Deepavali 2023: ಭಾರತೀಯ ದೀಪಾವಳಿಯಿಂದ ಚೀನಾಗೆ 1 ಲಕ್ಷ ಕೋಟಿ ರೂಪಾಯಿ ನಷ್ಟ !
ಇಡೀ ದೇಶವೇ ದೀಪಾವಳಿ ಹಬ್ಬದ ಸಂಭ್ರಮದಲ್ಲಿದೆ, ದೇಶಾದ್ಯಂತ ಅದ್ದೂರಿಯಾಗಿ ಹಬ್ಬವನ್ನು ಆಚರಿಸಲು ಸಿದ್ದತೆ ಮಾಡಿಕೊಳ್ಳಳಾಗುತ್ತಿದೆ. ಹಬ್ಬವೆಂದರೆ ಅದು ಬರಿ ಆಚರಣೆಯಷ್ಟೇ ಅಲ್ಲ, ಆರ್ಥಿಕತೆಗೂ ಕೂಡ ದೊಡ್ಡ ಕೊಡುಗೆ ನೀಡುತ್ತದೆ, ದೀಪಾವಳಿ ಸಂದರ್ಭದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರ ನಡೆಯುತ್ತಿದೆ.
ಈ ಬಾರಿ ಭಾರತೀಯ ದೀಪಾವಳಿಯಿಂದ ನೆರೆಯ ರಾಷ್ಟ್ರ ಚೀನಾ ಸುಮಾರು 1 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಲಿದೆ. ಎಎನ್‌ಐ ವರದಿ ಮಾಡಿರುವ ಪ್ರಕಾರ, ದೀಪಾವಳಿ ಹಬ್ಬದ ವಸ್ತುಗಳಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಚೀನಾ ಸುಮಾರು 1 ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳಲಿದೆ ಎಂದು ಹೇಳಿದೆ.

ಉತ್ತರ ಭಾರತದಲ್ಲಿ ಆಚರಣೆ ಮಾಡುವ ಧನ್ತೇರಸ್ ಸಂದರ್ಭದಲ್ಲಿ ಲೋಹಗಳು, ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಖರೀದಿಸಲು ಮಂಗಳಕರ ದಿನವೆಂದು ಹೇಳಲಾಗಿದ್ದು, ಇದು ವ್ಯಾಪಾರಿಗಳಿಗೆ ಪ್ರಮುಖ ದಿನವಾಗಿದೆ.
ಸ್ಥಳೀಯ ಉತ್ಪನ್ನಗಳನ್ನು ಕೊಳ್ಳಲು ಮನವಿ
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಅವರು ಈ ಧನ್ತೇರಸ್‌ನಲ್ಲಿ ಅಂದಾಜು 50 ಸಾವಿರ ಕೋಟಿ ರೂಪಾಯಿಗಳ ವ್ಯಾಪಾರ ವಹಿವಾಟು ನಡೆಸುವ ಮುನ್ಸೂಚನೆ ನೀಡಿದ್ದಾರೆ.
ಖಂಡೇಲ್ವಾಲ್, ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ, ಈ ಹಬ್ಬದ ಸಂದರ್ಭದಲ್ಲಿ ವಿವಿಧ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಜನರಿಗೆ ಕರೆ ನೀಡಿದರು.
"ಪ್ರಧಾನಿ ನರೇಂದ್ರ ಮೋದಿಯವರ ಸ್ಥಳೀಯರ ವ್ಯಾಪಾರ (Vocal for Local) ದೀಪಾವಳಿಯ ಕರೆಗೆ ದೇಶದ 9 ಕೋಟಿ ಉದ್ಯಮಿಗಳು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಸಂಪೂರ್ಣ ಬೆಂಬಲ ನೀಡುತ್ತದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮನವಿ ಮಹಿಳಾ ಶಕ್ತಿಗೆ ಪೂರಕವಾಗಿ ನಾವು ಎಲ್ಲಾ ಮಹಿಳಾ ಉದ್ಯಮಿಗಳಿಗೆ ಸಣ್ಣ ಡಯಾಗಳಿಂದ ಹಿಡಿದು ಅಂಗಡಿಗಳನ್ನು ನಡೆಸುವವರವರೆಗೆ ದೇಶದ ಮಾರುಕಟ್ಟೆಯನ್ನು ಒದಗಿಸುತ್ತಿದ್ದೇವೆ. ನೀವು ಸಹ ಮಹಿಳೆಯರಿಂದ ಶಾಪಿಂಗ್ ಮಾಡಿ ಮತ್ತು ಅವರ ಮನೆಗಳಿಗೂ ಭೇಟಿ ನೀಡಿ" ಎಂದು ಕರೆ ನೀಡಿದ್ದಾರೆ.
ನರೇಂಧ್ರ ಮೋದಿ ಮನವಿ
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಉದ್ಯಮಶೀಲತೆ ಮತ್ತು ಸೃಜನಶೀಲ ಮನೋಭಾವವನ್ನು ಆಚರಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ. "ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ಮತ್ತು ನಂತರ ನಮೋ (NaMo) ಅಪ್ಲಿಕೇಶನ್‌ನಲ್ಲಿ ಉತ್ಪನ್ನ ಅಥವಾ ತಯಾರಕರೊಂದಿಗೆ ಸೆಲ್ಫಿ ಪೋಸ್ಟ್ ಮಾಡಿ. ಸಕಾರಾತ್ಮಕ ಮನೋಭಾವವನ್ನು ಹರಡಲು ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಆಹ್ವಾನಿಸಿ" ಎಂದು ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಚೀನಾದೊಂದಿಗಿನ ಭಾರತದ ದ್ವಿಮುಖ ವಾಣಿಜ್ಯವು 2021-22ರಲ್ಲಿ $115.42 ಶತಕೋಟಿಯಿಂದ 2022-23ರ ಅವಧಿಯಲ್ಲಿ ಸುಮಾರು 1.5 ಪ್ರತಿಶತದಷ್ಟು ಕುಸಿತ ಕಂಡಿದ್ದು, $113.83 ಶತಕೋಟಿಯಷ್ಟಿದೆ.
2022-23ರಲ್ಲಿ ಚೀನಾಕ್ಕೆ ರಫ್ತು ಸುಮಾರು 28 ಪ್ರತಿಶತದಷ್ಟು ಕುಸಿದು $15.32 ಶತಕೋಟಿಗೆ ತಲುಪಿದೆ, ಆದರೆ ಕಳೆದ ಆರ್ಥಿಕ ವರ್ಷದಲ್ಲಿ ಆಮದುಗಳು 4.16 ಶೇಕಡಾ ಹೆಚ್ಚಾಗಿದ್ದು $98.51 ಶತಕೋಟಿಗೆ ಏರಿದೆ. 2021-22ರಲ್ಲಿ $72.91 ಬಿಲಿಯನ್‌ಗೆ ಹೋಲಿಸಿದರೆ ಕಳೆದ ಹಣಕಾಸು ವರ್ಷದಲ್ಲಿ ವ್ಯಾಪಾರದ ಅಂತರವು $83.2 ಬಿಲಿಯನ್‌ಗೆ ವಿಸ್ತರಿಸಿದೆ.












Click it and Unblock the Notifications