ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖ್ ಗಡಿಯಲ್ಲಿ 5ಜಿ ನೆಟ್ವರ್ಕ್ ಸ್ಥಾಪಿಸುತ್ತಿರುವ ಚೀನಾ

|
Google Oneindia Kannada News

ನವದೆಹಲಿ, ಆಗಸ್ಟ್ 28: ಗಡಿ ವಿವಾದ ಮತ್ತು ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತ-ಚೀನಾ ನಡುವೆ ಪರಿಹಾರ ಕಂಡುಕೊಳ್ಳುವ ಮಾತುಕತೆ ನಡೆಸುವ ಪ್ರಕ್ರಿಯೆಯ ಮಧ್ಯೆಯೇ ಚೀನಾವು ಲಡಾಖ್ ಪ್ರದೇಶದಲ್ಲಿ ತನ್ನ ಮೂಲಸೌಕರ್ಯ ನಿರ್ಮಾಣ ಚಟುವಟಿಕೆಗಳನ್ನು ಚುರುಕುಗೊಳಿಸಿದೆ. ಡೆಮ್ಚೊಕ್ ಸಮೀಪ 5ಜಿ ನೆಟ್‌ವರ್ಕ್ ಸ್ಥಾಪನೆ ಹಾಗೂ ಪಾಂಗೊಂಗ್ ಸರೋವರದಲ್ಲಿ ಹೊಸ ನಿರ್ಮಾಣ ಕಾರ್ಯಗಳನ್ನು ನಡೆಸಿದೆ.

ವಾಸ್ತವ ಗಡಿ ರೇಖೆಯ ಉದ್ದಕ್ಕೂ ಚೀನಾ 5ಜಿ ನೆಟ್‌ವರ್ಕ್‌ಗಳನ್ನು ಸ್ಥಾಪನೆ ಮಾಡುವ ಮೂಲಕ ಸಂವಹನ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಕೆಲಸ ಮಾಡುತ್ತಿರುವುದು ಮತ್ತು ಡೆಮ್ಚೊಕ್ ಪ್ರದೇಶದಲ್ಲಿ ನಿರ್ಮಾಣ ಕಾರ್ಯಗಳಿಗೆ ಸಿದ್ಧತೆ ನಡೆಸುತ್ತಿರುವುದು ಆಗಸ್ಟ್ ಮೊದಲ ವಾರದಿಂದ ಕಂಡುಬಂದಿದೆ ಎಂದು ಗುಪ್ತಚರ ವರದಿಗಳು ತಿಳಿಸಿವೆ.

 ಯುಎಸ್ ಸ್ಪೈ ವಿಮಾನದ ವಿರುದ್ಧ ಕ್ಷಿಪಣಿ ಹಾರಿಸಿದ ಚೀನಾ ಯುಎಸ್ ಸ್ಪೈ ವಿಮಾನದ ವಿರುದ್ಧ ಕ್ಷಿಪಣಿ ಹಾರಿಸಿದ ಚೀನಾ

ಪಾಂಗೊಂಗ್ ಸರೋವರದಲ್ಲಿ ಚೀನೀ ಪಡೆಗಳು ತಮ್ಮ ಹಿಡಿತ ಬಲಪಡಿಸಿಕೊಳ್ಳಲು ನಿರ್ಮಾಣ ಕಾರ್ಯ ನಡೆಸುತ್ತಿವೆ. ಗಡಿಯಿಂದ ಎರಡೂ ದೇಶಗಳ ಪಡೆಗಳು ಹಿಂದಕ್ಕೆ ಸರಿಯುವುದರ ಮಾತುಕತೆಯ ನಡುವೆಯೇ ಹೊಸ ಗುಡಿಸಲುಗಳು ಮತ್ತು ಶೆಡ್‌ಗಳನ್ನು ನಿರ್ಮಿಸಲಾಗುತ್ತಿದೆ.

China Setting Up 5G Network At Ladakh Border

ಎಲ್‌ಎಸಿಯ ಉದ್ದಕ್ಕೂ ಚೀನೀ ಪಡೆಗಳು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇವೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡ ಲಡಾಖ್‌ನಲ್ಲಿ ಸೇನೆಯ ಜಮಾವಣೆಯನ್ನು ಹೆಚ್ಚಿಸಿದೆ. ಭಾರತೀಯ ಸೇನೆಯು ಮೂರು ಬಾರಿ ತನ್ನ ಪಡೆಗಳ ನಿಯೋಜನೆಯನ್ನುಹೆಚ್ಚಿಸಿದೆ. ಚಳಿಗಾಲ ತೀವ್ರಗೊಂಡ ಸಂದರ್ಭದಲ್ಲಿ ಕೂಡ ಹೆಚ್ಚುವರಿ ಪಡೆಗಳನ್ನು ಅಲ್ಲಿ ಮುಂದುವರಿಸಲು ಸೇನೆ ಉದ್ದೇಶಿಸಿದೆ.

English summary
China setting up 5G network near Demchok area and fresh constructions at the Pangong Lake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X