೊಂದಿಗೆ ಸಂಸದೆಯ ವಾಗ್ವಾದ ನಡೆಯಿತು. ಅಲ್ಲದೆ. ಸಿಐಎಸ್‌ಎಫ್ ಮಹಿಳಾ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದರು.
ರೈತರ ಚಳುವಳಿಯಲ್ಲಿ ಭಾಗವಹಿಸಿದವರು 100 ರೂಪಾಯಿ ಪಡೆದು ಭಾಗವಹಿಸಿದ್ದಾರೆ ಎಂದು ಕಂಗನಾ ತಿಳಿಸಿದ್ದರು. ಇವರು ಹೇಳಿಕೆ ನೀಡಿದ್ದ ರೈತ ಪ್ರತಿಭಟನೆಯಲ್ಲಿ ಕುಲ್ವಿಂದರ್ ಕೌರ್ ತಾಯಿ ಸಹ ಇದ್ದಳು ಎಂದು ಹೇಳುತ್ತಿರುವ ಮಹಿಳಾ ಕಾನ್‌ಸ್ಟೆಬಲ್‌ನ ವೀಡಿಯೊ ವೈರಲ್ ಆಗಿತ್ತು.
ಆ ವೈರಲ್ ಪೋಸ್ಟ್
ನವದೆಹಲಿಯಲ್ಲಿ ನವೆಂಬರ್ 27, 2020 ರಂದು ರೈತ ಚಳವಳಿ ನಡೆದಿತ್ತು. ಈ ಸಂದರ್ಭದಲ್ಲಿ ಕಂಗನಾ ಸಾಮಾಜಿಕ ತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದರು. ಆ ಪೋಸ್ಟ್ ಭಾರೀ ವೈರಲ್ ಆಗಿತ್ತು. ಇದರ ಜೊತೆಗೆ ಅವರು ಒಂದು ಫೋಟೋ ಸಹ ಹಾಕಿಕೊಂಡಿದ್ದರು. ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ ಈ ಮಹಿಳೆ 100 ರೂ.ಗೆ ಲಭ್ಯವಿರುವ ಶಾಹೀನ್ ಬಾಗ್ ಪ್ರತಿಭಟನೆಯಲ್ಲಿದ್ದ ಅದೇ ಪ್ರಸಿದ್ಧ ಬಿಲ್ಕಿಸ್ ದಾದಿ ಎಂದು ಬರೆದಿದ್ದಾರೆ.
ಪಂಜಾಬ್‌ನ ಮಾನ್ಸಾದ ರೈತ ಮೊಹಿಂದರ್ ಕೌರ್ ಎಂಬಾಕೆ ಕಂಗನಾ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಬಿಲ್ಕಿಸ್ ಬಾನೊ ಮತ್ತು ಮೊಹಿಂದರ್ ಕೌರ್ ಅವರನ್ನು ಗುರುತಿಸುವಲ್ಲಿ ಕಂಗನಾ ತಪ್ಪು ಮಾಡಿದ್ದಾರೆ. ಬಳಿಕ ಕಂಗನಾ ತನ್ನ ಪೋಸ್ಟ್ ಡಿಲೀಟ್ ಮಾಡಿದ್ದರು. ಇದಾದ ಬಳಿಕ ರೈತ ಮೊಹಿಂದರ್ ಕೌರ್ ಕೂಡ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಕುಲ್ವಿಂದರ್ ಕೌರ್ ಯಾರು?
ಮಂಡಿ ಸಂಸದೆ ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿದ ಸಿಐಎಸ್ಎಫ್ ಕುಲ್ವಿಂದರ್ ಕೌರ್ ಪಂಜಾಬ್‌ನ ಕಪುರ್ತಲಾ ನಿವಾಸಿ. ಕುಲ್ವಿಂದರ್ ಕೌರ್ 6 ವರ್ಷಗಳ ಹಿಂದೆ ಜಮ್ಮುವಿನಲ್ಲಿ ವಿವಾಹವಾಗಿದ್ದರು. ಅವರ ಪತಿಯೂ ಸಿಐಎಸ್‌ಎಫ್‌ನಲ್ಲಿದ್ದಾರೆ. ಇವರು ಚಂಡೀಗಢದಲ್ಲಿ ಎರಡೂವರೆ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು.












Click it and Unblock the Notifications