ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಚೌಕೀದಾರ್ ಕಳ್ಳ ಕಳ್ಳ ಕಳ್ಳ ಎಂದು ಕೂಗಿದ ರಾಹುಲ್ ಗಾಂಧಿ

|
Google Oneindia Kannada News

ನಿಮ್ಮ ಭೂಮಿಯನ್ನು ಕೇಳಿ, ಒಪ್ಪಿಗೆ ಪಡೆದೇ ತೆಗೆದುಕೊಳ್ಳುತ್ತೇವೆ. ನಿಮ್ಮ ಭೂಮಿಯ ಬೆಲೆಯ ನಾಲ್ಕು ಪಟ್ಟು ಪರಿಹಾರ ನೀಡುತ್ತೇವೆ. ಇಲ್ಲಿ ನಾವು ಅಧಿಕಾರಕ್ಕೆ ಬಂದರೆ ಮಧ್ಯಪ್ರದೇಶದ ಜನರ ಸರಕಾರ ತರುತ್ತೇವೆ. ಮನ್ ಕೀ ಬಾತ್ ಅಂತ ಎಷ್ಟು ದಿನ ಕೇಳೋಣ. ನಾವು ನಿಮ್ಮ ಮನ್ ಕೀ ಬಾತ್ ಕೇಳ್ತೀವಿ ಎಂದು ಸೋಮವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಮಧ್ಯಪ್ರದೇಶದ ಧರ್ ನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಬೇರ್ಪಡಿಸುವ ಮಾತನಾಡುತ್ತಾರೆ. ನಾವು ಜೋಡಿಸುವ ಮಾತನಾಡುತ್ತೇವೆ. ಪ್ರಧಾನಿಗಳು ಹೇಳಿದ್ದರು, ಪ್ರತಿ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರುಪಾಯಿ ಹಾಕುವುದಾಗಿ ಹೇಳಿದ್ದರು. ಇಲ್ಲಿರುವ ಯಾರಿಗಾದರೂ ಬಂದಿದೆಯಾ, ಇಲ್ಲ ಎಂದು ಹೇಳಿದರು.

ಮಿಜೋರಾಂ ಅಂತ ನೂರು ಬಾರಿ ಬರೀರಿ... ರಾಹುಲ್ ಗೆ ಬಿಜೆಪಿ ಶಿಕ್ಷೆ!ಮಿಜೋರಾಂ ಅಂತ ನೂರು ಬಾರಿ ಬರೀರಿ... ರಾಹುಲ್ ಗೆ ಬಿಜೆಪಿ ಶಿಕ್ಷೆ!

ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಅಧ್ಯಕ್ಷರ ಹತ್ತಿರ ಹೋಗಿ ಹಿಂದೂಸ್ತಾನದಲ್ಲಿ ಯುದ್ಧ ವಿಮಾನ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಆದರೆ ಆರಂಭವಾಗಿ ಹತ್ತು-ಹದಿನೈದು ದಿನಕ್ಕೆ ಒಂದು ವಿಮಾನ ಕೂಡ ತಯಾರಿಸದ ಅನಿಲ್ ಅಂಬಾನಿ ಅವರ ರಿಲಯನ್ಸ್ ಡಿಫೆನ್ಸ್ ಕಂಪನಿಗೆ ಪಾಲುದಾರರನ್ನಾಗಿ ಮಾಡಿಕೊಳ್ಳುವಂತೆ ಶಿಫಾರಸು ಮಾಡುತ್ತಾರೆ ಎಂದರು.

ರಫೇಲ್ ತನಿಖೆ ನಡೆಯಬಾರದು ಎಂಬ ಭಯ

ರಫೇಲ್ ತನಿಖೆ ನಡೆಯಬಾರದು ಎಂಬ ಭಯ

ರಫೇಲ್ ಯುದ್ಧ ವಿಮಾನದ ಬಗ್ಗೆ ತನಿಖೆ ನಡೆಯಬಾರದೆಂದು ರಾತ್ರೋ ರಾತ್ರಿ ಸಿಬಿಐ ನಿರ್ದೇಶಕರನ್ನು ಬದಲಾಯಿಸುತ್ತಾರೆ. ಎಲ್ಲಿ ಅನಿಲ್ ಅಂಬಾನಿ ಹಾಗೂ ತಮ್ಮ ಬಗ್ಗೆ ಗೊತ್ತಾಗುತ್ತದೆ ಎಂಬ ಭಯ ಅವರಿಗೆ. ನರೇಂದ್ರ ಮೋದಿ ಅವರು ಈಗ ಮೆಹುಲ್ ಚೋಕ್ಸಿ, ವಿಜಯ್ ಮಲ್ಯ ಇಂಥವರಿಗೆ ಚೌಕೀದಾರ್ ಆಗಿದ್ದಾರೆ.

ಉದ್ಯಮಿಗಳ ರಕ್ಷಣೆಗೆ ನಿಂತ ಚೌಕೀದಾರ್

ಉದ್ಯಮಿಗಳ ರಕ್ಷಣೆಗೆ ನಿಂತ ಚೌಕೀದಾರ್

ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಭರವಸೆಗಳನ್ನು ನೀಡಿದ್ದರು. ಆದರೆ ಅವರು ಉದ್ಯಮಿಗಳ ರಕ್ಷಣೆಗೆ ನಿಂತರು. ಆದಿವಾಸಿಗಳು, ಜನ ಸಾಮಾನ್ಯರು, ನಿರುದ್ಯೋಗಿ ಯುವಕರಿಗೆ ಏನು ಮಾಡಿದರು? ಅತ್ಯಂತ ಬಡ ಜನ ಅನಾರೋಗ್ಯಕ್ಕೆ ಈಡಾಗುತ್ತಾರೆ. ತಮ್ಮ ಶ್ರಮದ ದುಡಿಮೆಯನ್ನು ಶ್ರೀಮಂತರಿಗೆ ನೀಡುತ್ತಾರೆ. ದೇಶದ ಚೌಕೀದಾರ್ ಕಳ್ಳ ಕಳ್ಳ ಕಳ್ಳ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾಕಾಳೇಶ್ವರ ಪೂಜೆಯ ನಂತರ ಮೋದಿ ಮೇಲೆ ರಾಹುಲ್ ವಾಗ್ದಾಳಿಮಹಾಕಾಳೇಶ್ವರ ಪೂಜೆಯ ನಂತರ ಮೋದಿ ಮೇಲೆ ರಾಹುಲ್ ವಾಗ್ದಾಳಿ

ಶ್ರೀಮಂತರ ಹಾಗೂ ಬಡವರ ಹಿಂದೂಸ್ತಾನ ಎಂಬುದು ಬೇಡ

ಶ್ರೀಮಂತರ ಹಾಗೂ ಬಡವರ ಹಿಂದೂಸ್ತಾನ ಎಂಬುದು ಬೇಡ

ನಮಗೆ ಶ್ರೀಮಂತರ ಹಿಂದೂಸ್ತಾನ ಹಾಗೂ ಬಡವರ ಹಿಂದೂಸ್ತಾನ ಎಂಬ ಎರಡೆರಡು ಬೇಡ. ನಮಗೆ ಒಂದೇ ಭಾರತ ಬೇಕು. "ಒಂದು ಕೇಜಿ ಆಲೂಗಡ್ಡೆ ಬೆಲೆ ಎಷ್ಟು? ಐದು ರುಪಾಯಿ. ಒಂದು ಪಾಕೆಟ್ ಆಲೂ ಚಿಪ್ಸ್ ಬೆಲೆ ಎಷ್ಟು? ಅದರಲ್ಲಿ ರೈತರಿಗೆ ಎಷ್ಟು ಹಣ ಸಿಗುತ್ತದೆ? ನಾವು ಅಧಿಕಾರಕ್ಕೆ ಬಂದರೆ ಆಹಾರ ಸಂಸ್ಕರಣಾ ಘಟಕಗಳನ್ನು ಆರಂಭಿಸುತ್ತೇವೆ" ಎಂದು ಹೇಳಿದರು.

'ರಾಹುಲ್ ಗಾಂಧಿ ಗೋತ್ರ ಯಾವುದು? ಅವರು ತೊಡುವ ಜನಿವಾರ ಯಾವುದು?''ರಾಹುಲ್ ಗಾಂಧಿ ಗೋತ್ರ ಯಾವುದು? ಅವರು ತೊಡುವ ಜನಿವಾರ ಯಾವುದು?'

Array

ಯುವಕರಿಗೆ ಉದ್ಯೋಗ, ರೈತರ ಹಿತರಕ್ಷಣೆಗೆ ಬದ್ಧ

ನೀವು ಬೆಳೆದ ಆಹಾರ ಪದಾರ್ಥಗಳನ್ನು ನೇರವಾಗಿ ಆ ಕಾರ್ಖಾನೆಗಳಲ್ಲಿ ಮಾರಬಹುದು. ನಿಮ್ಮ ಮಕ್ಕಳಿಗೆ ಅಲ್ಲಿ ಕೆಲಸ ಸಿಗುತ್ತದೆ. ನಿಮ್ಮ ಶ್ರಮದ ಫಲ ಹಣದ ರೂಪದಲ್ಲಿ ಇನ್ನೊಬ್ಬರ ಪಾಲಾಗುವುದನ್ನು ತಡೆಯುತ್ತೀವಿ. ಈ ರಾಜ್ಯಕ್ಕೆ ನೇಮಕ ಆಗುವ ಕಾಂಗ್ರೆಸ್ ಮುಖ್ಯಮಂತ್ರಿ, ಯುವ ಜನರಿಗೆ ಉದ್ಯೋಗ ಹಾಗೂ ರೈತರ ಹಿತರಕ್ಷಣೆ ಮಾಡಲು ಬದ್ಧರಾಗಿರುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದರು.

ಐಸ್ ಕ್ರೀಂ ತಿನ್ನುತ್ತೀಯಾ ಎಂದು ಸ್ವತಃ ತಿನ್ನಿಸಿದ ರಾಹುಲ್ ಗಾಂಧಿ ಐಸ್ ಕ್ರೀಂ ತಿನ್ನುತ್ತೀಯಾ ಎಂದು ಸ್ವತಃ ತಿನ್ನಿಸಿದ ರಾಹುಲ್ ಗಾಂಧಿ

English summary
Congress president Rahul Gandhi again mocked against PM Narendra Modi in a party public meeting in Madhya Pradesh Dhar on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X