India & China: ಭಾರತವನ್ನು ಹೊಗಳಿದ ಚೀನಾ, ಕಾರಣ ತಿಳಿಯಿರಿ!
ಬೀಜಿಂಗ್: ಭಾರತ ಮತ್ತು ಚೀನಾ ಬದ್ಧ ವೈರಿಗಳು ಅಂತಾ ಇಡೀ ಜಗತ್ತೇ ಮಾತನಾಡುತ್ತೆ. ಆದ್ರೆ ಏನೇ ಬಂದ್ರೂ ಭಾರತ & ಚೀನಾ ಅಕ್ಕಪಕ್ಕದ ದೇಶಗಳು. ಅದರಲ್ಲೂ ಮಾನವೀಯ ಮೌಲ್ಯಗಳ ವಿಚಾರ ಬಂದಾಗ ಭಾರತ ಯಾವ ಶತ್ರುತ್ವಕ್ಕೂ ಬೆಲೆ ಕೊಡುವುದಿಲ್ಲ. ಸ್ನೇಹ, ಸಂಬಂಧಕ್ಕೆ ಮಾತ್ರ ಬೆಲೆ. ಹೀಗೆ ಸಮುದ್ರ ಮಧ್ಯೆ ಸಂಕಷ್ಟದಲ್ಲಿ ಸಿಲುಕಿದ್ದ ಚೀನಾ ಪ್ರಜೆಗೆ ಭಾರತ ನೆರವಿನ ಹಸ್ತ ಚಾಚಿದ್ದು, ಹೀಗಾಗಿ ಭಾರತವನ್ನು ಚೀನಾ ಹಾಡಿ ಹೊಗಳಿದಿದೆ.
ಅಷ್ಟಕ್ಕೂ ಕೆಲ ದಿನಗಳ ಹಿಂದೆ ಮುಂಬೈನಿಂದ 200 ಕಿಲೋ ಮೀಟರ್ ದೂರದಲ್ಲಿ ಅರಬ್ಬಿ ಸಮುದ್ರದಲ್ಲಿದ್ದ ಹಡಗಿನಲ್ಲಿದ್ದ ವ್ಯಕ್ತಿಗೆ ಹೃದಯಾಘಾತ ಆಗಿತ್ತು. ಹೀಗಾಗಿ ಆತನ ರಕ್ಷಣೆಗೆ ಭಾರತೀಯ ಕಾವಲು ಪಡೆ ತೆರಳಿತ್ತು. ಹೀಗೆ ಆರೋಗ್ಯ ಸಮಸ್ಯೆಯಿಂದ ನರಳುತ್ತಿದ್ದ ವ್ಯಕ್ತಿ ಚೀನಾ ಮೂಲದ ಪ್ರಜೆಯಾಗಿದ್ರು. ತಕ್ಷಣ ಭಾರತೀಯ ಕರಾವಳಿ ಕಾವಲು ಪಡೆ ಸೂಕ್ತವಾಗಿ ಸ್ಪಂದಿಸಿ ತುರ್ತು ವೈದ್ಯಕೀಯ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿತ್ತು. ಆಗಸ್ಟ್ 16 ಹಾಗೂ 17ರ ನಡುವೆ ಮಧ್ಯರಾತ್ರಿ ವೇಳೆ ಈ ರಕ್ಷಣಾ ಕಾರ್ಯಾಚರಣೆಯನ್ನ ನಡೆಸಲಾಗಿತ್ತು. ಘಟನೆ ಬಗ್ಗೆ ಚೀನಾದ ಕಡೆಯಿಂದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾರತವನ್ನು ಹಾಡಿ ಹೊಗಳಿದೆ.

ಚೀನಾ ಪ್ರಜೆಯ ಆರೋಗ್ಯಕ್ಕೆ ಏನಾಗಿತ್ತು?
ಒಂದು ದೇಶದ ಪ್ರಜೆ ಸಂಕಷ್ಟಕ್ಕೆ ಸಿಲುಕಿದಾಗ ಮತ್ತೊಂದು ದೇಶ ಸಹಾಯ ಮಾಡುವುದು ಅಪರೂಪ. ಅದ್ರಲ್ಲೂ ಪರಸ್ಪರ ಶತ್ರುತ್ವ ಇರುವ ರಾಷ್ಟ್ರಗಳು ಸಹಾಯ ಎಂಬ ಪದವನ್ನೇ ಬಳಸಲ್ಲ. ಪರಿಸ್ಥಿತಿ ಹೀಗಿದ್ದಾಗಲೂ ಭಾರತ ಮಾತ್ರ ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಚೀನಾ ಪ್ರಜೆಯನ್ನ ರಕ್ಷಿಸಿತ್ತು. ಚೀನಾದಿಂದ ಯುಎಇಗೆ ತೆರಳುತ್ತಿದ್ದ ಹಡಗಿನಲ್ಲಿದ್ದ ಚೀನಾದ ಪ್ರಜೆ ಯಿನ್ ವೆಗ್ಯಾಂಗ್‌ಗೆ ಹೃದಯಾಘಾತವಾಗಿತ್ತು. ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಪ್ರತಿಕೂಲ ವಾತಾವರಣ ಇದ್ದರೂ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಒಬ್ಬ ಜೀವ ಉಳಿಸುವ ಅಮೂಲ್ಯ ಕೆಲಸದಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಯಶಸ್ವಿಯಾಗಿತ್ತು.
ಪರಿಸ್ಥಿತಿ ವ್ಯತಿರಿಕ್ತವಾಗಿದ್ದರೂ ಚೀನಾ ಪ್ರಜೆಯನ್ನ ರಕ್ಷಣೆ ಮಾಡಲು ಎಂಕೆ-III ವಿಮಾನ ಬಳಸಲಾಗಿತ್ತು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಚೀನಾ ಪ್ರಜೆಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಹಾಗೇ ಆ ವ್ಯಕ್ತಿ ಸ್ವಲ್ಪ ಚೇತರಿಸಿಕೊಂಡ ನಂತರ ಹೆಚ್ಚಿನ ಚಿಕಿತ್ಸೆಗೆ ಹಡಗಿನ ಮೇಲ್ವಿಚಾರಕರಿಗೆ ಒಪ್ಪಿಸಲಾಗಿತ್ತು. ಘಟನೆ ಬಳಿಕ ಇಡೀ ಜಗತ್ತಿಗೇ ಮಾಹಿತಿ ಕಾಡ್ಗಿಚ್ಚಿನಂತೆ ಹರಡಿತ್ತು. ಅಲ್ಲದೆ ಭಾರತದ ಕಾರ್ಯಕ್ಕೆ ವಿವಿಧ ದೇಶಗಳು ಶ್ಲಾಘನೆ ವ್ಯಕ್ತಪಡಿಸಿವೆ. ಈಗ ಚೀನಾ ಕೂಡ ತಮ್ಮ ದೇಶದ ಪ್ರಜೆಯ ರಕ್ಷಣೆ ಮಾಡಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸಿದೆ.

ಭಾರತ-ಚೀನಾ ಗಡಿಯಲ್ಲಿ ನಿಲ್ಲದ ಕಿತ್ತಾಟ
ಹಲವು ವರ್ಷಗಳಿಂದ ಭಾರತ ಮತ್ತು ಚೀನಾ ಮಧ್ಯೆ ಗಡಿ ಕಿರಿಕ್ ಇದೆ. ಆದರೆ ಕಳೆದ ಕೆಲ ವರ್ಷದಿಂದ ಈ ಕಿರಿಕ್ ಮತ್ತಷ್ಟು ಜೋರಾಗಿದೆ. ಸಮಸ್ಯೆ ಬಗೆಹರಿಲು ಸಂಧಾನ ಸಭೆಗಳನ್ನ ನಡೆಸುತ್ತಿದ್ದರೂ ಅಂದುಕೊಂಡ ಮಟ್ಟಿಗೆ ಪ್ರಯೋಜನಕ್ಕೆ ಬಂದಿಲ್ಲ. ಇದೇ ಪರಿಸ್ಥಿತಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಚೀನಾ ಪ್ರಜೆಗೆ ಸಂಕಷ್ಟ ಎದುರಾದಾಗ ಭಾರತ ಪಡೆಗಳು ಆ ವ್ಯಕ್ತಿಯನ್ನ ರಕ್ಷಿಸಿ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಈ ಮೂಲಕ ಭಾರತ ಮತ್ತು ಚೀನಾ ಸಂಬಂಧಕ್ಕೆ ಹೊಸ ರೂಪ ನೀಡಿದ್ದಾರೆ. ಚೀನಾ ಕೂಡ ಘಟನೆ ಬಗ್ಗೆ ಹಮ್ಮೆ ವ್ಯಕ್ತಪಡಿಸಿ, ಭಾರತದ ಕಾರ್ಯವನ್ನು ಶ್ಲಾಘಿಸಿರುವುದು ವಿಶೇಷ.
ಒಟ್ನಲ್ಲಿ ಭಾರತ ಮತ್ತು ಚೀನಾ ನಡುವೆ ಎಲ್ಲವೂ ಶಾಂತವಾಗಲಿ ಎಂಬ ಆಸೆ ಏಷ್ಯಾದಲ್ಲಿ ಮನೆಮಾಡಿದೆ. ಅದರಲ್ಲೂ ರಷ್ಯಾ ಅಧ್ಯಕ್ಷ ಪುಟಿನ್ ಚೀನಾ & ಭಾರತದ ಹೊಂದಾಣಿಕೆಗೆ ಪದೇ ಪದೆ ಸಲಹೆ ನೀಡುತ್ತಿದ್ದಾರೆ. ಅಲ್ಲದೆ ಎರಡೂ ದೇಶಗಳು ಕೂತು ಮಾತನಾಡಿ ಗಡಿ ಸಮಸ್ಯೆ ವಿಚಾರಗಳನ್ನ ಸರಿ ಮಾಡಿಕೊಳ್ಳಲಿ ಎಂದಿದ್ದಾರೆ. ಆದರೆ ಪರಿಸ್ಥಿತಿ ಈಗಲಾದರೂ ಸರಿ ಹೋಗುತ್ತಾ? ಇಲ್ಲ ಅದೇ ರೀತಿ ಮುಂದುವರಿಯುತ್ತಾ? ಕಾದು ನೋಡಬೇಕಿದೆ.












Click it and Unblock the Notifications