ರಾಷ್ಟ್ರೀಯ ದಿನಾಚರಣೆ ಪಥಸಂಚಲನ: ಪಾಕಿಸ್ತಾನಕ್ಕೆ ಚೀನಾ ಯುದ್ಧ ವಿಮಾನ

ನವದೆಹಲಿ, ಮಾರ್ಚ್ 18: ಜೈಶ್ ಎ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌ನನ್ನು ತಾಂತ್ರಿಕ ಕಾರಣವೊಡ್ಡಿ ಜಾಗತಿಕ ಉಗ್ರ ಎಂದು ಘೋಷಣೆ ಮಾಡಲು ಭಾರತಕ್ಕೆ ಅಡ್ಡಿಪಡಿಸಿದ್ದ ಚೀನಾ ಅದರ ಬೆನ್ನಲ್ಲೇ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಪಥಸಂಚಲನಕ್ಕಾಗಿ ತನ್ನ ಯುದ್ಧ ವಿಮಾನಗಳನ್ನು ರವಾನಿಸಿದೆ.

ಪಾಕಿಸ್ತಾನವು ಮಾರ್ಚ್ 23ರಂದು ತನ್ನ ರಾಷ್ಟ್ರೀಯ ದಿನವನ್ನು ಆಚರಿಸುತ್ತದೆ. 1940ರಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ದೇಶ ಸ್ಥಾಪಿಸುವ ಸಲುವಾಗಿ ಆಲ್ ಇಂಡಿಯಾ ಮುಸ್ಲಿಂ ಲೀಗ್ ಲಾಹೋರ್‌ನ ಮಿಂಟೋ ಪಾರ್ಕ್‌ನಲ್ಲಿ ಪಾಕಿಸ್ತಾನ ರೆಸೊಲ್ಯೂಷನ್‌ಗೆ ಸಹಿ ಹಾಕಿದ ದಿನವನ್ನು ಸ್ಮರಿಸಿಕೊಳ್ಳಲು ಈ ಆಚರಣೆ ಮಾಡಲಾಗುತ್ತಿದೆ.

China sends J10 fighters for Pakistan Day parade

ಪ್ರತಿ ವರ್ಷ ಈ ಸಂದರ್ಭದಲ್ಲಿ ವಿವಿಧ ಬಗೆಯ ಕಾರ್ಯಕ್ರಮಗಳು ನಡೆಯುತ್ತದೆ. ಅದರಲ್ಲಿ ವೈಮಾನಿಕ ಪಥಸಂಚಲನವೂ ಒಂದು. ಈ ವರ್ಷ ಟರ್ಕಿಯ ಎಫ್‌-16 ಮತ್ತು ಚೀನಾದ ಜೆ-10 ಯುದ್ಧ ವಿಮಾನಗಳು ಪಾಲ್ಗೊಂಡಿವೆ. ಇವುಗಳ ಜತೆಗೆ ಅಜೆರ್ಬೈಜಾನ್, ಬಹ್ರೇನ್, ಸೌದಿ ಅರೇಬಿಯಾ ಮತ್ತು ಶ್ರೀಲಂಕಾ ಸಶಸ್ತ್ರ ಪಡೆಗಳ ಪ್ಯಾರಾಟ್ರೂಪ್‌ಗಳೂ ಭಾಗವಹಿಸಲಿವೆ.

ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕಾವೇರಿದ ವಾತಾವರಣ ನಿರ್ಮಾಣವಾಗಿರುವ ಸಂದರ್ಭದಲ್ಲಿಯೇ ಚೀನಾ ತನ್ನ ಪೀಪಲ್ಸ್ ಲಿಬರೇಷನ್ ಆರ್ಮಿ ವಾಯುಪಡೆಯ ಬಾಯಿ ಏರೋಬ್ಯಾಟಿಕ್ ತಂಡದ ಎಫ್‌ 10 ವಿಮಾನವನ್ನು ಪಾಕಿಸ್ತಾನಕ್ಕೆ ಕಳುಹಿಸಿದೆ.

ಪಥ ಸಂಚಲನದಲ್ಲಿ ಯುದ್ಧ ವಿಮಾನದ ಪಾಲ್ಗೊಳ್ಳುವಿಕೆ ಎರಡು ದೇಶಗಳ ನಡುವೆ ಸೇನಾ ಒಪ್ಪಂದ ಬೆಳೆಯುತ್ತಿದೆ ಎಂಬುದರ ಸೂಚಕವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+