ಅಮಿತ್ ಶಾ ಭದ್ರತೆಯ ವೆಚ್ಚದ ವಿವರ ಬಹಿರಂಗಕ್ಕೆ ಸಿಐಸಿ ನಕಾರ
ನವದೆಹಲಿ, ಆಗಸ್ಟ್ 27: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ನೀಡಿರುವ ಭದ್ರತೆಯ ವೆಚ್ಚವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ತಿಳಿಸಿದೆ.
ಖಾಸಗಿ ಮಾಹಿತಿ ಹಾಗೂ ಸುರಕ್ಷತೆಯ ಕಾರಣಗಳಿಂದ ಈ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸಿಐಸಿ ಹೇಳಿದೆ.
ಖಾಸಗಿ ವ್ಯಕ್ತಿ ಮತ್ತು ಅಧಿಕಾರಿಗಳಿಗೆ ಭದ್ರತಾ ಸೌಲಭ್ಯವನ್ನು ಒದಗಿಸುವ ಆಡಳಿತ ನಿಯಮಗಳ ಕುರಿತು ಸಹ ವಿವರ ನೀಡಲಾಗದು ಎಂದು ಸಹ ಅರ್ಜಿದಾರರಿಗೆ ಅದು ತಿಳಿಸಿದೆ.

ಅಮಿತ್ ಶಾ ಅವರು ರಾಜ್ಯಸಭೆಯ ಸದಸ್ಯರಾಗುವ ಮೊದಲು, 2014ರ ಜುಲೈ 5ರಂದು ಅರ್ಜಿ ಸಲ್ಲಿಸಿದ್ದ ಆರ್‌ಟಿಐ ಕಾರ್ಯಕರ್ತ ದೀಪಕ್ ಜುನೇಜಾ, ಸರ್ಕಾರದಿಂದ ಭದ್ರತೆ ಪಡೆದುಕೊಂಡಿರುವ ಜನರ ಪಟ್ಟಿಯನ್ನು ನೀಡುವಂತೆಯೂ ಕೋರಿದ್ದರು.
ಯಾವುದೇ ವ್ಯಕ್ತಿಯ ಜೀವ ಅಥವಾ ದೈಹಿಕ ಸುರಕ್ಷತೆಗೆ ಧಕ್ಕೆ ಉಂಟುಮಾಡುವ ಮಾಹಿತಿಯನ್ನು ಹೊರತಾಗಿಸುವ ಸೆಕ್ಷನ್ 8 (1) (g) ಅಡಿಯಲ್ಲಿ ಒದಗಿಸಲು ಸಾಧ್ಯವಿಲ್ಲ ಎಂದು ಗೃಹಸಚಿವಾಲಯ ಅರ್ಜಿಯನ್ನು ತಿರಸ್ಕರಿಸಿತ್ತು.
ಆರ್‌ಟಿಐ ಕಾಯ್ದೆಯ ಸೆಕ್ಷನ್ 8 (1) jಅನ್ನೂ ಉಲ್ಲೇಖಿಸಿದ್ದ ಸಚಿವಾಲಯ, ಖಾಸಗಿತನಕ್ಕೆ ಭಂಗತರುವಂತಹ ಮಾಹಿತಿ ಮತ್ತು ಸಾರ್ವಜನಿಕ ಚಟುವಟಿಕೆಗೆ ಸಂಬಂಧವಿರದ ಮಾಹಿತಿಗಳನ್ನು ನೀಡಲಾಗದು ಎಂದಿತ್ತು. ಇದನ್ನು ಎತ್ತಿಹಿಡಿದಿದ್ದ ಸಿಐಸಿ, ಸಂಸತ್‌ನಲ್ಲಿ ಇದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಸಿಐಸಿ ಆದೇಶವನ್ನು ಜುನೇಜಾ ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅರ್ಜಿದಾರರು ಬಯಸಿದ ಮಾಹಿತಿಯು ಸೆಕ್ಷನ್ 8(1) g ಮತ್ತು j ಅಡಿಯಿಂದ ಹೊರತಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮತ್ತೆ ಪರಿಶೀಲಿಸುವಂತೆ ಸಿಐಸಿಗೆ ಕೋರ್ಟ್ ಸೂಚಿಸಿತ್ತು.
ಗೃಹಸಚಿವಾಲಯ ಮತ್ತು ಜುನೇಜಾ ಅವರ ಹೇಳಿಕೆಗಳನ್ನು ಮತ್ತೆ ಪರಿಶೀಲನೆಗೆ ಒಳಪಡಿಸಿದ ಸಿಐಸಿಯ ಆಯುಕ್ತ ಯಶೋವರ್ಧನ್ ಆಜಾದ್, ಜೀವಬೆದರಿಕೆಗೆ ಒಳಗಾಗಿರುವ ವ್ಯಕ್ತಿಯ ಭದ್ರತೆಯ ವಿವರಗಳನ್ನು ನೀಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
-
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್












Click it and Unblock the Notifications