ಭಾರತ ಗಡಿಗೆ ಸಮೀಪ ಟಿಬೆಟ್ ನಲ್ಲಿ ಚೀನಾದಿಂದ ಶಸ್ತ್ರ ಸಂಗ್ರಹ

ನವದೆಹಲಿ, ಜುಲೈ 19: ಭಾರತ ಮತ್ತು ಚೀನ ನಡುವೆ ಸಿಕ್ಕಿಂನ ಧೋಕ್ಲಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಚೀನಾ ಟಿಬೆಟ್ ಗೆ ಸಾವಿರಾರು ಟನ್ ಸೇನಾ ಶಸ್ತ್ರಾಸ್ತ್ರಗಳನ್ನು ರವಾನಿಸಿದೆ ಎಂಬ ವರದಿಗಳು ಬರುತ್ತಿವೆ. ಭೂ ಸೇನಾ ವಾಹನಗಳೂ ಇದರಲ್ಲಿ ಸೇರಿವೆ.

ಭಾರತದ ಜತೆಗೆ ಗಡಿ ಸಮಸ್ಯೆ ಇರುವಾಗಲೇ ಚೀನಾದ ಸೇನೆ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಟಿಬೆಟ್ ನ ಕುನ್ಲುನ್ ಬೆಟ್ಟ ಪ್ರದೇಶಕ್ಕೆ ಶಸ್ತ್ರಾಸ್ತ್ರಗಳನ್ನು ರವಾನಿಸಿದೆ ಎಂದು ಹಾಂಕ್ ಕಾಂಗ್ ಮೂಲದ ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

China moved troops, heavy equipment to Tibet amidst standoff with India

ಈ ಕುರಿತು ಚೈನಾ ಮಾರ್ನಿಂಗ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಶಾಂಘೈ ಮೂಲದ ಸೇನಾ ತಜ್ಞ ನಿ ಲೆಕ್ಸಿಂಗ್, "ಭಾರತದ ಜತೆಗೆ ಉದ್ವಿಗ್ನ ಪರಿಸ್ಥಿತಿಗೆ ಸಂಬಂಧಿಸಿದಂತೆಯೇ ಈ ಮಿಲಿಟರಿ ಸರಕುಗಳನ್ನು ಒಯ್ದಿರಬಹುದು. ಈ ಮೂಲಕ ಭಾರತ ಮಾತುಕತೆಗೆ ಬರಬಹುದು ಮತ್ತು ಚೀನಾದ ಬೇಡಿಕೆಗಳಿಗೆ ತಲೆಬಾಗಬಹುದು ಎನ್ನುವ ಉದ್ದೇಶ ಇದರ ಹಿಂದೆ ಇರಬಹುದು. ಯಾವತ್ತೂ ರಾಜತಾಂತ್ರಿಕ ಮಾತುಕತೆಗಳು ಮಿಲಿಟರಿಯ ಹಿನ್ನಲೆಯಲ್ಲಿ ನಡೆಯುತ್ತವೆ," ಎಂದು ಹೇಳಿದ್ದಾರೆ.

ಹಾಗಂಥ ಯಾರೂ ಭಾರತದ ಜತೆಗಿನ ಉದ್ವಿಗ್ನ ಪರಿಸ್ಥಿತಿಯ ಕಾರಣಕ್ಕೇನೂ ಈ ರೀತಿ ಸೇನಾ ಶಸ್ತ್ರಾಸ್ತ್ರಗಳನ್ನು ಟಿಬೆಟ್ ಗೆ ರವಾನಿಸಿದೆ ಎಂದು ಬಹಿರಂಗ ಹೇಳಿಕೆ ನೀಡಿಲ್ಲ. ಆದರೆ ಇತ್ತೀಚಿನ ಚೀನಾದ ನಡೆಗಳನ್ನು ನೋಡಿದರೆ ಮಾತ್ರ ಸಾಂಭಾವ್ಯ ಯುದ್ಧಕ್ಕೆ ಚೀನಾ ಸಿದ್ಧತೆಯಲ್ಲಿ ತೊಡಗಿದಂತೆ ಕಂಡುಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+