ಯೋಧರಿಗೆ ಏರ್ ಪೋರ್ಟ್ ಗಳಲ್ಲಿನ ಶೌಚಾಲಯ ಉಪಯೋಗ ನಿರ್ಬಂಧ!

Posted By:
Subscribe to Oneindia Kannada

ನವದೆಹಲಿ, ಮೇ 20: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ತನ್ನಲ್ಲಿನ ಯೋಧರಿಗೆ ಏರ್ ಪೋರ್ಟ್ ಗಳ ಪ್ರಮುಖ ಭದ್ರತಾ ವಲಯಗಳಲ್ಲಿರುವ ಶೌಚಾಲಯಗಳನ್ನು ಉಪಯೋಗಿಸದಂತೆ ಕಟ್ಟುನಿಟ್ಟಾದ ಆದೇಶ ಹೊರಡಿಸಿದೆ.

ಇದಲ್ಲದೆ, ಏರ್ ಪೋರ್ಟ್ ಗಳ ಪ್ರಮುಖ ಭದ್ರತಾ ವಲಯಗಳಲ್ಲಿ ಸೈನಿಕರು ಇನ್ನು ಮೊಬೈಲ್ ಫೋನ್ ಗಳನ್ನು ಉಪಯೋಗಿಸುವುದಕ್ಕೂ ನಿರ್ಬಂಧ ವಿಧಿಸಿದೆ.

CISF bans its jawans to use toilet in airports

ಅಷ್ಟೇ ಅಲ್ಲದೆ, ಭದ್ರತಾ ವಲಯಗಳಲ್ಲಿ ಸೇವೆ ಸಲ್ಲಿಸುವ ಸೈನಿಕರು ಕಡ್ಡಾಯವಾಗಿ ಸಮವಸ್ತ್ರಗಳನ್ನು ಧರಿಸಿಯೇ ಕರ್ತವ್ಯಕ್ಕೆ ಹಾಜರಾಗಬೇಕೆಂದು ಆದೇಶಿಸಲಾಗಿದೆ.

ಸಿಐಎಸ್ಎಫ್ ನಲ್ಲಿ ಸೇವೆ ಸಲ್ಲಿಸುವ ಕೆಲ ಯೋಧರು ಚಿನ್ನ ಹಾಗೂ ಮಾದಕ ವಸ್ತುಗಳ ಕಳ್ಳ ಸಾಗಣೆಗಾರರಿಗೆ ಸಹಾಯ ಮಾಡುತ್ತಿದ್ದಾರೆಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Central Industrial Security Force (CISF) has ordered its soldiers not to use toilets of core security area of airports, in the backdrop of allegations as some of them involved in gold and drugs smuggling.
Please Wait while comments are loading...