ಚೀನಾ ವಿರುದ್ಧದ ಯುದ್ಧಕ್ಕೆ ತಯಾರಿ ಆರಂಭಿಸಿತೇ ಭಾರತ?

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಆಗಸ್ಟ್ 11: ಚೀನಾ ವಿರುದ್ಧ ಯುದ್ಧ ದ ಕಾರ್ಮೋಡ ಆವರಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ಭಾರತ-ಚೀನಾ ಗಡಿ ಭಾಗದಲ್ಲಿರುವ ತನ್ನ ಹಳ್ಳಿಗಳ ಜನತೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಆರಂಭಿಸಿದೆ ಎಂದು ಚೀನಾದ ಮಾಧ್ಯಮಗಳು ಹೇಳಿವೆ.

ಭಾರತ- ಚೀನಾ ಯುದ್ಧ? ದೋಕ್ಲಾಂ ಹತ್ತಿರದ ಹಳ್ಳಿಗರ ಸ್ಥಳಾಂತರ

ಚೀನಾದ 'ದ ಪೀಪಲ್ಸ್ ಡೈಲಿ ಚೀನಾ' ಎಂದ ಪತ್ರಿಕೆಯು ಈ ರೀತಿ ವರದಿ ಮಾಡಿದ್ದು, ಸಿಕ್ಕಿಂ ರಾಜ್ಯಕ್ಕೆ ಸೇರಿದ, ಇದೀಗ ಭಾರತ ಮತ್ತು ಚೀನಾದ ನಡುವಿನ ವಿರಸಕ್ಕೆ ಕಾರಣವಾಗಿರುವ ಡೊಕ್ಲಾಮ್ ಪ್ರಾಂತ್ಯಕ್ಕೆ ಸಮೀಪವಿರುವ 'ನಥಾಂಗ್' ಹಳ್ಳಿಯ ಜನರನ್ನು ಈಗಾಗಲೇ ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಅದು ತಿಳಿಸಿದೆ. ಈ ಪತ್ರಿಕೆಯ ಸುದ್ದಿಯನ್ನೇ ಮತ್ತೂ ಕೆಲವು ಪತ್ರಿಕೆಗಳು ಪುನರುಚ್ಛರಿಸಿವೆ.

Chinese media says India has started evacuating villagers near Doklam
Narendra Modi Gives a Big shock to China Governemnt | Oneindia Kannada

ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಭಾರತೀಯ ಸೇನೆಯು, ಚೀನಾ ಮಾಧ್ಯಮಗಳ ಈ ಹೇಳಿಕೆಗೆ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕೆಲವು ಸೇನಾಧಿಕಾರಿಗಳು ನಿರಾಕರಿಸಿದ್ದಾರೆ. ಇದು ಚೀನಾದ ಮಾಧ್ಯಮಗಳ ವರದಿಯನ್ನು ಪುಷ್ಟೀಕರಿಸಿದೆಯಲ್ಲದೆ, ಉಭಯ ದೇಶಗಳ ನಡುವಿನ ಯುದ್ಧದ ಭೀತಿ ಮತ್ತಷ್ಟು ಗಾಢವಾಗಿ ಆವರಿಸಿದೆಯೇ ಎಂಬ ಅನುಮಾನವನ್ನೂ ಹೆಚ್ಚಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The People's Daily China has said that the Indian Army has ordered the evacuation of a Sikkim village near Doklam. The Indian Army has however refused to comment on the report.
Please Wait while comments are loading...